Homeರಾಜ್ಯಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೈಕ್‌ ಅಪಘಾತದಲ್ಲಿ ನಟ ಸಂಚಾರಿ ವಿಜಯ್‌ ಗೆ ಗಂಭೀರ ಗಾಯ..

ಬೆಂಗಳೂರು :  ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್ ಗೆ ಅಪಘಾತವಾಗಿದ್ದು, ಸಂಚಾರಿ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಟ ಸಂಚಾರಿ ವಿಜಯ್ ತಲೆಗೆ ಗಂಭೀರ ಗಾಯವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮೆದುಳಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿರುವುದರಿಂದ  24 ಗಂಟೆವರೆಗೆ ನಿಗಾ ವಹಿಸಲಾಗಿದೆ ಎಂದು ಡಾ.ಅರುಣ್ ಮಾಹಿತಿ ನೀಡಿದ್ದಾರೆ.

ಸ್ನೇಹಿತ ವಿನಯ್ ಜೊತೆ ಬರುವಾಗ  ನಿನ್ನೆ ರಾತ್ರಿ ಜೆಪಿ ನಗರದ 7ನೇ ಕ್ರಾಸ್‌ನಲ್ಲಿ ರಾತ್ರಿ 11.30ರ ಸುಮಾರಿಗೆ ಬೈಕ್ ಅಪಘಾತ ಸಂಭವಿಸಿದೆ. ವಿನಯ್ ಗೂ ಬೆನ್ನು ಮೂಳೆ ಮುರಿದಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ. ಅಪೊಲೋ ಆಸ್ಪತ್ರೆಗೆ  ನಟ ನೀನಾಸಂ ಸತೀಶ್ ಭೇಟಿ ನೀಡಿದ್ದಾರೆ.

ನಟ ಸಂಚಾರಿ ವಿಜಯ್ ಚಲನಚಿತ್ರ ಮತ್ತು ನಾಟಕದಲ್ಲಿ ಅಭಿನಯ ಮಾಡುತ್ತಿದ್ದರು. ‘ಸಂಚಾರಿ’ ಹೆಸರಿನ ನಾಟಕ ತಂಡದಲ್ಲಿ ವಿಜಯ್ ಗುರುತಿಸಿಕೊಂಡಿದ್ದರು. ಬಿ.ವಿಜಯ್ ಕುಮಾರ್ ಆಗಿರುವ ಅವರು ಸಂಚಾರಿ ನಾಟಕದಿಂದ ಸಂಚಾರಿ ವಿಜಯ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದಾರೆ. ನಟ ಸಂಚಾರಿ ವಿಜಯ್ 2014ರ ಸಾಲಿನ 62ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments