ಸ್ಯಾಂಡಲ್ವುಡ್ ನಟ ರಘು ಭಟ್ ಸಿನಿಮೀಯ ರೀತಿಯಲ್ಲಿ ದರೋಡೆಕೋರರ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಗುರುವಾರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಗರದ ಸಿಗ್ಮಾ ಮಾಲ್ ನಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನೋಡಿ ಮನೆಗೆ ತೆರಳುತ್ತಿದ್ದಾಗ ಹಲಸೂರು ಠಾಣಾ ವ್ಯಾಪ್ತಿಯ ಆರ್ ಎಂ ಜೆಡ್ ಬಳಿ ಇಬ್ಬರು ದುಷ್ಕರ್ಮಿಗಳು ಕಾರೊಂದನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಚಾಲಕನನ್ನು ಬೆದರಿಸುತ್ತಿದ್ದರು. ಅದನ್ನು ಗಮನಿಸಿದ ರಘುಭಟ್ ಪತ್ನಿ ಸುಗುಣ ರಘುಭಟ್ ಗಮನಕ್ಕೆ ತಂದಿದ್ದಾರೆ. ಕೂಡಲೇ ರಘುಭಟ್ ಕಾರನ್ನು ಯೂರ್ಟನ್ ಮಾಡಿದಾಗ ದರೋಡೆಕೋರರು ಕಾಲ್ಕಿತ್ತಿದ್ದಾರೆ. ಆಗ ರಘುಭಟ್ ಸಿನಿಮೀಯ ರೀತಿಯಲ್ಲಿ ಅವರಿಬ್ಬರನ್ನು ಚೇಸ್ ಮಾಡಿದ್ದಾರೆ. ಸುಮಾರು ಎರಡು ಕಿಲೋಮೀಟರ್ ಬೆನ್ನಟ್ಟಿದ ಬಳಿಕ ಸೆಂಟ್ ಜಾನ್ ಶ್ರೀ ಸರ್ಕಲ್ ಬಳಿ ಕಳ್ಳರು ಸಿಕ್ಕಿಬಿದ್ದಿದ್ದಾರೆ. ಬಳಿಕ 100 ಗೆ ಕಾಲ್ ಮಾಡಿ ವಿಷಯ ತಿಳಿಸಿ, ಹಲಸೂರು ಪೊಲೀಸರಿಗೆ ದುಷ್ಕರ್ಮಿಗಳನ್ನು ಒಪ್ಪಿಸಿ ರಘು ಮನೆಗೆ ತೆರಳಿದ್ದಾರೆ.
ಸಿನಿಮೀಯ ರೀತಿಯಲ್ಲಿ ದರೋಡೆಕೋರರನ್ನು ಬೆನ್ನಟ್ಟಿ ಹಿಡಿದ ನಟ ರಘು ಭಟ್ !
Recent Comments
‘ಗಂಡ ಸತ್ತು 2 ತಿಂಗಳು ಕಳೆದಿಲ್ಲ, ರಾಜಕೀಯ ಬೇಕಿತ್ತಾ’? : ಸುಮಲತಾ ವಿರುದ್ಧ ನಾಲಿಗೆ ಹರಿಬಿಟ್ಟ ಹೆಚ್.ಡಿ ರೇವಣ್ಣ..!
on
ಭಾರತ ದಾಳಿ ಮಾಡಿದ್ರೆ ಪ್ರತ್ಯುತ್ತರ ನೀಡುತ್ತಂತೆ ಪಾಕ್..! ಹಳೇ ರಾಗಕ್ಕೆ ತಾಳ ಹಾಕಿದ ರಣಹೇಡಿ ರಾಷ್ಟ್ರದ ಪ್ರಧಾನಿ..!
on
ಶವವಂಚಕ!
on