Home ಸಿನಿ ಪವರ್ ``ಕೊರೋನಾ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ'' : ಕಿಚ್ಚ ಸುದೀಪ್​ಗೆ ನಟ ಚೇತನ್ ಹೀಗಂದಿದ್ದೇಕೆ?

“ಕೊರೋನಾ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ” : ಕಿಚ್ಚ ಸುದೀಪ್​ಗೆ ನಟ ಚೇತನ್ ಹೀಗಂದಿದ್ದೇಕೆ?

‘ಜನತಾ ಚಪ್ಪಾಳೆ’ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾಡಿರೋ ಟ್ವೀಟ್​ಗೆ ನಟ ‘ಮೈನಾ’ ಚೇತನ್ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಆ ಟ್ವೀಟ್, ರೀ ಟ್ವೀಟ್​ಗಳು ತುಂಬಾ ಸದ್ದು ಮಾಡ್ತಾ ಇವೆ.
ಕೊರೋನಾ ನಿಯಂತ್ರಣದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆ ನೀಡಿದ್ರು. ಅಲ್ಲದೆ ವೈದ್ಯರು, ದಾದಿಯರು ಸೇರಿದಂತೆ ಸೇವೆ ಸಲ್ಲಿಸುತ್ತಿರೋರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಜನತಾ ಕರ್ಫ್ಯೂ ದಿನವಾದ ನಿನ್ನೆ ಸಂಜೆ 5 ಗಂಟೆಗೆ ಎಲ್ರೂ ಕೂಡ ಅವರವರ ಮನೆ ಮುಂದೆ, ಟೆರಸ್​ ಮೇಲೆ ನಿಂತು ಚಪ್ಪಾಳೆ ಹೊಡೆದು ಗೌರವ ಸಲ್ಲಿಸಲು ಮೋದಿ ಕರೆ ಕೊಟ್ಟಿದ್ರು. ಮೋದಿ ಕರೆಗೆ ದೇಶ ವ್ಯಾಪಿ ಬೆಂಬಲ ವ್ಯಕ್ತವಾಗಿತ್ತು.
ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೋದಿ ಕರೆಗೆ ಸ್ಪಂದಿಸುವಂತೆ ಅಭಿಮಾನಿಗಳಿಗೆ ಕೇಳಿಕೊಂಡಿದ್ರು. ಪ್ರಧಾನಿ ಮೋದಿ ನಿಮ್ಮ ಮೂಲಕ ಎನರ್ಜಿ ಮೆಡಿಸನ್ ಸೃಷ್ಟಿಸ್ತಿದ್ದಾರೆ. ನಿಮ್ಮ ಮನೆ ಮುಂದೆ ಅಥವಾ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟುವಂತೆ ಮಹಿಳೆಯೊಬ್ರು ಹೇಳಿರೋ ವಿಡಿಯೋವನ್ನು ಸುದೀಪ್ ಶೇರ್ ಮಾಡಿದ್ರು. ಅಲ್ಲದೆ ” ದಯವಿಟ್ಟು ಇದ್ರಲ್ಲಿ ಭಾಗವಹಿಸಿ… ನಾವು ಏನಾದ್ರೂ ಕಳೆದುಕೊಳ್ತೀವಾ? ಇಲ್ಲ, ಏನಾದ್ರು ಲಾಭವಾಗುತ್ತಾ? ಬಹುಶಃ ಆಗಬಹುದು..! ಕನಿಷ್ಟ ಪಕ್ಷ ಪ್ರಯತ್ನವಾದ್ರು ಮಾಡೋಣ. ಯಾಕಂದ್ರೆ ಇದು ನಮ್ಮೆಲ್ಲರ ಜೀವದ ವಿಚಾರ” ಎಂದು ಸುದೀಪ್ ಟ್ವೀಟ್ ಮಾಡಿದ್ದರು. ಜೊತೆಗೆ ತಾವು ಕೂಡ ಮನೆಯ ಛಾವಣಿ ಮೇಲೆ ನಿಂತು ಚಪ್ಪಾಳೆ ತಟ್ಟಿದ್ದರು.
ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಚೇತನ್, “ ಸುದೀಪ್ ಸರ್… ಚಿತ್ರರಂಗದಲ್ಲಿ ನೀವು ಮಾಡಿರೋ ಕೆಲಸಗಳನ್ನು ಮತ್ತು ಸಾಧನೆಗಳನ್ನು ನಾನು ಗೌರವಿಸ್ತೀನಿ. ಅಪ್ಪ, ಅಮ್ಮ ಇಬ್ಬರು ವೈದ್ಯರು. ಅವರ ಮಗನಾಗಿ ವೈದ್ಯರಿಗೆ ಪ್ರತಿಯೊಬ್ಬರು ಗೌರವ ನೀಡಬೇಕಾಗುತ್ತದೆ ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ, ಈ ರೀತಿಯ ಅವೈಜ್ಞಾನಿಕವಾದ ಎನರ್ಜಿ ಮೆಡಿಸಿನ್ ಥಿಯರಿಗಳನ್ನು ಹರಡುವ ಮೂಲಕ ಅಲ್ಲ. ಇಂತಹ ವಿಚಾರಗಳು ನಮ್ಮನ್ನು ತಪ್ಪುದಾರಿಗೆ ಕರೆದೊಯ್ಯುತ್ತವೆ. ಅಲ್ಲದೆ, ಮೌಢ್ಯ ಬಿತ್ತುತ್ತವೆ. ವಿಜ್ಞಾನದ ಮೂಲಕ ಕೊರೋನಾ ವಿರುದ್ಧ ಹೋರಾಡೋಣ” ಎಂದು ಹೇಳಿದ್ದಾರೆ.

 

LEAVE A REPLY

Please enter your comment!
Please enter your name here

- Advertisment -

Most Popular

ಆಧುನಿಕ ಭಗೀರಥ ಕಾಮೇಗೌಡರಿಗೆ ಅನಾರೋಗ್ಯ; ದಿಢೀರ್ ಆಸ್ಪತ್ರೆಗೆ ದಾಖಲು.

ಮಂಡ್ಯ: ಮಂಡ್ಯದ ಕೆರೆ ಕಾಮೇಗೌಡರು ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ. ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ನಲ್ಲಿ ಪ್ರಶಂಸೆಗೆ ಒಳಪಟ್ಟ ಕೆರೆ ಕಾಮೇಗೌಡರು ದೇಶ ಮಾತ್ರವಲ್ಲ, ವಿಶ್ವದ ಹಲವೆಡೆ...

ಮಳೆ ಮಧ್ಯೆಯೂ ಕರ್ತವ್ಯ ನಿಷ್ಠೆ : ಎಸ್​.ಪಿ ಮೆಚ್ಚುಗೆ

ಬಾಗಲಕೋಟೆ: ಜಿಲ್ಲೆಯ ಕಲಾದಗಿಯಲ್ಲಿ ಗ್ರಾಮದಲ್ಲಿ ಸೋಂಕಿತರು ಹೆಚ್ಚಿದ ಪರಿಣಾಮ ಗ್ರಾಮ ಸೀಲ್ ಡೌನ್ ಮಾಡಲಾಗಿದೆ.ಮಳೆ ಮಧ್ಯೆಯೂ ಪೋಲಿಸ ಪೇದೆ ಕತ೯ವ್ಯ ನಿಷ್ಠೆ ಮೆರದ ವಿಡಿಯೋ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.ಸೀಲ್ ಡೌನ್ ಆಗಿರೋ...

ಗಮನ ಸೆಳೆದ ‘ಮಾಸ್ಕ್ ಪರಾಟಾ..!’

ಕರೋನಾದಿಂದ ಬಚಾವಾಗಲು ಇರುವ ಬಹು ಮುಖ್ಯ ಅಸ್ತ್ರ ಎಂದರೆ ಅದು ಫೇಸ್ ಮಾಸ್ಕ್. ಎಲ್ಲರೂ ಫೇಸ್ ಮಾಸ್ಕ್ ಬಳಸಿ ಎಂದು ಸರ್ಕಾರ ಸೇರಿದಂತೆ, ಸಾಕಷ್ಟು ಮಂದಿ ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಇಲ್ಲೊಂದು ಹೊಟೆಲ್...

ಚಾರ್ಮಾಡಿ ಘಾಟ್​​ನಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ

ಚಿಕ್ಕಮಗಳೂರು : ಮಂಗಳೂರು-ಚಿಕ್ಕಮಗಳೂರು ಮಧ್ಯೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ನಲ್ಲಿ ಭಾರೀ ಮಳೆಯಿಂದಾಗಿ ಮಣ್ಣು ಕುಸಿಯುವ ಭೀತಿ ಎದುರಾಗಿದ್ದು ಇದನ್ನು ತಪ್ಪಿಸಲು ಘಾಟ್ ನಲ್ಲಿ ಸಂಜೆ 7 ಗಂಟೆಯಿಂದ ಬೆಳಗ್ಗೆ 7...

Recent Comments