ಶಾಸಕ ಸಿ.ಟಿ ರವಿ ವಿರುದ್ಧ ಎಫ್​ಐಆರ್ ದಾಖಲು

0
318

ತುಮಕೂರು : ಅಪಘಾತದಲ್ಲಿ ಇಬ್ಬರು ಮೃತಪಟ್ಟಿರೋ ಘಟನೆಗೆ ಸಂಬಂಧಪಟ್ಟಂತೆ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರ ವಿರುದ್ಧ ಕುಣಿಗಲ್​ ಪೊಲೀಸ್​ ಸ್ಟೇಷನ್​ನಲ್ಲಿ ಎಫ್​ಐಆರ್ ದಾಖಲಾಗಿದೆ.
ಕುಣಿಗಲ್ ತಾಲೂಕಿನ ಆಲಪ್ಪನಗುಡ್ಡ ಬಳಿ ನಿಂತಿದ್ದ ಕಾರಿಗೆ ಸಿ.ಟಿ ರವಿ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಸೂರೇನಹಳ್ಳಿ ಶಶಿಕುಮಾರ್ (28) ಮತ್ತು ಸುನೀಲ್​ ಗೌಡ (27) ಮೃತಪಟ್ಟಿದ್ದಾರೆ. ಮದ್ಯಪಾನ ಮಾಡಿ ಶಾಸಕರು ಕಾರು ಚಲಾಯಿಸಿದ್ದಾರೆ ಅನ್ನೋದು ಮೃತ ಯುವಕರ ಜೊತೆಯಲ್ಲಿದ್ದವರ ಆರೋಪ.
ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿ.ಟಿ ರವಿ ಅವರ ವಿರುದ್ಧ ಕುಣಿಗಲ್ ಠಾಣೆಯಲ್ಲಿ ಸೆಕ್ಷನ್ 279 ( ಬೇಜಬ್ದಾರಿಯಿಂದ ವಾಹನ ಚಾಲನೆ ಮಾಡುವುದು),304(a) (ನಿರ್ಲಕ್ಷ್ಯದಿಂದ ಇನ್ನೊಬ್ಬರ ಜೀವಕ್ಕೆ ಎರವಾಗುವುದು) ಅಡಿಯಲ್ಲಿ ದೂರು ದಾಖಲಾಗಿದೆ.

https://www.powertvnews.in/ct-ravi-car-accident-near-kunigal/

 

LEAVE A REPLY

Please enter your comment!
Please enter your name here