Sunday, October 2, 2022
Powertv Logo
Homeಕ್ರೈಂಎಸಿಬಿ ದಾಳಿ; ಮಂಗಳೂರಿನ ದಯಾಳ್ ಸುಂದರ್ ಅಕ್ರಮ ಸಂಪತ್ತು ಪತ್ತೆ

ಎಸಿಬಿ ದಾಳಿ; ಮಂಗಳೂರಿನ ದಯಾಳ್ ಸುಂದರ್ ಅಕ್ರಮ ಸಂಪತ್ತು ಪತ್ತೆ

ಮಂಗಳೂರು: ಇಂದು ಕರ್ನಾಟಕದಾದ್ಯಂತ ಭ್ರಷ್ಟರ ಮೇಲೆ ನಡೆದಿರುವ ಎಸಿಬಿ ದಾಳಿಯಲ್ಲಿ  ಮಂಗಳೂರಿನ
ಮೆಸ್ಕಾಂ ಅಧಿಕಾರಿಯ ಮನೆಯಲ್ಲಿ ಅಕ್ರಮ ಸಂಪತ್ತು ಪತ್ತೆಯಾಗಿದೆ. ಮಂಗಳೂರು ಮತ್ತು ಮೈಸೂರಿನಲ್ಲಿ ಆಸ್ತಿ ಮಾಡಿಕೊಂಡಿರುವ ದಯಾಳ್ ಸುಂದರ್ ಹೆಸರಿನಲ್ಲಿ ಮೈಸೂರಿನಲ್ಲಿ 2 ಸೈಟ್, ಹುಣಸೂರಿನಲ್ಲಿ ಒಂದು ಸೈಟ್ ಮತ್ತು 2 ಎಕರೆ ಕೃಷಿ ಭೂಮಿಯ ದಾಖಲೆ ಪತ್ರಗಳು ಪತ್ತೆಯಾಗಿವೆ.

ಕೋಟ್ಯಾಂತರ ಮೌಲ್ಯದ ಜಾಗದ ದಾಖಲೆಗಳನ್ನು ವಶಕ್ಕೆ ಪಡೆದ ಎಸಿಬಿ ಟೀಂ ಬರಿ ಇದಷ್ಟೇ ಅಲ್ಲದೆ ಮಂಗಳೂರಿನ ಕದ್ರಿ ಕಂಬಳ ಬಳಿ ಡಬಲ್ ಬೆಡ್ ರೂ ಫ್ಲಾಟ್ ಪತ್ತೆ ಮಾಡಿದ್ದಾರೆ. ಮಂಗಳೂರಿನ ಬೆಂದೂರ್ ವೆಲ್ ನ ಬಾಡಿಗೆ ಮನೆಯಲ್ಲಿ 4 ಕೆ.ಜಿ ಬೆಳ್ಳಿ, 300 ಗ್ರಾಂ ಚಿನ್ನ ಹಾಗೂ ನಗದು ಪತ್ತೆ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಮಂಗಳೂರಿನ ಮೆಸ್ಕಾಂ ಇಲಾಖೆಯಲ್ಲಿರುವ ಮೈಸೂರು ಮೂಲದ ದಯಾಳ್ ಸುಂದರ್
ಹೆಸರಿನಲ್ಲಿ ಹಲವೆಡೆ ಸೈಟುಗಳಿರುವುದು ಪತ್ತೆಯಾಗಿವೆ. ಮಂಗಳೂರು ಎಸಿಬಿ ಎಸ್ಪಿ, ಡಿವೈಎಸ್ಪಿ ಪ್ರಕಾಶ್, ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ತಂಡದಿಂದ ಈ  ದಾಳಿ ನಡೆದಿದೆ.

- Advertisment -

Most Popular

Recent Comments