ಯಂಗ್​ ರೆಬೆಲ್​ ಸ್ಟಾರ್​ಗೆ ಚಾಲೆಂಜಿಂಗ್​ ಸ್ಟಾರ್ ವಿಶ್​​..!

0
376

ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್​ ಇಂದು 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಂದೆ ಅಂಬರೀಶ್​ ವಿಧಿವಶರಾಗಿ ಇನ್ನೂ ಒಂದು ವರ್ಷವಾಗಿಲ್ಲ. ಹೀಗಾಗಿ ಅಭಿ ತನ್ನ ಬರ್ತ್​ಡೇಯನ್ನು ಆಚರಿಸಿಕೊಂಡಿಲ್ಲ. ತಂದೆಯ ಅಗಲಿಕೆ ಹಿನ್ನೆಲೆಯಲ್ಲಿ ತಾನು ಹುಟ್ಟುಹಬ್ಬವನ್ನು ಸಂಭ್ರಮಿಸ್ತಿಲ್ಲ. ಹೀಗಾಗಿ ತನ್ನ ಹುಟ್ಟುಹಬ್ಬ ಆಚರಣೆಗಂತ ಯಾರೂ ಬರ್ಬೇಡಿ ಅಂತ ಅಭಿ ತನ್ನ ಫ್ಯಾನ್ಸ್​ಗೂ ಮನವಿ ಮಾಡಿಕೊಂಡಿದ್ದರು. ಆದ್ದರಿಂದ ಇಂದು ಅಭಿ ಬರ್ತ್​ಡೇ ಜೋಶ್ ಎಲ್ಲೂ ಕಂಡು ಬಂದಿಲ್ಲ. ಆದರೆ, ಸ್ನೇಹಿತರು, ಸಿನಿರಂಗದ ಮಿತ್ರರು, ಹಿತೈಷಿಗಳು ಅಭಿಗೆ ವಿಶ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​​ ಮಾಡ್ತಿದ್ದಾರೆ.
ಅಂತೆಯೇ ಅಭಿಯ ಹಿರಿಯಣ್ಣನಂತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ”ನನ್ನ ಪ್ರೀತಿಯ ಅಭಿಷೇಕ್​ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ನಿನ್ನ ಇಷ್ಟಾರ್ಥಗಳೆಲ್ಲಾ ಈಡೇರಲಿ” ಅಂತ ದರ್ಶನ್ ಟ್ವೀಟ್ ಮಾಡಿದ್ದಾರೆ.

LEAVE A REPLY

Please enter your comment!
Please enter your name here