ರಿಯಲ್​ ಹೀರೊ ಅಭಿನಂದನ್ ಮುಂದೆ ನಾವು ಡಮ್ಮಿ : ನಟ ದರ್ಶನ್

0
150

ಮೈಸೂರು : ವಿಂಗ್​ ಕಮಾಂಡರ್ ಅಭಿನಂದನ್ ಅವರು ರಿಯಲ್ ಹೀರೊ. ಅವರ ಮುಂದೆ ನಾವು ಡಮ್ಮಿ ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಮೈಸೂರಿನಲ್ಲಿ ವನ್ಯಜೀವಿ ಫೋಟೋಗ್ರಫಿ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಇನ್ನೊಬ್ಬರ ನೆಲೆಯಲ್ಲಿ ನಿಂತು ಮಾತಾಡೋಗೆ ಗಟ್ಸ್​ ಬೇಕು. ನಾನು ಅಭಿನಂದನ್ ಅವರ ಮಾತುಗಳನ್ನು ಕೇಳಿದ್ದೇನೆ. ಅವರೇ ನಿಜವಾದ ಹೀರೊ. ಅವರೆದುರು ನಾವೆಲ್ಲಾ ಡಮ್ಮಿ’ ಎಂದರು. ಅಭಿನಂದನ್ ಅವರು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ಸು ಬರ್ತಾ ಇರೋದಕ್ಕೆ ಬಹಳ ಸಂತೋಷವಾಗ್ತಾ ಇದೆ ಎಂದರು.
ವಿಶ್ವ ವನ್ಯಜೀವಿ ದಿನಾಚರಣೆ ಪ್ರಯುಕ್ತ ಇಂದಿನಿಂದ, ಅಂದರೆ ಮಾರ್ಚ್ 1, 2 ಮತ್ತು 3ರಂದು ಮೈಸೂರಿನ ಸಂದೇಶ್​ ದಿ ಪ್ರಿನ್ಸ್​ನಲ್ಲಿ ದರ್ಶನ್ ತಾವು ತೆಗೆದ ಫೋಟೋಗಳ ಪ್ರದರ್ಶನ ಮಾಡುತ್ತಿದ್ದಾರೆ. ಈ ಎಕ್ಸಿಬಿಷನ್​ನಲ್ಲಿ ಫೋಟೋಕೊಂಡವರಿಗೆ ದರ್ಶನ್ ಅವರ ಆಟೋಗ್ರಾಫ್​ ಕೂಡ ಸಿಗುತ್ತೆ. ಫೋಟೋಗಳ ಮಾರಾಟದಿಂದ ಬರುವ ಹಣವನ್ನು ದರ್ಶನ್ ಅರಣ್ಯ ಇಲಾಖೆಗೆ ಕೊಡಲಿದ್ದಾರೆ. ಅರಣ್ಯ ಇಲಾಖೆ ಈ ಹಣವನ್ನು ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಲಿದೆ.

LEAVE A REPLY

Please enter your comment!
Please enter your name here