ಬೆಂಗಳೂರು : ಸಿದ್ದರಾಮಯ್ಯ ಮಾಡಿರೋ ಸಾಲವನ್ನು ಈಗಿನ ಸರ್ಕಾರ ತಿರಿಸೋಕೆ ಆಗ್ತಾ ಇಲ್ಲ ಎಂದು ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದಲ್ಲಿ ಎಎಪಿ ರಾಜ್ಯ ಮುಖಂಡ ಭಾಸ್ಕರ್ ರಾವ್ ತಿಳಿಸಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕ ಸರ್ಕಾರ ಏಳುವರ ಲಕ್ಷ ಕೋಟಿ ಸಾಲ ಮಾಡಿದೆ. ಆದರೆ ದೆಹಲಿಯ ಕೇಜ್ರೀವಾಲ್ ಸರ್ಕಾರ ಸಾಲವನ್ನೇ ಮಾಡಿಲ್ಲ. ಕಳೆದ ಏಳುವರೆ ವರ್ಷಗಳಲ್ಲಿ ಯಾವುದರ ಮೇಲೂ ತೆರಿಗೆಯನ್ನು ಕೇಜ್ರಿವಾಲ್ ಸರ್ಕಾರ ಹೆಚ್ಚಿಸಿಲ್ಲ.
ಅದುವಲ್ಲದೇ ಅವರಿಗೆ ಹಣ ಎಲ್ಲಿಂದ ಬಂತು ಅಂದರೆ ಭ್ರಷ್ಟಾಚಾರವನ್ನು ಸಂಪೂರ್ಣ ಸ್ಥಗಿತ ಮಾಡಿದ್ದಾರೆ. ಮತ್ತು ಹೊರಗೆ ಹೋಗುವ ಸೋರಿಕೆ ಕಡಿಮೆ ಮಾಡಿ ಜನರಿಗೆ ಹಣ ತಲುಪಿಸಿದರು ಎಂದು ಭಾಸ್ಕರ್ ರಾವ್ ಹೇಳಿದರು.