ಹೂವು ಬಿಟ್ಟು ಗನ್ ಹಿಡಿದು ಬರ್ತಿದ್ದಾರೆ ರವಿಚಂದ್ರನ್..!

0
140

ಕ್ರೇಜಿಸ್ಟಾರ್ ರವಿಚಂದ್ರನ್ ಸ್ಯಾಂಡಲ್​ವುಡ್​ನ ಸ್ಟಾರ್ ನಿರ್ದೇಶಕ, ನಟ. ಚಂದನವನದಲ್ಲಿ ಹೊಸ ಅಲೆಯನ್ನು ಹುಟ್ಟುಹಾಕಿದ ಹೊಸತನದ ಹರಿಕಾರ. ‘ಪ್ರೇಮಲೋಕ’ದ ‘ಚೆಲುವ’ ‘ರವಿಮಾಮ’. ರವಿಚಂದ್ರನ್ ಸಿನಿಮಾಗಳೂ ಒಂದಕ್ಕಿಂತ ಒಂದು ವಿಭಿನ್ನ. ಸಾದ ಹೊಸ ಕಥೆಗಳೊಂದಿಗೆ, ಹೊಸ ಅವತಾರದಲ್ಲಿ ಅಭಿಮಾನಿಗಳ ಮುಂದೆ ಬರುವ ಕ್ರೇಜಿಸ್ಟಾರ್ ಮತ್ತೊಂದು ಡಿಫ್ರೆಂಟ್ ಗೆಟಪ್​ನಲ್ಲಿ ಮೋಡಿ ಮಾಡಲು ಬರ್ತಿದ್ದಾರೆ.
ನಿಮ್ಗೆ ಗೊತ್ತೇ ಇದೆ. ರವಿಚಂದ್ರನ್ ಮತ್ತು ಡೈರೆಕ್ಟರ್ ಪಿ ವಾಸು ಕಾಂಬಿನೇಷನ್​ನ ‘ದೃಶ್ಯ’ ದೊಡ್ಡಮಟ್ಟಿನ ಯಶಸ್ಸು ಕಂಡಿತ್ತು.ಇದೀಗ ಅದೇ ‘ಆ ದೃಶ್ಯ’ ಕಥೆ ಹೇಳೋಕೆ ರವಿಚಂದ್ರನ್ ಬರ್ತಿದ್ದಾರೆ. ರವಿಮಾಮ ಅಂದ್ರೆ ಥಟ್ ಅಂತ ನೆನಪಾಗೋದು ಹೋವುಗಳು, ಬಣ್ಣ, ಸುಂದರ ಪರಿಸರ. ಆದ್ರೆ, ಆ ದೃಶ್ಯದಲ್ಲಿ ರವಿಚಂದ್ರನ್ ನಿಗೂಢ ಕೊಲೆ ಬೇಧಿಸುವ ಕ್ರೈಂ ಅಧಿಕಾರಿಯಾಗಿ ಮಿಂಚಲಿದ್ದಾರೆ. ಈ ಶೇಡ್ ಅಲ್ಲದೆ ಮತ್ತೊಂದು ವಿಭಿನ್ನ ಶೇಡಲ್ಲೂ ‘ಕಲಾವಿದ’ ಕಾಣಿಸಿಕೊಳ್ಳಲಿದ್ದಾರೆ.
‘ಜಿಗರ್ ಥಂಡ’ ಖ್ಯಾತಿಯ ಡೈರೆಕ್ಟರ್ ಶಿವ ಗಣೇಶ್ ಆ್ಯಕ್ಷನ್ ಕಟ್ ಹೇಳಿರೋ ಈ ಸಿನಿಮಾದಲ್ಲಿ ಅಚ್ಯುತ್ ಕುಮಾರ್, ರಮೇಶ್ ಭಟ್, ಅರ್ಜುನ್ ಗೌಡ, ಚೈತ್ರ ಆಚಾರ್ಯ ಮೊದಲಾದವರು ನಟಿಸಿದ್ದಾರೆ. ಬಹು ನಿರೀಕ್ಷಿತ ಚಿತ್ರ ನವೆಂಬರ್ 8ರಂದು ರಿಲೀಸ್ ಆಗುತ್ತಿದ್ದು, ಹೊಸ ಅವತಾರದಲ್ಲಿ ರವಿಮಾಮನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.

LEAVE A REPLY

Please enter your comment!
Please enter your name here