Sunday, May 29, 2022
Powertv Logo
Homeರಾಜ್ಯದೆಹಲಿಯಲ್ಲಿ ಸದ್ದು ಮಾಡಿದ ಯೋಗಿ ಮಾಡೆಲ್

ದೆಹಲಿಯಲ್ಲಿ ಸದ್ದು ಮಾಡಿದ ಯೋಗಿ ಮಾಡೆಲ್

ನವದೆಹಲಿ : ಕಳೆದ ಶನಿವಾರ ಹನುಮ ಜಯಂತಿಯಂದು ಉತ್ತರ ದೆಹಲಿಯ ಜಹಾಂಗೀರ್ ಪುರ್‌ನಲ್ಲಿ ನಡೆದಿದ್ದ ಹಿಂಸಾಚಾರ, ಘರ್ಷಣೆ ರಾಜಕೀಯ ಸ್ವರೂಪ ಪಡೆದುಕೊಳ್ತಿದೆ. ಘರ್ಷಣೆಗೆ ಕಾರಣರಾದ ಆರೋಪಿಗಳು ಇದೇ ಭಾಗದಲ್ಲಿ ನೆಲೆಸಿದ್ದು, ಅವರಿಗೆ ಸಂಬಂಧಿಸಿದ ಅತಿಕ್ರಮ ಕಟ್ಟಡಗಳನ್ನು ನೆಲಸಮ ಮಾಡಲು ದೆಹಲಿ ಪಾಲಿಕೆ ಮುಂದಾಗಿದೆ. ಇತ್ತ ಪಾಲಿಕೆಯ ನಿರ್ಧಾರಕ್ಕೆ ಸಾರ್ವಜನಿಕ ಟೀಕೆಗಳು ಕೇಳಿ ಬರ್ತಿದ್ದು, ಬಿಜೆಪಿಯೇತರ ರಾಜಕೀಯ ಪಕ್ಷಗಳು ಕೂಡ ಬುಲ್ಡೋಜರ್ ಕಾರ್ಯಾಚರಣೆಗೆ ಆಕ್ರೋಶ ವ್ಯಕ್ತಪಡಿಸಿವೆ.

ಜೀವನೋಪಾಯಕ್ಕಾಗಿ ಮಸೀದಿ ಮತ್ತು ಮಂದಿರದ ಸಮೀಪ ಅಂಗಡಿಗಳನ್ನು ತೆರೆಯಲಾಗಿತ್ತು. ಶನಿವಾರದ ಗಲಭೆಗೆ ಈ ವ್ಯಾಪ್ತಿಯಲ್ಲಿರುವ ಜನರೇ ಕಾರಣ ಅಂತಾ ಸಿಸಿಟಿವಿಯಲ್ಲಿ ಮಾಹಿತಿ ಕಲೆ ಹಾಕಲಾಗಿದೆ. ಜೊತೆಗೆ ಆರೋಪಿಗಳ ಪಟ್ಟಿಯಲ್ಲೂ ಹೆಸರು ಸೇರಿಸಲಾಗಿದೆ. ಹೀಗಾಗಿ ಹಿಂಸಾಚಾರ ಪೀಡಿತ ಪ್ರದೇಶದಲ್ಲಿದ್ದ ಅಂಗಡಿಗಳು ಮತ್ತು ಇತರೆ ಕಟ್ಟಡಗಳನ್ನು ನೆಲಸಮ ಮಾಡಲು ಮುನ್ಸಿಪಲ್​ ಮುಂದಾಗಿತ್ತು. ಈ ಕಾರ್ಯಾಚರಣೆ ಪ್ರಾರಂಭಿಸಿದ ಸ್ವಲ್ಪ ಸಮಯದಲ್ಲೇ ಅರ್ಜಿಯ ತುರ್ತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್,ಕಾರ್ಯಾಚರಣೆ ಸ್ಥಗಿತಗೊಳಿಸಲು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠವು ಮೌಖಿಕವಾಗಿ ಆದೇಶಿಸಿದ್ದು, ಸದ್ಯಕ್ಕೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ.

ಜಹಾಂಗೀರ್‌ಪುರಿ ಧ್ವಂಸ ಪ್ರಕರಣ ಕುರಿತು ದೆಹಲಿ ಹೈಕೋರ್ಟ್‌ನಲ್ಲೂ ಅರ್ಜಿ ಸಲ್ಲಿಸಲಾಗಿದೆ.ಇಲ್ಲಿನ ನಿವಾಸಿಗಳಿಗೆ ಪೂರ್ವ ಸೂಚನೆ ನೀಡದೇ ನೆಲಸಮ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಆರೋಪ ಮಾಡಲಾಗ್ತಿದೆ. ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್, ಬುಧವಾರದಿಂದ ಎರಡು ದಿನಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಯೋಜನೆ ರೂಪಿಸಿತ್ತು. ಇದಕ್ಕಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕನಿಷ್ಠ ನಾಲ್ಕು ನೂರು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಪೊಲೀಸರಿಗೆ ಕೋರಿತ್ತು.

ಜಹಾಂಗೀರ್‌ಪುರಿ ಪ್ರದೇಶಕ್ಕೆ ಬೆಳಗ್ಗೆಯೇ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಳಿಕ ತೆರವು ಕಾರ್ಯಾಚರಣೆ ವೇಳೆ ಮತ್ತೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ತಡೆಯಲು ಪೊಲೀಸರು ಹೆಚ್ವಿನ ನಿಗಾ ವಹಿಸಿದ್ರು.

ಅತಿಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಹಂತ ತೀವ್ರಗೊಳ್ಳುವ ಹೊತ್ತಿಗೆ ರಾಜಕೀಯ ನಾಯಕರು ಸ್ಥಳಕ್ಕೆ ಧಾವಿಸಿ ತಡೆಯುವ ಪ್ರಯತ್ಮ ಮಾಡಿದ್ರು.ಆದಾಗ್ಯೂ ಪಾಲಿಕೆ ಮಾತ್ರ ಕಾರ್ಯಾಚರಣೆ ನಿಲ್ಲಿಸಿರಲಿಲ್ಲ.ಇನ್ನು ರಾಹುಲ್ ಗಾಂಧಿ ಕೂಡ ಮೋದಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಎಎಪಿ ಸರ್ಕಾರ ಇದ್ರೂ, ಜನರಿಗೆ ನೆರವು ನೀಡದ ಸ್ಥಿತಿ ಎಎಪಿಗೆ ಕಾಡ್ತಿದೆ.ಕಾರಣ ದೆಹಲಿಯಲ್ಲಿ ಪಾಲಿಕೆ ಅಧಿಕಾರ ಬಿಜೆಪಿ ತೆಕ್ಕೆಯಲ್ಲಿ ಇರೋದ್ರಿಂದ ಯೋಗಿ ಮಾಡೆಲ್ ಬಳಸಲು ಪಾಲಿಕೆ ಮುಂದಾಗಿದೆ.ಆದರೆ, ಅಂತಿಮವಾಗಿ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

- Advertisment -

Most Popular

Recent Comments