Home P.Special 50 ಕೋಟಿ ಬಾಕಿ ಕಟ್ಟಿ - ಚಾಯ್​ವಾಲಾಗೆ ಶಾಕ್​ ನೀಡಿದ ಬ್ಯಾಂಕ್ ಅಧಿಕಾರಿ..!

50 ಕೋಟಿ ಬಾಕಿ ಕಟ್ಟಿ – ಚಾಯ್​ವಾಲಾಗೆ ಶಾಕ್​ ನೀಡಿದ ಬ್ಯಾಂಕ್ ಅಧಿಕಾರಿ..!

ಹರಿಯಾಣ : ಆತ ಚಾಯ್​ವಾಲಾ.. ಟೀ ಮಾರಿ ಅಷ್ಟೋ ಇಷ್ಟೋ ಸಂಪಾದನೆ ಮಾಡ್ತಿದ್ದಾರೆ.. ಅದುವೇ ಅವರ ಜೀವನಕ್ಕೆ ದಿಕ್ಕು! ಅಂಥಾ ವ್ಯಕ್ತಿ ಬಳಿ ಕೋಟಿ ಕೋಟಿ ಹಣ ಇರುತ್ತಾ? ಅಥವಾ ಆತ ಕೋಟಿ ಕೋಟಿ ಸಾಲ ಮಾಡಿಕೊಂಡಿರ್ತಾನಾ? ಛೇ.. ಅದ್ಹೇಗೆ ಸಾಧ್ಯ.. ಟೀ ಮಾರುತ್ತಾ ಜೀವನ ನಡೆಸೋ ಆತನಿಗೆ ಕೋಟಿ ಕೋಟಿ ಹಣ ಎಲ್ಲಿಂದ ಬಂದೀತು..? ಯಾರಾದರೂ ಅಷ್ಟೊಂದು ಸಾಲವನ್ನಾದ್ರೂ ಯಾಕೆ ಕೊಡ್ತಾರೆ ಅಂತ ನೀವು ಕೇಳ್ತಿದ್ದೀರಿ ಅಲ್ವಾ? ಇದು ಆಶ್ಚರ್ಯ ಅನಿಸಿದ್ರೂ ನಂಬ್ಲೇ ಬೇಕಾದ ಸ್ಟೋರಿ! ಆ ಟೀ ವ್ಯಾಪಾರಿಗೆ ಮಾತ್ರ ಈಗ ದೊಡ್ಡ ತಲೆನೋವು… ಶಾಕ್..!

ಅವ್ರು ಹೆಸ್ರು ರಾಜಕುಮಾರ್ ಅಂತ. ಹರಿಯಾಣದ ಕುರುಕ್ಷೇತ್ರದವರು. ಟೀ ಮಾರಿ ಜೀವನ ನಡೆಸ್ತಿದ್ದಾರೆ. ಕೊರೋನಾ ಲಾಕ್​ಡೌನ್​ನಿಂದ ಏನೇನೂ ದುಡಿಮೆ ಇಲ್ದೆ ಕುಟುಂಬ ನಿರ್ವಹಣೆ ಕಷ್ಟ ಆಗಿದ್ದಕ್ಕೆ ಲೋನ್​ ಮಾಡಣ ಅಂತ ಬ್ಯಾಂಕ್​​​ಗೆ ಹೋಗಿದ್ದಾರೆ. ಬ್ಯಾಂಕ್​ಗೆ ಹೋಗಿ ಅಧಿಕಾರಿಗಳೊಂದಿಗೆ ಲೋನ್​ ಬಗ್ಗೆ ಮಾತಾಡಿದ್ದಾರೆ. ಸ್ವಾಮಿ ಸ್ವಲ್ಪ ಸಾಲ ಬೇಕಿತ್ತು ಅಂತ ಕೇಳಿದ್ದಾರೆ. ಆಗ ಅವರ ಖಾತೆ ಪರಿಶೀಲಿಸಿದ ಅಧಿಕಾರಿ `ನೀವು ಈ ಹಿಂದೆ ತೆಗೆದುಕೊಂಡಿದ್ದ 50 ಕೋಟಿ ರೂ ಸಾಲವನ್ನು ಮೊದಲು ಮರುಪಾವತಿ ಮಾಡಿ, ಆಮೇಲೆ ಮತ್ತೆ ಬೇರೆ ಸಾಲ ತಗೋಳಿ’ ಅಂತ ಹೇಳಿದ್ದಾರೆ..! ಅಧಿಕಾರಿಯ ಆ ಮಾತನ್ನು ಕೇಳಿ ರಾಜಕುಮಾರ್ ಶಾಕ್ ಆಗಿದ್ದಾರೆ..!

ತಾನು ಸಾಲ ತೆಗೆದುಕೊಂಡೇ ಇಲ್ಲ… ಆದ್ರೂ ಸಾಲ ಇದೆ ಅಂತಾರೆ..!  ಇದು ಹೇಗೆ ಅಂತ ಗೊತ್ತಾಗ್ತಿಲ್ಲ ಅನ್ನೋದು ರಾಜಕುಮಾರ್ ಅಳಲು. 

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments