Monday, January 17, 2022
Powertv Logo
Homeಜೀವನ ಶೈಲಿಮಾನವನ ಮೀಸೆಯಿಂದ ಸಿದ್ಧಗೊಂಡ ಸೂಟ್

ಮಾನವನ ಮೀಸೆಯಿಂದ ಸಿದ್ಧಗೊಂಡ ಸೂಟ್

ಫ್ಯಾಷನ್​ ಲೋಕ ಪ್ರತಿಕ್ಷಣ ಅಪ್ಡೇಡ್​ ಆಗುತ್ತಲೆ ಇರುತ್ತದೆ. ಇಲ್ಲಿ ಹೊಸತನಕ್ಕೆ ಮೊದಲ ಆದ್ಯತೆ, ವಿವಿಧ ಬ್ಯಾಂಡ್​ಗಳ ಬಟ್ಟೆಗಳು ಜನರ ಆಕರ್ಷಣೆಯಾಗಿವೆ. ವಿವಿಧ ಪ್ರಾಣಿಗಳ ತುಪ್ಪಳದಿಂದ ಮಾಡಿದ ಬಟ್ಟೆಗಳನ್ನ ನೀವು ಧರಿಸಿರಬಹುದು. ಅದರ ಬಗ್ಗೆ ನಿಮಗೆ ಅರಿವಿರಬಹುದು. ಆದರೆ ಮನುಷ್ಯರ ಮೀಸೆಯಿಂದಲೂ ಬಟ್ಟೆ ತಯಾರಿಸಹುದು ಅನ್ನೋದು ನಿಮಗೆ ಗೊತ್ತಾ..

ಹೌದು ಮನುಷ್ಯನ ಮೀಸೆಯೂ ಫ್ಯಾಷನ್​ ಲೋಕಕ್ಕೆ ಎಂಟ್ರಿ ಕೊಟ್ಟಿದೆ. ಸದ್ಯ ಈ ಮೀಸೆ ಸೂಟ್​ ಹಲ್​ಚಲ್​ ಸೃಷ್ಠಿ ಎಬ್ಬಿಸಿದೆ.

ಆಸ್ಟ್ರೇಲಿಯಾದ ಮೆನ್ಸ್ ವೆಯರ್ ಕಂಪನಿ ಇದನ್ನು ತಯಾರಿಸಿದ್ದು, ಮೀಸೆ ಕೂದಲಿನಿಂದ ಸೂಟ್ ತಯಾರಿಸುವ ಈ ಕಂಪನಿಯ ಹೆಸರು ಪಾಲಿಟಿಕ್ಸ್ ಮೆನ್ಸ್ ವೇರ್ ಬ್ರಾಂಡ್.

ಮೆಲ್ಬೋರ್ನ್ ಮೂಲದ ವಿಷ್ಯುವಲ್ ಆರ್ಟಿಸ್ಟ್ ಪಮೇಲಾ ಕ್ಲೀಮನ್-ಪಾಸ್ಸಿ ಅವರೊಂದಿಗೆ ಸೇರಿಕೊಂಡು ಇದನ್ನು ಸಿದ್ಧಪಡಿಸಲಾಗಿದೆ. ಈ ಸೂಟ್ ಅನ್ನು ಮೂವೆಂಬರ್ ಎಂಬ ಸಮಾರಂಭದಲ್ಲಿ ಬಿಡುಗಡೆ ಮಾಡಲಾಗಿದೆ ಇದು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ನಡೆಯುವ ಸಮಾರಂಭವಾಗಿದೆ.

ಈ ಸೂಟ್‌ಗೆ ಮೊ ಹೇರ್ ಸೂಟ್ ಎಂದು ಹೆಸರಿಸಲಾಗಿದೆ. ಪಮೇಲಾ ಕ್ಲೀಮನ್-ಪಾಸ್ಸಿ ಈ ಸೂಟ್ ಮಾಡಲು ತುಂಬಾ ಶ್ರಮಪಟ್ಟಿದ್ದಾರೆ. ಅವರು ವಿವಿಧ ಸಲೂನ್‌ಗಳಿಂದ ಮೀಸೆ ಕೂದಲನ್ನು ಸಂಗ್ರಹಿಸಿದ್ದಾರೆ. ಈ ಪ್ರಾಜೆಕ್ಟ್​​ಗಾಗಿ ಜನರು ತಮ್ಮ ಮೀಸೆ ಕತ್ತರಿಸಿದ ನಂತರ ಕೂದಲುಗಳನ್ನು ಪೌಚ್​ನಲ್ಲಿ ಕಳುಹಿಸುತ್ತಿದ್ದರು. ಪಮೇಲಾ ಅವರ ಈ ಸೂಟ್​ ತಯಾರಿಕೆಯ ಹಿಂದೆ ಜನ ಜಾಗೃತಿಯ ಅಂಶವೂ ಇದೆ.

ಈ ಸೂಟ್​ ಹಾಕಲು ಮತ್ತು ನೋಡಲು ಸಾಕಷ್ಟು ಜನ ಅಸಹ್ಯ ಪಟ್ಟಿದ್ದಾರೆ ಎನ್ನಲಾಗಿದೆ. ನವೆಂಬರ್​ನಲ್ಲಿ ನೋ ಶೇವ್​ ನವೆಂಬರ್​ ಅಂತಾ ಕೆಲ ಪುರುಷರು ಆಚರಿಸುತ್ತಾರೆ. ಈ ತಿಂಗಳಿನಲ್ಲಿ ಪುರುಷರಿಗೆ ತಮ್ಮ ಮೀಸೆಯನ್ನು ಬೆಳೆಸಲು ವಿನಂತಿಸಲಾಗುತ್ತದೆ. ವಾಸ್ತವವಾಗಿ ಪುರುಷರಲ್ಲಿ ಸಂಭವಿಸುವ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಲಾಗುತ್ತದೆ. ಇದೇ ಹಿನ್ನಲೆಯಲ್ಲಿ ಈ ಮೀಸೆಯಲ್ಲಿ ಸೂಟ್​ ತಯಾರಿಸಲಾಗಿದೆ ಅನ್ನೋದು ತಯಾರಕರ ಅಂಬೋಣ.

LEAVE A REPLY

Please enter your comment!
Please enter your name here

- Advertisment -

Most Popular

Recent Comments