Sunday, June 26, 2022
Powertv Logo
Homeದೇಶಹವಾನ ಸಿಂಡ್ರೋಮ್ಸ್​ ಹಿಂದಿದ್ಯಾ ರಷ್ಯಾ ಚೀನಾ, ಕ್ಯೂಬಾ?

ಹವಾನ ಸಿಂಡ್ರೋಮ್ಸ್​ ಹಿಂದಿದ್ಯಾ ರಷ್ಯಾ ಚೀನಾ, ಕ್ಯೂಬಾ?

ಕಳೆದ ಕೆಲ ತಿಂಗಳ ಹಿಂದಷ್ಟೆ ಅಮೆರಿಕದ ಗೂಢಾಚಾರಿಗಳಲ್ಲಿ ಹವಾನ ಸಿಂಡ್ರೋಮ್ಸ್ ಕಾಣಿಸಿಕೊಂಡು ಆತಂಕವನ್ನ ಹೆಚ್ಚಿಸಿತ್ತು. ಇದಾದ ಬಳಿಕ ಕೆಲ ದಿನಗಳ ಕಾಲ ಈ ಸಿಂಡ್ರೋಮ್ ಸಂಪೂರ್ಣವಾಗಿ ಕಡಿಮೆ ಆಗಿದೆ ಅಂತ ಅಮೆರಿಕದ ಕೆಲ ವರದಿಗಳಲ್ಲಿ ಹೇಳಲಾಗಿತ್ತು. ಆದ್ರೆ ಇದೀಗ ಹವಾನ ಸಿಂಡ್ರೋಮ್ಸ್ ಬಗ್ಗೆ ಅಮೆರಿಕ ಸುಳ್ಳು ಹೇಳ್ತಿದ್ಯಾ ಅನ್ನೋ ಅನುಮಾನ ಕಾಡೋದಕ್ಕೆ ಶುರುವಾಗಿದೆ. ಏನ್ರಿ ಇದು ಹವಾನ ಕಥೆ ಅಂತೀರಾ?

ಹೌದು ತಾನೇ ವಿಶ್ವದ ದೊಡ್ಡಣ್ಣ, ತಾನೊಂದೇ ಶಕ್ತಿ ಶಾಲಿ ರಾಷ್ಟ್ರ, ವೈಜ್ಞಾನಿಕ ಕ್ಷೇತ್ರದಲ್ಲಿ ತಾನು ನಡೆದಿದ್ದೇ ದಾರಿ ಅಂತ ಒಂದು ಕಾಲದಲ್ಲಿ ಅಮೆರಿಕ ತನ್ನ ಬೆನ್ನನ್ನ ತಾನೇ ತಟ್ಟಿಕೊಳ್ಳುತ್ತಿತ್ತು. ಇದಕ್ಕೆ ಪೂರಕ ಅನ್ನೋ ಹಾಗೆ ತನಗೆ ಬೇಕಾದ ಜೈವಿಕ ಅಸ್ತ್ರಗಳ ಕುರಿತಾಗಿಯೂ ಸಾಕಷ್ಟು ವರ್ಷಗಳಿಂದ ಅಮೆರಿಕಾ ಅಧ್ಯಯನವನ್ನ ರಹಸ್ಯವಾಗಿ ನಡೆಸುತ್ತಿತ್ತು. ಆದ್ರೆ ಇತ್ತೀಚೆಗೆ ಅಮೆರಿಕಾಗೆ ತಾನೆಷ್ಟೇ ತಂತ್ರಗಾರಿಕೆಯ ರಾಷ್ಟ್ರವಾದ್ರೂ ಕೂಡ ತನ್ನನ್ನ ಮೀರಿಸುವ ಮತ್ತೊಂದು ಕುತಂತ್ರಿ ರಾಷ್ಟ್ರ ಇದೆ ಅನ್ನೋದು ಗೊತ್ತಾಗಿದ್ದು ಈ ಕೊರೋನಾ ವೈರಸ್​ನ ಸಂದಿಗ್ಧ ಪರಿಸ್ಥಿತಿಯಲ್ಲಿ.. ಅದು ಬೇರಾರು ಅಲ್ಲ, ಜಗತ್ತಿನ ಸಾಕಷ್ಟು ರಾಷ್ಟ್ರಗಳ ಶತ್ರುತ್ವವನ್ನ ಬೆಳೆಸಿಕೊಂಡಿರುವ ಚೀನಾ.

ಚೀನಾದ ಕತೆ ಅಲ್ಲಿರ್ಲಿ ಬಿಡಿ, ಆದ್ರೆ ಅಮೆರಿಕದ ಕತೆ ಈಗ ವ್ಯಥೆಯ ಅವಸ್ಥೆ ತಲುಪುವಂತೆ ಕಾಣಿಸ್ತಿದೆ. ಯಾಕಂದ್ರೆ ಇಷ್ಟು ದಿನಗಳ ಕಾಲ ಹೇಗೋ ಕೊರೋನಾ ವೈರಸ್​ ವಿರುದ್ಧ ಹೋರಾಡುತ್ತಿದ್ದ ಅಮೆರಿಕಾಗೆ ಇದೀಗ ಮತ್ತೆ ವಿಚಿತ್ರ ಖಾಯಿಲೆಯ ಕಾಟ ಶುರುವಾಗಿದ್ಯಂತೆ.. ಹೌದು, ಕೆಲ ತಿಂಗಳುಗಳ ಹಿಂದೆ ಅಮೆರಿಕದ ಗೂಢಚಾರಿಗಳಲ್ಲಿ ಪತ್ತೆಯಾಗಿದ್ದ ಹವಾನ ಸಿಂಡ್ರೋಮ್ಸ್​ ಆಗ ಜಾಗತಿಕವಾಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು, ಬಳಿಕ ಈ ಸಿಂಡ್ರೋಮ್ಸ್​​ ಕಡಿಮೆಯಾಗಿದೆ ಅಂತ ಹೇಳಲಾಗಿತ್ತು. ಆದ್ರೆ ಈ ಸಿಂಡ್ರೋಮ್​ ಕಡಿಮೆಯಾಗಿಲ್ಲ, ಬದಲಾಗಿ ಈ ಸಿಂಡ್ರೋಮ್ಸ್​ ಪತ್ತೆಯಾದ್ರೂ ಅಮೆರಿಕ ಇದನ್ನ ಗೌಪ್ಯವಾಗಿ ಇಡ್ತಿದ್ಯಾ? ಇದೇ ಸಿಂಡ್ರೋಮ್ಸ್​ ಅನ್ನ ಅಮೆರಿಕಾ ತನ್ನ ಶತ್ರು ರಾಷ್ಟ್ರಗಳ ಮೇಲೆ ಹಬ್ಬಿಸೋದಕ್ಕೆ ಪ್ರಯತ್ನ ಪಡ್ತಿದ್ಯಾ ಅನ್ನೋ ಹಲವು ಅನುಮಾನಗಳು ಕಾಡೋದಕ್ಕೆ ಶುರುವಾಗಿದೆ. ಇದಕ್ಕೆ ಪ್ರಮುಖವಾದ ಕಾರಣ ಚೀನಾ, ರಷ್ಯಾ ಹಾಗು ಕ್ಯೂಬಾ.

ಇಂಥದ್ದೊಂದು ಅನುಮಾನ ಕಾಡೋದಕ್ಕೆ ಶುರುವಾಗಿದ್ದು 2016ರಲ್ಲಿ. ಆ ವರ್ಷ ಕ್ಯೂಬಾದಲ್ಲಿ ಈ ಒಂದು ವಿಚಿತ್ರ ಅನುಭವ ಹವಾನದ ಕೆಲ ಪ್ರಜೆಗಳಲ್ಲಿ ಕಂಡು ಬಂದಿತ್ತು. ಸಣ್ಣಮಟ್ಟಗಿನ ಭಯಾನಕವಾದ ಸದ್ದು ಅಲ್ಲಿನ ಕೆಲವರಿಗೆ ದಿನವಿಡಿ ಕೇಳಿಸಿದೆ. ಯಾವುದೋ ವೈರಿಂಗ್ ಕೆಲಸ ನಡೀತಾ ಇರ್ಬೇಕು ಅಂತ ಅನ್ಕೊಂಡು ಅಲ್ಲಿನ ಜನ ಸುಮ್ಮನಾಗಿದ್ರು. ಆದ್ರೆ ಇದೇ ಸದ್ದು ದಿನ ಕಳೆದಂತೆ ಹೆಚ್ಚು ಹೆಚ್ಚು ಕೇಳಿಸೊದಕ್ಕೆ ಶುರುವಾಗಿತ್ತು. ವಾರವಾದ್ರೂ ಕೂಡ ಸಾಕಷ್ಟು ಜನ್ರಿಗೆ ಈ ವಿಚಿತ್ರವಾದ ಸದ್ದು ಕೇಳಿಸ್ತಾ ಇತ್ತು .ಇನ್ನೂ ಕೆಲವರಿಗೆ ಬ್ರೈನ್ ಡ್ಯಾಮೆಜ್ ಕೂಡ ಆಗಿತ್ತು. ಹೀಗೆ ವಿಚಿತ್ರವಾದ ಸಮಸ್ಯೆಗಳು ಕಾಣಿಸಿಕೊಂಡವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಅವರಲ್ಲಿ ಯಾವುದೋ ವಿಚಿತ್ರವಾದ ಖಾಯಿಲೆ ಪತ್ತೆಯಾಗಿತ್ತು. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಅಂದ್ರೆ, ಈ ಖಾಯಿಲೆಯ ಲಕ್ಷಣ ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಕೇವಲ ಅಮೆರಿಕದ ರಾಯಭಾರಿ ಕಚೇರಿಯ ಕೆಲ ಸಿಬ್ಬಂದಿಗಳಿಗೆ ಹಾಗೂ ಅಮೆರಿಕದ ಸಿಐಎ ಎಂಜೆಂಟ್​ಗಳಿಗೆ ಅನ್ನೋದು.

ಮೊದಲು ಕ್ಯೂಬಾದಲ್ಲಿ ಈ ಕಾಯಿಲೆ ಪತ್ತೆಯಾದಾಗ ಅಮೆರಿಕ ಈ ಕಾಯಿಲೆಯ ಹಿಂದೆ ಕ್ಯೂಬಾದ ಕೈವಾಡವಿದೆ ಅಂತ ಆರೋಪಿಸಿತ್ತು. ಬಳಿಕ ಇದೇ ಕಾಯಿಲೆ ಮತ್ತೆ 2017ರಲ್ಲಿ ಕಜಕಿಸ್ತಾನದಲ್ಲಿ ಅಮೆರಿಕಾದಿಂದ ಬಂದ ದಂಪತಿಯಲ್ಲಿ ಕಾಣಿಸಿಕೊಂಡಿತ್ತು. ಇದಾದ ಒಂದು ವರ್ಷದ ನಂತ್ರ ಅಂದ್ರೆ 2018ರಲ್ಲಿ ಚೀನಾದಲ್ಲಿ ನೆಲೆಸಿದ್ದ ಅಮೆರಿಕನ್ನರಿಗೆ ಇದೇ ಅನುಭವ ಕಾಡಿದೆ. ಇನ್ನೂ ಕೆಲವರು ಈ ಹವಾನ ಸಿಂಡ್ರೋಮ್ಸ್​ನಿಂದ ಬ್ರೇನ್ ಇಂಜುರಿಯಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಹೀಗೆ ಬೇರೆ ಬೇರೆ ದೇಶಗಳಲ್ಲಿ 130 ಅಮೆರಿಕನ್ನರಲ್ಲಿ ಇದೇ ಹವಾನ ಸಿಂಡ್ರೋಮ್ ಕಾಣಿಸಿಕೊಂಡಿದೆ. ಇದೆಲ್ಲದರ ನಡುವೆ ಈ ಕಾಯಿಲೆ ಕೇವಲ ಅಮೆರಿಕ ಹಾಗೂ ಅದರ ಸಹೋದರ ರಾಷ್ಟ್ರವಾದ ಕೆನಡಾದ ಕೆಲ ಪ್ರಜೆಗಳಲ್ಲಿ ಮಾತ್ರ ಕಾಣಿಸಿಕೊಂಡಿರೋದು ಅಮೆರಿಕ ಹಾಗೂ ಕೆನಡಾದ ಆತಂಕಕ್ಕೆ ಕಾರಣವಾಗಿದೆ. ಇಲ್ಲಿಯೂ ಕೂಡ ಹವಾನ ಸಿಂಡ್ರೊಮ್ಸ್ ಅಮೆರಿಕದ ಬಹುತೇಕ ಗೂಢಚಾರಿಗಳಿಗೆ ಕಾಣಿಸಿಕೊಂಡಿರೊದ್ರ ಕುರಿತು ಹಲವು ವರದಿಗಳು ಕೂಡ ಪ್ರಕಟವಾಗಿತ್ತು.

ಕಳೆದ ಕೆಲ ತಿಂಗಳ ಹಿಂದೆ ಅತಿಹೆಚ್ಚು ಹವಾನ ಸಿಂಡ್ರೋಮ್ ವರದಿಯಾಗ್ತಾ ಇತ್ತು. ಅದರಲ್ಲೂ ಆಸ್ಟ್ರಿಯಾದಲ್ಲಿ ನೆಲೆಸಿದ್ದ ಅಮೆರಿಕದ ನಾಗರೀಕರಲ್ಲಿ 20 ಹೊಸ ಕೇಸ್​​​​ಗಳು ಕಾಣಿಸಿದ್ದು, ಇದು ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರನ್ನು ಚಿಂತೆಗೀಡು ಮಾಡಿತ್ತು. ಅದರಲ್ಲೂ ಆಸ್ಟ್ರಿಯಾದ ವಿಯೆನ್ನಾವನ್ನು ಹವಾನ ಸಿಂಡ್ರೋಮ್​​​ನ ಹೊಸ ಹಾಟ್ ಸ್ಪಾಟ್ ಎನ್ನಲಾಗ್ತಿತ್ತು. ಇಲ್ಲಿ ಮತ್ತೊಂದು ಆಶ್ಚರ್ಯಕರ ಸಂಗತಿ ಏನು ಅಂದ್ರೆ, ಈ ಆಸ್ಟ್ರಿಯಾ ಅಮೆರಿಕದ ಅತಿಹೆಚ್ಚು ಗೂಢಾಚಾರಿಗಳು ನೆಲೆಸಿರುವ ಪ್ರದೇಶವಾಗಿದ್ದು, ಕೇವಲ CIA ಏಜೆಂಟ್​ಗಳಲ್ಲಿ ಮಾತ್ರ ಈ ಸಿಂಡ್ರೋಮ್ಸ್​ ಪತ್ತೆಯಾಗಿರೋದು ಅಮೆರಿಕ ಸರ್ಕಾರ ತಲೆಕೆಡಿಸಿಕೊಳ್ಳುವಂತೆ ಮಾಡಿದೆ.

ಈ ಕಾಯಿಲೆ ಕಳೆದ 4 ತಿಂಗಳ ಹಿಂದೆ ಭಾರತಕ್ಕೆ ಬಂದಿದ್ದ ಸಿಐಎ ಎಜೆಂಟ್​ನಲ್ಲಿ ಪತ್ತೆಯಾಗಿರೋದ್ರ ಕುರಿತು ಹಲವು ವರದಿಗಳು ಕೇಳಿ ಬಂದಿದ್ವು, ಈ ಬಗ್ಗೆ ಭಾರತೀಯ ಸಂಶೋಧಕರು ಕೂಡ ಆತಂಕಗೊಳ್ಳುವಂತೆ ಮಾಡಿತ್ತು. ಆದ್ರೆ ಇಲ್ಲಿ ಗಮನಿಸಬೇಕಾದ ಪ್ರಮುಖವಾದ ಅಂಶ ಅಂದ್ರೆ, ಇದುವರೆಗೂ ಈ ಕಾಯಿಲೆ ಅಮೆರಿಕಾ, ಕೆನಡಾದವರನ್ನ ಹೊರತುಪಡಿಸಿ ಬೇರಾವುದೇ ರಾಷ್ಟ್ರದ ಪ್ರಜೆಗಳಲ್ಲಿ ಕಂಡು ಬಂದಿಲ್ಲ. ಇದ್ರ ಜೊತೆಗೆ ಈ ಕಾಯಿಲೆ ಅಂಟು ರೋಗವಾಗಲು ಸಾಧ್ಯವಿಲ್ಲ ಅನ್ನೊದು ಕೂಡ ಕೊಂಚ ನೆಮ್ಮದಿಯ ವಿಚಾರ.. ಆದ್ರೂ ಈ ಬಗ್ಗೆ ಎಚ್ಚರ ತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ಇದೆ.

ಕಳೆದ ವರ್ಷವಷ್ಟೇ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ ಈ ಹವಾನ ಸಿಂಡ್ರೋಮ್​ ಅನ್ನ ಪರಿಶೀಲಿಸಿದಾಗ ಇದೊಂದು ಹೊಸ ರೀತಿಯ ಯುದ್ಧ ಮಾಡುವ ವಿಧಾನ ಎನ್ನುವ ಆಘಾತಕಾರಿ ಸುದ್ಧಿಯೊಂದನ್ನು ಹೊರಡಿಸಿತ್ತು. ಇದ್ರಲ್ಲಿ ಮೈಕ್ರೋ ವೇವ್ ಶಸ್ತ್ರಾಸ್ತ್ರಾಗಳನ್ನು ಬಳಸಿ ಇಡಿ ರಾಷ್ಟ್ರಗಳ ಜನರ ತಲೆಯನ್ನು ಕೆಡಿಸಿ, ಬೆಳವಣಿಗೆಯಲ್ಲಿ ಕುಂಠಿತಗೊಳಿಸುವ ಹೊಸ ಯುದ್ಧ ವಿಧಾನದ ತಂತ್ರ ಅಂತ ಹೇಳಿತ್ತು.
ಇನ್ನು ಈ ರೀತಿಯಾದ ವರದಿಯನ್ನ ನ್ಯಾಷನಲ್ ಅಕ್ಯಾಡೆಮಿ ಆಫ್ ಸೈನ್ಸ್ ಸಂಸ್ಥೆ ನೀಡೋದಕ್ಕೂ ಒಂದು ಪ್ರಮುಖ ಕಾರಣವಿದೆ. ಈ ಹಿಂದೆ ಇದೇ ಸಂಸ್ಥೆ ಈ ಹವಾನ ಸಿಂಡ್ರೋಮ್ ಅಣುಗಳಷ್ಟು ಗಾತ್ರವಿರುವ ಕೆಲವು ಮೈಕ್ರೋ ಲೇಸರ್ ರೀತಿಯ ವೇವ್ ಗಳು ಗೈನೋಮೀಟರ್ ಗಳಲ್ಲಿ ಪತ್ತೆ ಹಚ್ಚಿತ್ತು. ಇದರಿಂದ ಹವಾನ ಸಿಂಡ್ರೋಮ್​ ಅನ್ನೋದು ಒಂದು ರಾಷ್ಟ್ರವನ್ನು ಮಾನಸಿಕವಾಗಿ ನಾಶ ಮಾಡುವ ವೆಪನ್ ಅಂತ ಈ ಮೂಲಕ ಖಚಿತವಾಗಿದೆ.

ಯಾವಾಗ ಈ ಮೈಕ್ರೊ ಲೇಸರ್ ರೀತಿಯ ವೇವ್​ಗಳು ಪತ್ತೆಯಾದ್ವೊ ಆಗಲೇ ಎಲ್ಲರ ದೃಷ್ಟಿ ನೆಟ್ಟಿದ್ದು ರಷ್ಯಾದ ಕಡೆಗೆ. ಯಾಕಂದ್ರೆ ಹೀಗೆ ಮೈಕ್ರೋ ವೇವ್ ವೆಪನ್ ಗಳು ಮೊದಲಿಗೆ ಕಂಡು ಬಂದಿದ್ದು ರಷ್ಯಾದಲ್ಲಿ. ಹೀಗೆ ವಿವಿಧ ದೇಶಗಳಲ್ಲಿ ಕೇವಲ ಅಮೆರಿಕನ್ನರನ್ನೇ ಈ ಸಿಂಡ್ರೋಮ್​ ಕಾಡುತ್ತಿದ್ದು ಅದರಲ್ಲಿ ಬಹುತೇಕರು ಗೂಢಾಚಾರಿಗಳಾಗಿರೊಂದ್ರಿಂದ ಈ ಅನುಮಾನ ಸಹಜವಾಗಿ ಎಲ್ಲರಲ್ಲೂ ಕಾಡ್ತಾ ಇದೆ. ಆದ್ರೆ ಇದುವರೆಗು ಕೂಡ ರಷ್ಯಾ ಮಾತ್ರ ಈ ಬಗ್ಗೆ ಒಂದೇ ಒಂದು ಮಾತನ್ನ ಕೂಡ ಆಡದಿರೊದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಒಟ್ಟಾರೆಯಾಗಿ ಅಮೆರಿಕಾದಲ್ಲಿ ಪತ್ತೆಯಾಗಿರುವ ಈ ಹೊಸ ಕಾಯಿಲೆಗೆ ಇದುವರೆಗೂ ಯಾವುದೇ ರೀತಿಯಾದ ಔಷಧಿ ಪತ್ತೆಯಾಗಿಲ್ಲ.ಆದ್ರೆ ಇಷ್ಟು ದಿನ ಕಡಿಮೆಯಾಗಿತ್ತು ಅಂತ ಭಾವಿಸಲಾಗಿದ್ದ ವೈರಸ್​ ಈಗ ಮತ್ತೆ ಪತ್ತೆಯಾಗ್ತಿದೆ ಅಂತ ಹೇಳಲಾಗ್ತಾ ಇದೆ. ಆದ್ರೆ ಈ ಬಗ್ಗೆ ಬಾಯಿ ಬಿಚ್ಚದ ಅಮೆರಿಕ ರಹಸ್ಯವನ್ನ ಕಾಪಾಡಿಕೊಳ್ತಾ ಇದ್ಯಾ ಅಥವಾ ಇದೇ ವೈರಸ್​ ಬಳಸಿ ರಷ್ಯಾ, ಚೀನಾ, ಕ್ಯೂಬಾ ಮೇಲೆ ಸೇಡು ತೀರಿಸಿಕೊಳ್ಳೋದಕ್ಕೆ ಪ್ರಯತ್ನ ಪಡ್ತಿದ್ಯಾ ಅನ್ನೊ ಹಲವು ಅನುಮಾನಗಳು ಹುಟ್ಟೋ ಹಾಗೆ ಮಾಡಿದೆ.. ಹೀಗಾಗಿ ಮುಂದಿನ ದಿನಗಳಲ್ಲಿ ಅಮೆರಿಕಾ ಈ ವಿಚಾರದಲ್ಲಿ ಯಾವ ರೀತಿಯಾದ ನಿರ್ಣಯ ಕೈಗೊಳ್ಳಲಿದೆ ಅಂತ ಕಾದು ನೋಡಬೇಕಿದೆ

2 COMMENTS

LEAVE A REPLY

Please enter your comment!
Please enter your name here

- Advertisment -

Most Popular

Recent Comments