ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎಮೋಜಿಗಳನ್ನು ಬಳಸಿ ಚಾಟಿಂಗ್ ಮಾಡುವುದು ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಮಾತಿಗಿಂತ ಹೆಚ್ಚು ಎಮೋಜಿಗಳನ್ನೇ ಬಳಸಲಾಗುತ್ತದೆ. ಆಗಾಗ ಬರುವ ಹೊಸ ಅಪ್ಡೇಟ್ಗಳು ಬಳಕೆದಾರರನ್ನು ಆಕರ್ಷಿಸುತ್ತವೆ.
ಇದೀಗ ಆಪಲ್ ಐಒಎಸ್ ಹೊಸದೊಂದು ಎಮೋಜಿ ಬಿಡುಗಡೆ ಮಾಡಿತ್ತು. ಆಪಲ್ ಐಫೋನ್ ಕಳೆದ ತಿಂಗಳು ಗರ್ಭಿಣಿ ಪುರುಷನ ರೀತಿ ಕಾಣುವ ಎಮೋಜಿ ಬಿಡುಗಡೆ ಮಾಡಿದೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಕಳೆದ ವಾರ ಬಿಡುಗಡೆಯಾದ ಬಹು ನಿರೀಕ್ಷಿತ iOS 15.4 ನವೀಕರಣಗಳು ಕೆಲವು ಆಸಕ್ತಿದಾಯಕ ಸೇರ್ಪಡೆಗಳನ್ನು ಒಳಗೊಂಡಿವೆ ಮತ್ತು ಇಂಟರ್ನೆಟ್ನಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಎಮೋಜಿ ಬಗ್ಗೆ ಭಾರೀ ವಿರೋದ ವ್ಯಕ್ತವಾಗಿದ್ದು, ಈ ರೀತಿಯ ಅಸಹಜ ಎಮೋಜಿಗಳನ್ನು ಬಳಸಲು ಇಷ್ಟಪಡುವುದಿಲ್ಲ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.