Home P.Special ಕಸ ಕೊಡಿ ಊಟ ಮಾಡಿ - 1 ಕೆಜಿ ಕಸಕ್ಕೆ ಫುಲ್ ಮೀಲ್, 1.5 ಕೆಜಿಗೆ...

ಕಸ ಕೊಡಿ ಊಟ ಮಾಡಿ – 1 ಕೆಜಿ ಕಸಕ್ಕೆ ಫುಲ್ ಮೀಲ್, 1.5 ಕೆಜಿಗೆ ರುಚಿ ರುಚಿ ತಿಂಡಿ..!

ಬಿಟ್ಟಿಯಾಗಿ ಏನೂ ಸಿಗದ ಈ ಕಾಲದಲ್ಲಿ  ಇಲ್ಲೊಂದು ಕಡೆ ಫುಡ್ ಫ್ರೀಯಾಗಿ ಕೊಡ್ತಾರೆ. ದುಡ್ಡು ಕೊಟ್ರೆ ಕೆಲವು ಕಡೆ ಸರಿಯಾಗಿ ಫುಡ್ ಸಿಗ್ದೇನೂ ಇರ್ಬೋದು. ಆದ್ರೆ, ಇಲ್ಲಿ ಒಂದು ಕೆ.ಜಿ ಕಸ ಕೊಟ್ರೆ ಸಾಕು ಸಿಗುತ್ತೆ ಒಂದು ಫುಲ್ ಮೀಲ್..!  ಒಂದೂವರೆ ಕೆ.ಜಿ ಕಸ ಕೊಟ್ರೆ ಬಾಯಿ ಚಪ್ಪರಿಸಿ ತಿನ್ನುವಂತಹ ತಿಂಡಿಗಳನ್ನು ಕೊಡ್ತಾರೆ..!  ಇದೇನಪ್ಪಾ ಕಸ ಕೊಟ್ರೆ ಎಲ್ಲಾದ್ರೂ ಊಟ ಕೊಡ್ತಾರಾ ಅಂತ ಯೋಚಿಸ್ತಿದ್ದೀರಾ. ಹೌದು. ಇದು ಇಲ್ಲಿನ ಕೆಫೆಯ ವಿಶೇಷತೆ. ಈ ಕೆಫೆಯ ಹೆಸರೇ ಗಾರ್ಬೇಜ್ ಕೆಫೆ..!

ಈ ಗಾರ್ಬೇಜ್ ಕೆಫೆಯಲ್ಲಿ ಬಡವರು, ಶ್ರೀಮಂತರು ಅನ್ನೋದು ಇಲ್ಲ. ಯಾರೇ ಕಸ ತಂದು ಕೊಟ್ರೂ ಹೊಟ್ಟೆ ತುಂಬುವಷ್ಟು ಊಟ ಕೊಡ್ತಾರೆ. ಇಂಥದ್ದೊಂದು  ವಿಶೇಷ ಕೆಫೆ ಛತ್ತೀಸ್​​ಗಢ ಅಂಬಿಕಾಪುರದಲ್ಲಿದೆ. ಈ ಗಾರ್ಬೇಜ್ ಕೆಫೆಗೆ ಲಂಡನ್ ನ ರಬ್ಬಿಶ್ ಕೆಫೆ ಸ್ಪೂರ್ತಿಯಾಗಿದ್ದು, ಇದರ ಮೂಲಕ ನಗರದ ಸ್ವಚ್ಛತೆಗೆ ಮುಂದಾಗಿದೆ. ಈ ಕೆಫೆಯಲ್ಲಿ ಒಂದು ಕೆ.ಜಿ ಪ್ಲಾಸ್ಟಿಕ್ ಕೊಟ್ರೆ ಸಾಕು ಫ್ರೀಯಾಗಿ ಊಟ ಕೊಡ್ತಾರೆ. ಒಂದೂವರೆ ಕೆ.ಜಿ ಪ್ಲಾಸ್ಟಿಕ್ ಕೊಟ್ರೆ ಬಾಯಲ್ಲಿ ನೀರೂರಿಸುವ ತಿಂಡಿಗಳನ್ನು ಕೊಡ್ತಾರೆ. ಈ ರೀತಿಯ ಕೆಫೆಯನ್ನು ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರಯತ್ನಿಸಿದ್ದು, ಬಡವರು, ಕಸ ಹೆಕ್ಕುವವರು ಎಲ್ಲರಿಗೂ ಸಹಾಯಕವಾಗಿದೆ. ಅಷ್ಟೇ ಅಲ್ಲದೇ ಇದು ಅಂಬಿಕಾಪುರದ ಮುನಿಸಿಪಲ್ ಕಾರ್ಪೋರೇಶನ್ ಕಮಿಶನರ್ ಮನೋಜ್ ಸಿಂಗ್ ಅವರ ಕನಸಿನ ಕೂಸು ಕೂಡಾ  ಹೌದು.

ಇಷ್ಟಕ್ಕೂ ಕೆಫೆಯಲ್ಲಿ ತೆಗೆದುಕೊಂಡ ಪ್ಲಾಸ್ಟಿಕ್ ಗಳನ್ನು ಏನ್ ಮಾಡ್ತಾರೆ ಗೊತ್ತಾ? : ಕೆಫೆಯಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ಗಳನ್ನು ನಗರದ ರಸ್ತೆ ನಿರ್ಮಾಣದಲ್ಲಿ ಬಳಸುತ್ತಾರೆ. ಈಗಾಗಲೇ  ಛತ್ತೀಸ್ ಗಡದಲ್ಲಿ ಪ್ಲಾಸ್ಟಿಕ್ ರಸ್ತೆಯೊಂದನ್ನು ನಿರ್ಮಿಸಲಾಗಿದೆ. ಭಾರತದಲ್ಲೇ ಸುಮಾರು ಒಂದು ಲಕ್ಷ ಕಿ.ಮೀ ಪ್ಲಾಸ್ಟಿಕ್  ರಸ್ತೆಯು ನಿರ್ಮಾಣವಾಗಿದೆ. ಆದ್ದರಿಂದ ಈ ರೀತಿಯ ವಿಶಿಷ್ಟ ಕೆಫೆಗಳಿಂದ ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರ ಸಿಕ್ಕಂತಾಗುತ್ತದೆ. ಅಲ್ಲದೇ ಭಾರತದಲ್ಲಿ ಸ್ವಚ್ಛ ನಗರ ಪಟ್ಟಿಯಲ್ಲಿ ಅಂಬಿಕಾಪುರ ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ಇಂತಹ ಗಾರ್ಬೇಜ್ ಕೆಫೆಗಳನ್ನು ದೇಶದ ಪ್ರತಿಯೊಂದು ನಗರದಲ್ಲಿಯೂ ಆರಂಭಿಸಬೇಕು.

LEAVE A REPLY

Please enter your comment!
Please enter your name here

- Advertisment -

Most Popular

5 ವರ್ಷದ ಬಾಲಕಿ ಕಾಣೆ

ಬೆಂಗಳೂರು : ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ 5 ವರ್ಷದ ಬಾಲಕಿ ಕಾಣೆಯಾಗಿದ್ದಾಳೆ. ಲೋಕಿತ ಕೆ.ಮರನ್ ಕಾಣೆಯಾಗಿರುವ ಬಾಲಕಿ‌. ಈಕೆ ತನ್ನ ತಾತನ ಜೊತೆ ಸೆ.18 ರಂದು ಮನೆಯಿಂದ ತೆರಳಿದ್ದಳು. ಮೆಜೆಸ್ಟಿಕ್ ನಿಲ್ದಾಣದಲ್ಲಿ...

ಅಕ್ಕ ಗೌರಿ ಲಂಕೇಶ್​ರನ್ನು ನೆನೆದು ಕಣ್ಣೀರಿಟ್ಟ ಇಂದ್ರಜಿತ್ ಲಂಕೇಶ್..!

ಬೆಂಗಳೂರು : ಸ್ಯಾಂಡಲ್​​ವುಡ್​ ಡ್ರಗ್ಸ್​ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಂದು ಮತ್ತೊಮ್ಮೆ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ.  ಇಂದು ಸಿಸಿಬಿ ವಿಚಾರಣೆಗೆ ಹೋಗುವ...

ಸ್ಯಾಂಡಲ್​​ವುಡ್​​​​​ನಲ್ಲಿ ಡ್ರಗ್​ ಮಾಫಿಯಾ : ಇಂದು ಸಿಸಿಬಿಯಿಂದ ನಟಿ ರಾಗಿಣಿ ವಿಚಾರಣೆ

ಬೆಂಗಳೂರು :  ಸ್ಯಾಂಡಲ್​​​​ವುಡ್​​ನಲ್ಲಿ ಡ್ರಗ್​​ ಮಾಫಿಯಾದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತಾ ಇದೆ. ಚಂದನವನಕ್ಕೆ ಮಾದಕ ಜಾಲ ಹಬ್ಬಿದೆಯೇ ಅಥವಾ ಇಲ್ಲವೇ ಅನ್ನೋದು ಸದ್ಯದ ಗಾಂಧಿನಗರದ ಹಾಟ್ ಸುದ್ದಿ. ಇದಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ...

ಕೊರೋನಾದಿಂದ ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನ

ಶಿವಮೊಗ್ಗ : ಭದ್ರಾವತಿಯ ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದ ಅವರು,  ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅಪ್ಪಾಜಿಗೌಡರಿಗೆ 69 ವರ್ಷ ವಯಸ್ಸಾಗಿತ್ತು. ಪತ್ನಿ...

Recent Comments