‘ದೇವೇಗೌಡರ ಕುಟುಂಬಕ್ಕೆ 9ರ ಕಂಟಕ’..!

0
193

ಹಾಸನ: 1989, 1999ನೇ ಇಸವಿಯಲ್ಲಿ ಜೆಡಿಎಸ್​ನವರು  ಸೋತಿದ್ರು. 2019 ಈ ಬಾರಿಯ ಫಲಿತಾಂಶ ಕೂಡ ಜೆಡಿಎಸ್ ವಿರುದ್ಧ​ ಬರಲಿದೆ ಅಂತ ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ. ಹಾಸನದ ಹೊಳೆನರಸೀಪುರದಲ್ಲಿ ಕಾಂಗ್ರೆಸ್​ಕಾರ್ಯಕರ್ತರ ಜೊತೆ ಸಭೆ ನಡೆಸಿ ಮಾತನಾಡಿದ ಅವರು ದೊಡ್ಡಗೌಡರ ಕುಟುಂಬದ 9 ಸಂಖ್ಯೆಯ ಸೀಕ್ರೆಟ್​ ಬಿಚ್ಚಿಟ್ಟಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಎ.ಮಂಜು ಅವರಿಗೆ ಬೆಂಬಲ ನೀಡುತ್ತೇವೆ ಅಂತ ಹೇಳಿದ್ದಾರೆ. ಲೋಕಸಭಾ ಚುನಾವಣೆ ಡೇಟ್​ ಫಿಕ್ಸ್​ ಆಗುತ್ತಿದ್ದಂತೆ ಸೀಟು ಹಂಚಿಕೆಯಲ್ಲೂ ಗೊಂದಲ ಶುರುವಾಗಿದೆ. ಈಗಾಗಲೇ ಹಾಸನ ಕ್ಷೇತ್ರದಿಂದ ದೋಸ್ತಿ ಅಭ್ಯರ್ಥಿಯಾಗಿ ದೇವೇಗೌಡರ ಮೊಮ್ಮಗ ಪ್ರಜ್ವಲ್​ ರೇವಣ್ಣ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದು, ಮಾಜಿ ಸಚಿವ ಎ. ಮಂಜು ಅವರು ಬಿಜೆಪಿ ಸೇರ್ಪಡೆ ಸಾಧ್ಯತೆ ಬಗ್ಗೆಯೂ ಮಾತುಗಳು ಕೇಳಿ ಬರುತ್ತಿದೆ. ಸೀಟು ಹಂಚಿಕೆ, ಕ್ಷೇತ್ರ ಬಿಟ್ಟುಕೊಡುವ ವಿಚಾರದಲ್ಲಿ ಜಿಲ್ಲಾ ಕಾಂಗ್ರೆಸ್​ ನಾಯಕರು ಪಕ್ಷದ ವರಿಷ್ಠರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here