Saturday, October 1, 2022
Powertv Logo
Homeದೇಶಪ್ರಮುಖ ಮಲಯಾಳಂ ಸುದ್ದಿ ವಾಹಿನಿ ಬಂದ್ ಮಾಡಿದ ಕೇಂದ್ರ

ಪ್ರಮುಖ ಮಲಯಾಳಂ ಸುದ್ದಿ ವಾಹಿನಿ ಬಂದ್ ಮಾಡಿದ ಕೇಂದ್ರ

ನವದೆಹಲಿ: ಜಮಾತ್-ಎ-ಇಸ್ಲಾಮಿಯ ಬೆಂಬಲವನ್ನು ಹೊಂದಿರುವ ಪ್ರಮುಖ ಮಲಯಾಳಂ ಸುದ್ದಿ ಚಾನೆಲ್ ಮೀಡಿಯಾ ಒನ್ ಟಿವಿ ಪ್ರಸಾರವನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು “ಭದ್ರತಾ ಕಾರಣಗಳನ್ನು ಉಲ್ಲೇಖಿಸಿ” ನಿರ್ಬಂಧಿಸಿದೆ. ಹೀಗಾಗಿ ಇಂದು ಚಾನೆಲ್ ಪ್ರಸಾರವನ್ನು ನಿಲ್ಲಿಸಿತು.

ಮೀಡಿಯಾ ಒನ್ ಟಿವಿ ಸಂಪಾದಕ ಪ್ರಮೋದ್ ರಾಮನ್ ಪ್ರತಿಕ್ರಿಯಿಸಿದ್ದು, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಚಾನೆಲ್ ಮೇಲೆ ಪ್ರಸಾರ ನಿಷೇಧವನ್ನು ವಿಧಿಸಿದೆ. “ಸುರಕ್ಷತಾ ಕಾರಣಗಳಿಂದಾಗಿ ನಿಷೇಧ ಹೇರಲಾಗಿದೆ ಎಂದು ಸಚಿವಾಲಯ ಹೇಳಿದೆ. ಈ ನಿಷೇಧದ ಬಗ್ಗೆ ಕೇಂದ್ರ ಸರ್ಕಾರವು ಮೀಡಿಯಾ ಒನ್ ಟಿವಿಗೆ ವಿವರಗಳನ್ನು ನೀಡಿಲ್ಲ. ನಿಷೇಧದ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದೇವೆ. ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ಚಾನೆಲ್ ಪ್ರಸಾರ ಮುಂದುವರಿಯುತ್ತದೆ. ಕೊನೆಗೂ ನ್ಯಾಯ ಸಿಗುತ್ತದೆ ಎಂಬ ಭರವಸೆಯೊಂದಿಗೆ ಪ್ರಸಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುತ್ತಿದ್ದೇವೆ’’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವದ ನಾಲ್ಕು ಸ್ಥಂಬಗಳಲ್ಲಿ ಒಂದು ಸ್ಥಂಭವು ದುರ್ಬಲಗೊಳ್ಳುತ್ತಿರುವುದರ ಸಂಕೇತ ಇದಾಗಿದೆ.

- Advertisment -

Most Popular

Recent Comments