Friday, September 30, 2022
Powertv Logo
Homeರಾಜ್ಯಬೆಂಗಳೂರಲ್ಲಿ ಯುವತಿಯಿಂದ ಪಾಕ್ ಪರ ಘೋಷಣೆ

ಬೆಂಗಳೂರಲ್ಲಿ ಯುವತಿಯಿಂದ ಪಾಕ್ ಪರ ಘೋಷಣೆ

ಬೆಂಗಳೂರು : ಎಐಎಂಎಂ ಪಕ್ಷದ ನಾಯಕ ಅಸ್ಸಾದುದ್ದೀನ್ ಓವೈಸಿ ಭಾಗವಹಿಸಿದ್ದ ಪ್ರತಿಭಟನಾ ಸಭೆಯಲ್ಲಿ ಯುವತಿಯೊಬ್ಬಳು ಪಾಕಿಸ್ತಾನ್ ಪರ ಘೋಷಣೆ ಕೂಗಿದ್ದು, ಕೂಡಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಮೂಲ್ಯ ಬಂಧಿತ ಯುವತಿ. ಫ್ರೀಡಂಪಾರ್ಕಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾ ಸಭೆಯಲ್ಲಿ ಅಮೂಲ್ಯ ‘ಪಾಕಿಸ್ತಾನ್ ಜಿಂದಾಬಾದ್​ ‘ ಎಂದು ಘೋಷಣೆ ಕೂಗಿದ್ದಾಳೆ. ಕಕ್ಕಾಬಿಕ್ಕಿಯಾದ ಓವೈಸಿ ಮತ್ತು ಇತರರು ಯುವತಿಯಿಂದ ಮೈಕ್ ಕಸಿದುಕೊಂಡು ಪಾಕ್ ಪರ ಘೋಷಣೆ ಕೂಗದಂತೆ ಹೇಳಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಫ್ರೀಡಂ ಪಾರ್ಕ್ ಬಳಿಗೆ ಹೆಚ್ಚುವರಿ ಆಯುಕ್ತ ಸೌಮೆಂದು‌ ಮುಖರ್ಜಿ ಆಗಮಿಸಿ, ಘಟನೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

- Advertisment -

Most Popular

Recent Comments