Home ರಾಜ್ಯ ಇತರೆ ಮೋದಿ ಪ್ರತಿಕೃತಿ ನಿರ್ಮಿಸಿದ ಪೋರ..!

ಮೋದಿ ಪ್ರತಿಕೃತಿ ನಿರ್ಮಿಸಿದ ಪೋರ..!

ಶಿವಮೊಗ್ಗ: 12 ವರ್ಷದ ಈ ಬಾಲಕ ಪ್ರಧಾನಿ ಮೋದಿ ಅವರ ಕಟ್ಟ ಅಭಿಮಾನಿ. “ಮೋದಿ ದೇಶದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರೈತರು, ಕಾರ್ಮಿಕರು, ಸೈನಿಕರು ಸೇರಿದಂತೆ ಎಲ್ಲಾ ವರ್ಗದವರ ಪರವಾಗಿದ್ದಾರೆ ಎಂಬುದು ಅತನ ಮಾತುಗಳು. ಪುಟ್ಟ ಬಾಲಕನ ಮೋದಿ ಅಭಿಮಾನ ಎಷ್ಟಿದೆ ಅಂದರೆ, ಮನೆಯಲ್ಲೇ ಸಿಗುವಂತಹ ವಸ್ತುಗಳನ್ನು ಬಳಸಿಕೊಂಡು ಮೋದಿ ಪ್ರತಿಕೃತಿ ನಿರ್ಮಿಸಿದ್ದಾನೆ.

ಶಿವಮೊಗ್ಗದಲ್ಲಿ ದಿನೇಶ್​ ಎನ್ನುವ ಬಾಲಕ ಮೋದಿ ಕಟ್ಟಾ ಅಭಿಮಾನಿ. ಶಿವಮೊಗ್ಗದ ವರ್ತಕ ಹರೀಶ್ ಮತ್ತು ರೇಖಾ ದಂಪತಿಯ ಪುತ್ರ. 5 ನೇ ಕ್ಲಾಸ್ ಪಾಸ್ ಆಗಿ, 6 ನೇ ಕ್ಲಾಸ್  ವ್ಯಾಸಂಗ ಮಾಡಲು ಸಿದ್ಧವಾಗಿದ್ದಾನೆ. ಬೇಸಿಗೆ ರಜೆಯ ಅವಧಿಯಲ್ಲಿ ಮನೆಯಲ್ಲೇ ಕುಳಿತು, ಮೋದಿಯ ಪ್ರತಿಕೃತಿ ಸಿದ್ಧಪಡಿಸಿದ್ದಾನೆ. ಚುನಾವಣೆ ಸಮಯದಲ್ಲಿ ಈತನಿಗೆ ಸಿಕ್ಕಿರುವ ಮೋದಿ ಮುಖವಾಡವನ್ನು ಪ್ರತಿಕೃತಿಗೆ ಅಂಟಿಸಿದ್ದಾನೆ. ಕಾಲಿಗೆ ಈತನದ್ದೇ ಶೂ ಹಾಕಿದ್ದಾನೆ. ಮನೆಯಲ್ಲಿರುವ ಬಕೆಟ್, ಬಾಸ್ಕೆಟ್, ಬಟ್ಟೆ, ಚೇರ್​​ನ್ನೇ ಬಳಸಿಕೊಂಡು ಪ್ರತಿಕೃತಿ ನಿರ್ಮಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಹೀಗ್ಯಾಕೆ ಮಾಡಿದೆ ಅಂದರೆ ನಾನು ಮೋದಿ ಅಭಿಮಾನಿ ಅಂತಾನೆ. “ಮೊದಲಿನಿಂದ ದಿನೇಶ್ ಇಂತಹ ಪ್ರತಿಕೃತಿಗಳನ್ನು ಮಾಡುತ್ತಲೇ ಇರುತ್ತಾನೆ. ಮನೆಯಲ್ಲಿ ಇರುವಂತ ವಸ್ತುಗಳನ್ನು ಬಳಿಸಿ ಮೋದಿ ಪ್ರತಿಕೃತಿ ನಿರ್ಮಿಸಿ ನಮಗೂ ಅಚ್ಚರಿ ಮೂಡಿಸಿದ್ದಾನೆ” ಎಂದು ಪೋಷಕರು ತಿಳಿಸಿದ್ದಾರೆ. 

ಒಟ್ಟಾರೆ ಮೋದಿ ಮೇಲಿನ ಅಭಿಮಾನವನ್ನು ಪ್ರತಿಕೃತಿ ಮಾಡುವ ಮೂಲಕ ಪೋರ ಅದನ್ನು ಅಭಿವ್ಯಕ್ತ ಪಡಿಸಿದ್ದಾನೆ. ಬಡಾವಣೆಯ ಜನರು ಸಹ ದಿನೇಶ್ ನಿರ್ಮಿಸಿರುವ ಮೋದಿ ಪ್ರತಿಕೃತಿ ನೋಡಲು ಆಗಮಿಸುತ್ತಿದ್ದಾರೆ.

ಗೋ.ವ. ಮೋಹನಕೃಷ್ಣ, ಶಿವಮೊಗ್ಗ

LEAVE A REPLY

Please enter your comment!
Please enter your name here

- Advertisment -

Most Popular

ದೇಶದಲ್ಲಿ  24 ಗಂಟೆಗಳಲ್ಲಿ 48,648 ಕೊರೋನಾ ಕೇಸ್ ಪತ್ತೆ!

ನವದೆಹಲಿ : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 48,648 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 80,88,851ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ...

 ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯ ಕಿಡ್ನಾಪ್​!

ಕೊಪ್ಪಳ : ಸಿನಿಮೀಯ ರೀತಿಯಲ್ಲಿ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ಕಿಡ್ನಾಪ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನವೆಂಬರ್ 2 ರಂದು ನಗರಸಭೆ ಚುನಾವಣೆ ನಡೆಯಲಿದ್ದು, ಗಂಗಾವತಿ ನಗರಸಭೆ ಕಾಂಗ್ರೆಸ್ ಸದಸ್ಯ...

ಅಲಹಬಾದ್​ ಹೈಕೋರ್ಟ್ ನಿಗಾದಲ್ಲಿ ಹತ್ರಾಸ್​ ಗ್ಯಾಂಗ್ ರೇಪ್​ ಕೇಸ್ ತನಿಖೆಗೆ ಸುಪ್ರೀಂ ಆದೇಶ

ನವದೆಹಲಿ : ಉತ್ತರ ಪ್ರದೇಶ ಹತ್ರಾಸ್​​​​ ಗ್ಯಾಂಗ್​ ರೇಪ್​​ ಪ್ರಕರಣದ ತನಿಖೆ ಅಲಹಬಾದ್​ ಹೈಕೋರ್ಟ್​ ನಿಗಾದಲ್ಲಿ ನಡೆಯಬೇಕೆಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಸದ್ಯ ಸಿಬಿಐ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದು, ತನಿಖಾ ತಂಡದಲ್ಲಿರುವ ಅಧಿಕಾರಿಗಳನ್ನು ರಾಜ್ಯದಿಂದ...

ಡಿ.ಬಾಸ್​​ಗಾಗಿ ಕನ್ನಡ ಕಲಿತ ಜಗಮಪತಿ ಬಾಬು..!

ಸಾಲ್ಟ್ ಅಂಡ್ ಪೆಪ್ಪರ್ ಲುಕ್​ನಲ್ಲಿ ಸೌತ್​ನಲ್ಲಿ ಸಂಚಲನ ಸೃಷ್ಠಿಸಿರೋ ಜಗಪತಿ ಬಾಬು, ಮತ್ತೊಂದು ನೂತನ ದಾಖಲೆ ಬರೆದಿದ್ದಾರೆ. ಅದೂ ಡಿ ಬಾಸ್ ದರ್ಶನ್​ಗಾಗಿ ಅನ್ನೋದು ವಿಶೇಷ. ಇಷ್ಟಕ್ಕೂ ಮೋಸ್ಡ್ ಡಿಮ್ಯಾಂಡಿಂಗ್ ಜಗಪತಿ ಬಾಬು...

Recent Comments