ಈ ಪುಟ್ಟ ಹಕ್ಕಿಗಿರೋ ಬುದ್ಧಿ ನಮ್ಗೆ – ನಿಮ್ಗೆ ಇಲ್ಲ..!

0
382

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪರಿಸರ ಇದ್ದರೆ ನಾವು,  ನಮ್ಮಿಂದ ಪರಿಸರವಲ್ಲ. ಪರಿಸರಕ್ಕೆ ನಾವು ಮಾಡೋ ಒಳಿತು  ನಮ್ಮನ್ನು ಕಾಪಾಡುತ್ತೆ. ಮನುಷ್ಯ ತುಂಬಾ ಬುದ್ಧಿವಂತ. ಆದ್ರೂ ಕೆಲವೊಂದು ವಿಷಯಗಳ ಬಗ್ಗೆ ಆತನಿಗೆ ನಿರ್ಲಕ್ಷ್ಯ.

ಪರಿಸರ ರಕ್ಷಣೆಯ ವಿಷಯದಲ್ಲಿ ಮನುಷ್ಯ ತೋರಿಸೋ ಅಸಡ್ಡೆ ಮುಂದೊಂದು ದಿನ ಆತನನ್ನೇ ಕಾಡುತ್ತೆ! ಕೈಯಲ್ಲಿರುವ ಕಸವನ್ನು ಪಕ್ಕದಲ್ಲೇ ಇರುವ ಡಸ್ಟ್ ಬಿನ್ ಗೆ ಹಾಕೋವಷ್ಟು ಸೌಜನ್ಯವೂ ಆತನಲ್ಲಿಲ್ಲ. ಈ ಭೂಮಿಯಲ್ಲಿ  ಪರಿಸರ ರಕ್ಷಣೆಯ ಬಗ್ಗೆ ಪ್ರಾಣಿ ಪಕ್ಷಿಗಳಿಗಿರುವಷ್ಟು ಕಾಳಜಿ ಈ ಮನುಷ್ಯನಿಗಿಲ್ಲ.

ಪ್ರಾಣಿ ಪಕ್ಷಿಗಳಿಗಿರುವ ಸಾಮಾನ್ಯ ಅರಿವು ಮನುಷ್ಯನಿಗಿಲ್ಲ ಅನ್ನೋದಕ್ಕೆ ಇಲ್ಲೊಂದು ವಿಡಿಯೋ ಸಾಕ್ಷಿಯಾಗಿದೆ. ಇಲ್ಲಿ ಪಕ್ಷಿಯೊಂದು ಪರಿಸರ ರಕ್ಷಣೆಗೆ ನೀರಲ್ಲಿರುವ ಪ್ಲಾಸ್ಟಿಕ್ ತೆಗೆಯುತ್ತಿದೆ. ಪ್ಲಾಸ್ಟಿಕ್ ಎತ್ತಿ ನೀರನ್ನು ಸ್ವಚ್ಛಗೊಳಿಸುವ ಪಕ್ಷಿಯ ಕೆಲಸ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ. ಐಎಫ್​ಎಸ್ ಅಧಿಕಾರಿ ಸುಸಂಂತ ನಂದ ಟ್ವಿಟರ್​ನಲ್ಲಿ ಶೇರ್ ಮಾಡಿದ್ದಾರೆ. ಈ ಪುಟ್ಟ ಹಕ್ಕಿಗಿರೋ ಬುದ್ಧಿ ನಮ್ಗೆ -ನಿಮ್ಗೆ ಯಾಕಿಲ್ಲ ಅಂತ ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡು, ಇನ್ನಾದ್ರು ಬುದ್ಧಿ ಕಲಿಯಬೇಕು. ಸದ್ಯ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. 

 

LEAVE A REPLY

Please enter your comment!
Please enter your name here