ಆ್ಯಕ್ಸಿಡೆಂಟ್​​ನಲ್ಲಿ ಸಾವನ್ನಪ್ಪಿದ ಭಿಕ್ಷುಕನ ಮನೆ, ಬ್ಯಾಂಕ್​​ ಖಾತೆಯಲ್ಲಿ ಲಕ್ಷ ಲಕ್ಷ ಹಣ..!

0
1232

ಮುಂಬೈ : ಆ್ಯಕ್ಸಿಡೆಂಟ್​​ನಲ್ಲಿ ಮೃತಪಟ್ಟ ಭಿಕ್ಷುಕನ ಮನೆ ಮತ್ತು ಬ್ಯಾಂಕ್​ ಖಾತೆಯಲ್ಲಿ ಲಕ್ಷ ಲಕ್ಷ ರೂ ಸಿಕ್ಕಿದ್ದು, ಅದನ್ನು ಕಂಡು ಪೊಲೀಸರು ದಂಗಾಗಿದ್ದಾರೆ..!
ಕೆಲವು ದಿನಗಳ ಹಿಂದೆ ನಗರದ ರೈಲ್ವೇ ಟ್ರ್ಯಾಕ್​​ ದಾಟುವ ವೇಳೆ ರೈಲಿಗೆ ಸಿಕ್ಕು ಸಾವನ್ನಪ್ಪಿದ ಬುರ್ಜು ಚಂದ್ರ ಆಜಾದ್​​ ಎಂಬ ಭಿಕ್ಷುಕನ ಮನೆಯನ್ನು ಮುಂಬೈ ಪೊಲೀಸರು ಸರ್ಚ್​ ಮಾಡಿದ್ದಾರೆ. ಆ ವೇಳೆ 1.5 ಲಕ್ಷ ರೂನಷ್ಟು ಹಣ ಕಾಯಿನ್ ರೂಪದಲ್ಲೇ ಸಿಕ್ಕಿದೆ..! ಅಷ್ಟೇ ಅಲ್ಲದೆ ಆತನ ಬ್ಯಾಂಕ್​ ಅಕೌಂಟ್​ ಡೀಟೆಲ್ಸ್​ ತೆರೆದು ನೋಡಿದಾಗ ಬರೋಬ್ಬರಿ 8.77 ಲಕ್ಷ ಹಣ ಡೆಪಾಸಿಟ್ ಆಗಿರುವುದು ತಿಳಿದು ಬಂದಿದೆ. ಸದ್ಯ ಲಕ್ಷ ಲಕ್ಷ ಹಣವನ್ನು ಭಿಕ್ಷೆ ಬೇಡಿ ಕೂಡಿಟ್ಟಿದ್ದ ಭಿಕ್ಷುಕ ಬುರ್ಜು ಚಂದ್ರ ಆಜಾದ್​​ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗ್ತಾ ಇದೆ.

LEAVE A REPLY

Please enter your comment!
Please enter your name here