Wednesday, August 27, 2025
Google search engine
HomeUncategorizedಶಾಸಕ ತನ್ವೀರ್ ಸೇಠ್ ವಿರುದ್ಧ ಪ್ರಮೋದ್ ಮುತಾಲಿಕ್ ಗರಂ

ಶಾಸಕ ತನ್ವೀರ್ ಸೇಠ್ ವಿರುದ್ಧ ಪ್ರಮೋದ್ ಮುತಾಲಿಕ್ ಗರಂ

ಶಿವಮೊಗ್ಗ: ಶಿವಮೊಗ್ಗದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ. ಟಿಪ್ಪು ಪ್ರತಿಮೆ ನಿರ್ಮಾಣ ತನ್ವೀರ್ ಸೇಠ್ ಹೇಳಿಕೆ ವಿಚಾರವಾಗಿ ಹೇಳಿಕೆ ನೀಡಿದ್ದಾರೆ.  ಮೈಸೂರಿನಲ್ಲಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡ್ತೇವೆ ಎಂದಿರುವ ಶಾಸಕ ತನ್ವೀರ್ ಸೇಠ್ ಹೇಳಿಕೆಯನ್ನು ಖಂಡಿಸುತ್ತೇನೆ.ಇಸ್ಲಾಂ ನಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ. ಮುಸ್ಲಿಂ ಸಮುದಾಯದವರೇ ಅದನ್ನು ಒಪ್ಪುವುದಿಲ್ಲ.

ಅಲ್ಲಾ ಒಬ್ಬನೇ ದೇವರು, ಉಳಿದವರು ಕಾಫಿರರು ಎನ್ನುವ ಇಸ್ಲಾಂ. ಅಲ್ಲಾ ಹಾಗೂ ಮಹಮ್ಮದ್ ಪೈಗಂಬರ್ ಮೂರ್ತಿ ಇಲ್ಲ.
ತನ್ವೀರ್ ಸೇಠ್ ವಿರುದ್ದ ಮುಸ್ಲಿಂ ಮುಖಂಡರು ಫತ್ವಾ ಹೊರಡಿಸಬೇಕು.ಇಸ್ಲಾಂನಲ್ಲಿ ಮೂರ್ತಿ ಪೂಜೆಗೆ ಅವಕಾಶ ಇಲ್ಲ ಎಂದಾದರೆ ಮುಸ್ಲಿಂ ಮುಖಂಡರು ತನ್ವೀರ್ ಸೇಠ್ ವಿರುದ್ದ ಫತ್ವಾ ಹೊರಡಿಸಬೇಕು. ಅವರ ವಿರುದ್ದ ಬಹಿಷ್ಕಾರ ಹಾಕಬೇಕು. ಟಿಪ್ಪು ಸುಲ್ತಾನ್ ಮತಾಂಧ, ಒಬ್ಬ ದ್ರೋಹಿ, ಕನ್ನಡ ವಿರೋಧಿ. ಸಾವಿರಾರು ದೇವಸ್ಥಾನ ಭಗ್ನಗೊಳಿಸಿ ಮಸೀದಿ ಕಟ್ಟಿಸಿದ ಧೂರ್ತ.ಲಕ್ಷಾಂತರ ಹಿಂದುಗಳನ್ನು ಕ್ರೌರ್ಯದಿಂದ, ಮೋಸದಿಂದ ಮತಾಂತರ ಮಾಡಿದ ವ್ಯಕ್ತಿ. ಅಂತಹವನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಎಲ್ಲಿಯೂ ಮಾಡಲು ಅವಕಾಶ ಕೊಡಲ್ಲ.

ಮೋಸದಿಂದ ಮೈಸೂರು ಮಹಾರಾಜ, ಮಹಾರಾಣಿ ಅವರನ್ನು ಬಂಧನದಲ್ಲಿಟ್ಟು ಹಾಳು ಮಾಡಿದ ಟಿಪ್ಪು. ಪ್ರತಿಮೆ ನಿರ್ಮಾಣದ ವಿರುದ್ದ ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ಹೋರಾಟ ಮಾಡ್ತೀವಿ. ಹಠದಿಂದ ಸ್ವಂತ ಜಾಗದಲ್ಲಿ ಕಟ್ಟುತ್ತೀವಿ ಅಂದ್ರು ಬಿಡಲ್ಲ. ನಿಮ್ದು ಸ್ವಂತ ಜಾಗ ಯಾವ್ದು ಇಲ್ಲ, ಎಲ್ಲಾ ಈ ದೇಶಕ್ಕೆ ಸೇರಿದ್ದು. ಎಲ್ಲಾ ಜಾಗ ಹಿಂದುಗಳದ್ದು, ಭಾರತ ದೇಶದ್ದು.

ಟಿಪ್ಪು ಸುಲ್ತಾನ್ ಗೆ ಕೊಟ್ಟರೆ ನಾಳೆ ಔರಂಗಜೇಬ್, ಬಾಬರ್ ಪ್ರತಿಮೆ ಕಟ್ಟುತ್ತೀರಾ. ಇಸ್ಲಾಂನ ಪ್ರಮುಖರು ಆತ್ಮಸಾಕ್ಷಿಗೆ ಒಪ್ಪುವುದಾದರೆ ನಿಮ್ಮ ಏಕದೇವೋಪಾಸನೆ ಒಪ್ಪಿಲ್ಲ. ನಿಮ್ಮ ತತ್ವ, ಸಿದ್ದಾಂತವನ್ನು ತನ್ವೀರ್ ಗಾಳಿಗೆ ತೂರುತ್ತಿದ್ದಾರೆ. ಒಂದು ವೇಳೆ ನಿರ್ಮಾಣಕ್ಕೆ ಮುಂದಾದರೆ ಚಲೋ ಮೈಸೂರು ಕರೆ ಕೊಡ್ತೀವಿ.

ಬಾಬರ್ ಮಸೀದಿ ಧ್ವಂಸ ಮಾಡಿದ ರೀತಿಯಲ್ಲಿ ಟಿಪ್ಪು ಸುಲ್ತಾನ್ ಮೂರ್ತಿಯನ್ನು ಹೊಡೆದು ಹಾಕ್ತೀವಿ. ನೂರಕ್ಕೆ ನೂರು ತನ್ವೀರ್ ಸೇಠ್ ವಿರುದ್ದ ಮುಸ್ಲಿಂರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮುಸ್ಲಿಂರೇ ಈ ಬಾರಿ ಅವರಿಗೆ ಓಟ್ ಹಾಕುವುದಿಲ್ಲ. ತನ್ವೀರ್ ಸೇಠ್ ಕ್ಷೇತ್ರದಲ್ಲಿ ಎಸ್.ಡಿ.ಪಿ.ಐ. ಬೆಳೆದು ನಿಂತಿದೆ. ಹೋದ ಬಾರಿಯೇ ಸಾಕಷ್ಟು ಮತ ಪಡೆದಿದೆ. ಈ ಬಾರಿ ತನ್ವೀರ್ ಸೇಠ್ ಅವರನ್ನು ಸೋಲಿಸುತ್ತಾರೆ. ಹಾಗಾಗಿಯೇ ಕಟ್ಟರ್ ಮುಸ್ಲಿಂವಾದಿ, ಕಟ್ಟರ್ ಟಿಪ್ಪುವಾದಿ ಅಂತಾ ತೋರಿಸುವ ಪ್ರಯತ್ನ ಮಾಡ್ತಿದ್ದಾರೆ. ಇದಕ್ಕೆ ನಾವಂತೂ ಅವಕಾಶ ಕೊಡುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments