ಇಂದು ನಡೆಯಬೇಕಿದ್ದ ಮದುವೆ ಕ್ಯಾನ್ಸಲ್​; ರಾತ್ರಿ ವೇಳೆ ಗೆಳತಿಯ ಜತೆ ನೇಣಿಗೆ ಯೋಧ ಶರಣು

ಹಾಸನ; ಇಂದು ಬೆಳಿಗ್ಗೆ ಮದುವೆ ಕ್ಯಾನ್ಸಲ್​ ಆದ ಹಿನ್ನಲೆಯಲ್ಲಿ ಮನನೊಂದು ಮಹಿಳೆ ಜೊತೆ ಯೋಧ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹಾಸನ ತಾಲ್ಲೂಕಿನ ಹೊಂಗೆರೆ ಗ್ರಾಮದ ಬಳಿ ಇಂದು ಒಂದೇ ಹಗ್ಗದಲ್ಲಿ ಒಂದೇ ಮರಕ್ಕೆ ಕಿರಣ್ ಹಾಗು ಆಶಾ ನೇಣಿಗೆ ಕೊರಳೊಡ್ದಿದ್ದಾರೆ. ಇಂದು ಯೋಧ ಕಿರಣ್ ಕುಮಾರ್ ಮದುವೆ ನಿಗಧಿಯಾಗಿತ್ತು. ಅದರಂತೆ ಮೊದಲನೇ ಪತ್ನಿಗೆ ಗೊತ್ತಾಗದಂತೆ ಎರಡನೇ ಮದುವೆಯನ್ನ ಕಿರಣ್​ ಆಗುತ್ತಿದ್ದ ವೇಳೆಯಲ್ಲಿ ಇದ್ದಕ್ಕಿದ್ದ ಹಾಗೆ ಮೊದಲನೇ ಹೆಂಡತಿ ಬಂದು ಮದುವೆ ತಡೆದಿದ್ದಳು. ಇದರಿಂದ ಮನನೊಂದ ಕಿರಣ್​ ಮೊದಲನೇ ಪತ್ನಿ ಎನ್ನಲಾದ ಆಶಾಳ ಜತೆಗೆ ನೇಣು ಬಿಗಿದುಕೊಂಡು ಸಾವೀಗಿಡಾಗಿದ್ದಾನೆ.

ಇಂದು ಹಾಸನ ಹೊರವಲಯದ ಕಲ್ಯಾಣ ಮಂಟಪದಲ್ಲಿ ‌ಮದುವೆಗೆ ರೆಡಿಯಾಗಿದ್ದ ಯೋಧ ಕಿರಣ್ ಮದುವೆ. ಈ ವೇಳೆ ತನಗೆ ಮೋಸವಾಗಿದೆ ಎಂದು ಮಹಿಳೆ ಆಶಾ ಆರೋಪ ಮಾಡಿದ್ದಾಳೆ. ಅಲ್ಲದೇ. ಕಿರಣ್ ತನ್ನನ್ನ ಮದುವೆಯಾಗಿ ಮತ್ತೊಂದು ಮದುವೆಯಾಗುತ್ತಿದ್ದಾರೆಂದು ಆರೋಪಿಸಿದ್ದ ಮಹಿಳೆ ಆಶಾ, ಮದುವೆ ಮಂಟಪದಲ್ಲಿ ಗಲಾಟೆ ನಡೆದು ಮಧುವೆ ರದ್ದಾಗಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ವಿಧವಾ ಮಹಿಳೆ ಆಶಾಳನ್ನ ಮದುವೆಯಾಗಿ ಮತ್ತೊಂದು ಮದುವೆ ಆಗಲು ಬಂದಿದ್ದಾರೆಂದು ಮದುವೆ ಮಂಟಪಕ್ಕೆ ಹೋಗಿ ಮಹಿಳೆ ಆಶಾ ಗಲಾಟೆ ನಡೆಸಿದ್ದಳು. ಮಹಿಳೆ ಗಲಾಟೆಯಿಂದ ಮದುವೆ ರದ್ದಾಗಿ ರಾಜಿ ಸಂಧಾನ ಮಾಡಲಾಗಿತ್ತು. ಹಾಸನ ಬಡಾವಣೆ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ಹೇಳಿಕೆ ನೀಡಿ ಯೋಧ ಕಿರಣ್ ವಾಪಸ್ ಹೋಗಿದ್ದ, ರಾಜಿ ಸಂದಾನದ ಬಳಿಕ ತನ್ನ ಗೆಳತಿ ಆಶಾ ಜೊತೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆ ಆರತಕ್ಷತೆ ಡ್ರಸ್ ನಲ್ಲೇ ಹೊಂಗೆರೆ ಅರಣ್ಯದ ಬಳಿ ತೆರಳಿರೋ ಜೋಡಿ, ತನ್ನ ಸಂಬಂದಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರೋದಾಗಿ ತಿಳಿಸಿದ್ದಾನೆ. ಶಾಂತಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES