Saturday, August 23, 2025
Google search engine
HomeUncategorizedಭಾರತ ಇಬ್ಭಾಗವಾಗಿ 2 ದೇಶ, ಇಬ್ಬರು ಪ್ರಧಾನಿ; ಬ್ರಹ್ಮಾಂಡ ಗುರೂಜಿ ಭೀಕರ ಭವಿಷ್ಯ

ಭಾರತ ಇಬ್ಭಾಗವಾಗಿ 2 ದೇಶ, ಇಬ್ಬರು ಪ್ರಧಾನಿ; ಬ್ರಹ್ಮಾಂಡ ಗುರೂಜಿ ಭೀಕರ ಭವಿಷ್ಯ

ಹಾಸನ: ಮೊದಲು ವರ್ಷಕ್ಕೊಮ್ಮೆ ಒಂದೇ ಬಾರಿ ಹಾಸನಾಂಬೆ ದೇವಿ ಬಾಗಿಲು ತೆರಯಲಾಗುತ್ತಿತ್ತು. ಮುಂದುವರೆದ ದಿನಗಳಲ್ಲಿ ಎರಡರಿಂದ ಮೂರು ದಿನ, ಮುಂದಿನ ದಿನಗಳಲ್ಲಿ 10 ರಿಂದ 15 ದಿನ ದೇವಿ ಬಾಗಿಲು ಓಪನ್​ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಹೇಳಿದರು.

ಇಂದು ಹಾಸನಾಂಬೆ ದೇವಿ ದರ್ಶನ ಪಡೆದ ಮಾತನಾಡಿದ ಬ್ರಹ್ಮಾಂಡ ಗುರೂಜಿ, ಇನ್ಮುಂದೆ ದೇಶದ ಮೇಲೆ, ಜನಗಳ ಮೇಲೆ ಒತ್ತಾಯ, ಒತ್ತಡಗಳು ಜಾಸ್ತಿ ಆಗುತ್ತದೆ. ಮೊದಲು ಕದ್ದುಮುಚ್ಚಿ ಅಧಿಕಾರಿಗಳು ಲಂಚ ತೆಗೆದುಕೊಳ್ಳುತ್ತಿದ್ದರು, ಈಗ ಎಲ್ಲಾ ಓಪನ್ ನಡೆಯಲಿದೆ. ದೇಶದ ಬಗ್ಗೆ ಮಾತನಾಡಿದಾಗ ನನ್ನನ್ನು ಟ್ರೋಲ್ ಮಾಡ್ತಾರೆ ಎಂದರು.

ಕಲಿಯುಗ ಅಂತ್ಯ ಕಾಲಕ್ಕೆ ದೇಶದಲ್ಲಿ ರೋಗ ರುಜಿನೆಗಳು ಜಾಸ್ತಿ ಆಗುತ್ತದೆ. ಡಿಸೆಂಬರ್ ಅಂತ್ಯಕ್ಕೆ ಐದು ಗ್ರಹಗಳು ಒಟ್ಟಿಗೆ ಬರುತ್ತೆದೆ, ಒಂಭತ್ತು ತಿಂಗಳು ಕೂರುತ್ತದೆ. ಎರಡು ಗ್ರಹಣಗಳ ಹತ್ತಿರ ಬರಬಾರದು. ಆಗ ಜನರಿಗೆ ನೀರಿನ‌ ಅಭಾವ, ಬೆಂಕಿ, ಗಲಾಟೆ, ಘರ್ಷಣೆ, ಸ್ವಂತದವರ ಹತ್ತಿರ ಘರ್ಷಣೆಗಳು ನಡೆಯುತ್ತವೆ ಎಂದು ಭವಿಷ್ಯ ನುಡಿದರು.

ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ದೇವರ ಸತ್ಯವಾಗಿ 31 ವರ್ಷದೊಳಗೆ ಕರ್ನಾಟಕ ಮೂರು ಭಾಗ ಆಗುತ್ತದೆ. ಮೂರು ಮುಖ್ಯಮಂತ್ರಿ, ಮೂವರು ವಿಶೇಷವಾಗಿ ರಾಜ್ಯಪಾಲರಾಗುತ್ತಾರೆ. ಶಿವನ ಆಣೆ ಮೇಲೆ ಸತ್ಯ
ಹಾಸನಾಂಬೆ ಸನ್ನಿಧಿಯಲ್ಲಿ ಹೇಳುತ್ತೇನೆ.

31 ವರ್ಷದಲ್ಲಿ ಹೀಗೆ ಆಗಬೇಕು ಅಂತ ನಾನು ಹೇಳಿದ್ದಲ್ಲ. ಭಾರತ ದೇಶ ಎರಡು ಆಗುತ್ತದೆ. ಎರಡು, ಎರಡು ರಾಷ್ಟ್ರಪತಿ ಆಗೋದು ಸತ್ಯವಾಗಿದೆ. ವೀರ ಬ್ರಮ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನವನ್ನ ಈ ರೀತಿಯ ವಿಷಯ ಬರೆದು ಇಟ್ಟಿದ್ಧಾರೆ. ಇದು ನಡೆಯೋದು ನಿಜ, ಸತ್ಯ ಎಂದು ಬ್ರಹ್ಮಾಂಡ ಗುರೂಜಿ ಗಟ್ಟಿ ಭವಿಷ್ಯ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments