ರಾಜ್ಯದಲ್ಲಿ 9ನೇ ದಿನಕ್ಕೆ ಕಾಲಿಟ್ಟ ಭಾರತ್‌ ಜೋಡೊ ಯಾತ್ರೆ

ತುಮಕೂರು : ರಾಜ್ಯದಲ್ಲಿ 9ನೇ ದಿನಕ್ಕೆ ಕಾಲಿಟ್ಟ ಭಾರತ್‌ ಜೋಡೊ ಯಾತ್ರೆ ಚಿಕ್ಕನಾಯಕನಹಳ್ಳಿಯ ಪೊಚ್ಕಟ್ಟೆಯಿಂದ ಪಾದಯಾತ್ರೆ ಶುರುವಾಗಿದೆ.

ಹುಳಿಯಾರಿನ ಕೆಂಕೆರೆವರೆಗೂ ಸಾಗಲಿರುವ ಪಾದಯಾತ್ರೆ, ತುಂತುರು ಮಳೆ ನಡುವೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ. ಇಂದು ಪಾದಯಾತ್ರೆಗೆ ಮತ್ತೆ ಗೈರಾದ ಮಾಜಿ ಸಿಎಂ ಸಿದ್ದರಾಮಯ್ಯ, ರಾಯಚೂರು ಮತ್ತು ಬಳ್ಳಾರಿ ಸಿದ್ದತೆ ಪರಿಶೀಲನೆಗೆ ತೆರಳಲಿರುವ ಸಿದ್ದರಾಮಯ್ಯ ಇಂದು ಮತ್ತು ನಾಳಿನ ಪಾದಯಾತ್ರೆಗೆ ಗೈರಾಗಲಿದ್ದಾರೆ.

ಇನ್ನು, ಸಮಾವೇಶ ಹಾಗೂ ಪಾದಯಾತ್ರೆ ಸಿದ್ಧತೆಗೆ ಕುರಿತು ಸಿದ್ದರಾಮಯ್ಯ ಪರಿಶೀಲನೆ ನಡೆಸಿದ್ದು, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್, ವೇಣುಗೋಪಾಲ್‌,K.N.ರಾಜಣ್ಣ ಭಾಗಿಯಾಗಲಿದ್ದಾರೆ. ಅರಣ್ಯ ಪ್ರದೇಶ ಇರುವ ಹಿನ್ನೆಲೆಯಲ್ಲಿ ಹುಳಿಯಾರುನಿಂದ 38 ಕಿ.ಮೀ.ಕಾರಿನಲ್ಲೇ ಸಾಗಲಿದ್ದಾರೆ. ಸಂಜೆ 4 ಗಂಟೆಗೆ ಹಿರಿಯೂರಿನಿಂದ ಕೇದಾರೇಶ್ವರ ಸನ್ನಿಧಿಯಲ್ಲಿ ಇಂದಿನ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ.

RELATED ARTICLES

Related Articles

TRENDING ARTICLES