ಪಶ್ಚಿಮ ಬಂಗಾಳ: ಕಾಡು ಪ್ರಾಣಿಗಳು ವಸತಿ ಪ್ರದೇಶಗಳಿಗೆ ಲಗ್ಗೆ ಇಟ್ಟಿರುವುದನ್ನ ನಾವು ಕಂಡಿದ್ದೇವೆ. ಆದರೆ ಇಲ್ಲೊಂದು ಆನೆ ಆಸ್ಪತ್ರೆ ನುಗ್ಗಿದ ಘಟನೆ ಪಶ್ಚಿಮ ಬಂಗಾಳದ ಸೇನಾ ಕಂಟೋನ್ಮೆಂಟ್ನಲ್ಲಿ ನಡೆದಿದೆ.
ಪಶ್ಚಿಮ ಬಂಗಾಳದ ಜಲಪಾಯ್ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ಆನೆ ನುಗ್ಗಿದೆ. ಹೊರಗಡೆಯಿಂದ ಆನೆ ಆಸ್ಪತ್ರೆ ಒಳಗಡೆ ಪ್ರವೇಶಿಸಿದೆ. ಅಲ್ಲದೇ, ಬಾಗಿಲು ನಲ್ಲಿ ಆನೆ ಕೆಳಗಡೆ ಬಗ್ಗಿ ಹೋಗುತ್ತದೆ. ಇನ್ನು ಆಸ್ಪತ್ರೆಯಲ್ಲಿದ್ದ ಒಳಗಿನ ಜನರು ದೂರದಿಂದಲೇ ಆನೆಯ ವಿಡಿಯೋವನ್ನ ಸೆರೆಯಿಡಿದರು.
ಇನ್ನು ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ವಿಧದಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಅರಣ್ಯ ನಾಶದ ಪರಿಣಾಮ ಆನೆಗಳು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿವೆ ಎಂದು ಕಾಳಜಿ ವ್ಯಕ್ತಪಡಿಸಿದ್ದರೆ, ಕೆಲವರು ಆನೆಗಳು ತಮ್ಮ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗೆ ಬಂದಿದ್ದವು ಎಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ಧಾರೆ.
Elephant in Binnaguri Army Hospital. pic.twitter.com/KJeCuRJgJG
— Office of Dilip Ghosh (@DilipGhoshOff) September 5, 2022


