ರಾಹುಲ್​ ಗಾಂಧಿ ಧರಿಸುವ ಟೀ ಶರ್ಟ್ ಬೆಲೆ​ ಬರೊಬ್ಬರಿ 41 ಸಾವಿರ.!

ನವದೆಹಲಿ: ದೇಶದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸುತ್ತಿರುವ “ಭಾರತ್ ಜೋಡೋ ಯಾತ್ರೆ” ಯಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಧರಿಸಿದ್ದ ಟೀ ಶರ್ಟ್​ ಬೆಲೆ ಬರೊಬ್ಬರಿ 41 ಸಾವಿರ ರೂ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ರಾಷ್ಟ್ರೀಯ ಬಿಜೆಪಿ ಟ್ವೀಟ್​ ಮಾಡಿ, ಒಂದು ಚಿತ್ರದಲ್ಲಿ ರಾಹುಲ್​ ಗಾಂಧಿ ಧರಿಸಿದ್ದ ಟೀ ಶರ್ಟ್,​ ಇನ್ನೊಂದು ಚಿತ್ರದಲ್ಲಿ ರಾಹುಲ್​ ಟೀ ತೊಟ್ಟಿದ್ದ ಟಿ-ಶರ್ಟ್ ಆನ್​ಲೈನಲ್ಲಿರುವ 41,257 ರೂ ಬೆಲೆಯನ್ನ ಟ್ವೀಟ್ ಮಾಡಿದೆ.

ಕಳೆದ ಎರಡು ದಿನದ ಇಂದೆ ಕನ್ಯಾಕುಮಾರಿಯಿಂದ ಕಾಂಗ್ರೆಸ್​ ಪಕ್ಷ “ಭಾರತ್ ಜೋಡೋ ಯಾತ್ರೆ” ಆರಂಭ ಮಾಡಿದೆ. ಈ ಯಾತ್ರೆಯ ನೇತೃತ್ವವನ್ನು ನಾನು ವಹಿಸುತ್ತಿಲ್ಲ ಅದರಲ್ಲಿ ಭಾಗವಹಿಸುತ್ತಿದ್ದೇನೆ. ದೇಶದಲ್ಲಿ ದ್ವೇಷ ಹರಡುತ್ತಿರುವ ಬಿಜೆಪಿ-ಆರ್‌ಎಸ್‌ಎಸ್ ಮುಖವಾಡವನ್ನು ಜನರ ಎದುರುಗಡೆ ಇಡುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದರು.

RELATED ARTICLES

Related Articles

TRENDING ARTICLES