`ನಮೋ’ ಭಾರತದ ಸೆಂಟ್ರಲ್‌ ವಿಸ್ತಾಗೆ ಹೊಸ ಮೆರುಗು

ನವದೆಹಲಿ : ಭಾರತವನ್ನು ಬ್ರಿಟೀಷರು ಆಳಿದ್ರು.. ಆದ್ರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಅವರನ್ನು ಗುರಿತಿಸಿಕೊಳ್ಳುವಂತಹ ಕುರುಹುಗಳು ದೇಶದಲ್ಲಿ ಬಿಟ್ಟು ಹೋದ್ರು. ಹಾಗೆ ಬಿಟ್ಟು ಹೋದ ಚಿನ್ಹೆಗಳಿಗೆ ಸಾಕ್ಷಿಯಾಗಿತ್ತು ದೆಹಲಿಯ ರಾಜಪಥ ಅಥವಾ ಕಿಂಗ್ಸ್‌ ವೇ ಕೂಡ ಒಂದು.

ಆದ್ರೆ, ಭಾರತ ಬದಲಾಗಿದೆ. ಬ್ರಿಟಿಷರ ದಾಸ್ಯದ ನೆನವು ಮರೆತು ಹೋಗ್ತಿದೆ. ಇತಿಹಾಸದ ಪುಟಗಳಲ್ಲಿ ಭಾರತವನ್ನು ಆಳಿದ ಅನ್ಯ ದೇಶದವರು ಈಗ ಮೋದಿ ಯುಗವನ್ನು ನೋಡಿ ಆನಂದಿಸ್ತಿದ್ದಾರೆ. ಅದಕ್ಕೆ ಕಾರಣ ಭಾರತದ ವೇಗವಾದ ಅಭಿವೃದ್ಧಿ. ಹಾಗು ಪ್ರಧಾನಿ ನರೇಂದ್ರ ಮೋದಿಯವರು ಜಗ ಮೆಚ್ಚುವ ಕೆಲಸಗಳು.

ಅತ್ಯಾಧುನಿಕತೆಯ ಭಾರತವನ್ನಾಗಿಸುವ ಮೋದಿಯ ಗುರಿ ಪ್ರತಿಸಲವೂ ಸಾಬೀತಾಗಿದೆ. ಇದೀಗ, ನಮೋ ಧ್ಯಾನ ರಾಜಪಥದ ಮೂಲಕ ಮತ್ತೊಮ್ಮೆ ಜಗತ್ತಿಗೆ ಗೊತ್ತಾಗುತ್ತಿದೆ. ಹೌದು, ರಾಷ್ಟ್ರ ರಾಜಧಾನಿ ದೆಹಲಿಯ ಹೃದಯಭಾಗದಲ್ಲಿರುವ ಐತಿಹಾಸಿಕ ರಾಜಪಥ ಮತ್ತು ಸೆಂಟ್ರಲ್ ವಿಸ್ತಾ ಲಾನ್ಸ್ ಇನ್ಮುಂದೆ ಕರ್ತವ್ಯ ಪಥವಾಗಿ ಬದಲಾಗಿದೆ.

ಹೌದು, ಬ್ರಿಟಿಷರ ಕಾಲವನ್ನು ನೆನಪಿಸುವ ಹೆಸರುಗಳು ಮತ್ತು ಚಿಹ್ನೆಗಳನ್ನು ಮರೆಯಾಗಿಸಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಬ್ರಿಟಿಷರ ಕಲ್ಪನೆಯಾಗಿದ್ದ ಕಿಂಗ್ಸ್‌ ವೇಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಗಮನ ಸೆಳೆಯಲಿದೆ. ರಾಷ್ಟ್ರಪತಿ ಭವನದವರೆಗಿನ ಸಂಪೂರ್ಣ ವಿಸ್ತಾರವನ್ನು ಇನ್ನುಮುಂದೆ ಕರ್ತವ್ಯ ಪಥ ಎಂದು ಕರೆಯಲಾಗುತ್ತದೆ. ಆಗಸ್ಟ್ 15 ರಂದು ಕೆಂಪು ಕೋಟೆಯ ಆವರಣದಿಂದ ಮಾಡಿದ ಭಾಷಣದಲ್ಲಿ, ವಸಾಹತುಶಾಹಿ ಮನಸ್ಥಿತಿಗೆ ಸಂಬಂಧಿಸಿದ ಚಿಹ್ನೆಗಳ ನಿರ್ಮೂಲನೆಗೆ ಪ್ರಧಾನಿ ಮೋದಿ ಒತ್ತು ನೀಡಿದ್ದರು.

ಅದ್ರಂತೆ, ಕಳೆದ ವಾರ ದೇಶದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಉಡಾವಣೆ ಸಂದರ್ಭದಲ್ಲಿ ನೌಕಾಪಡೆಯು ತನ್ನ ಧ್ವಜವನ್ನು ಬದಲಾಯಿಸಿತು. ಈ ಹಿಂದೆ ಪ್ರಧಾನಿ ನಿವಾಸವಿರುವ ರಸ್ತೆಯ ಹೆಸರನ್ನು ರೇಸ್ ಕೋರ್ಸ್ ರಸ್ತೆಯಿಂದ ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಗಿತ್ತು.
ಇದೀಗ ರಾಜಪಥವನ್ನು ಕರ್ತವ್ಯ ಪಥ ಎಂದು ಮರುನಾಮಕರಣ ಮಾಡಲಾಗಿದೆ. ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಕಿಂಗ್ ಜಾರ್ಜ್ ಪ್ರತಿಮೆ ಇದ್ದ ಜಾಗದಲ್ಲಿ ನೇತಾಜಿಯ ಪ್ರತಿಮೆ ಸ್ಥಾಪಿಸಲಾಗಿದೆ.

ಸೆಂಟ್ರಲ್‌ ವಿಸ್ತಾ ಪ್ರದೇಶದಲ್ಲಿರುವ ಇಂಡಿಯಾ ಗೇಟ್‌ನಿಂದ ರಾಷ್ಟ್ರಪತಿ ಭವನದವರೆಗೆ ವ್ಯಾಪಿಸಿರುವ ರಸ್ತೆಯೇ ರಾಜಪಥ. ಗಣರಾಜ್ಯೋತ್ಸವದ ಪಥಸಂಚಲನ ನಡೆಯುವುದು ಇದೇ ರಾಜಪಥದಲ್ಲಿ. 1911ರಲ್ಲಿ ಬ್ರಿಟನ್‌ ರಾಜ 5ನೇ ಜಾರ್ಜ್‌ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ಈ ರಸ್ತೆ, ಅದರ ಇಕ್ಕೆಲದಲ್ಲಿನ ಕೊಳ ಮತ್ತು ಹುಲ್ಲುಹಾಸನ್ನು ಅಭಿವೃದ್ಧಿಪಡಿಸಲಾಗಿತ್ತು. ಈ ಕಾರಣದಿಂದ ಈ ಮಾರ್ಗಕ್ಕೆ ಕಿಂಗ್ಸ್‌ವೇ ಎಂದು ಹೆಸರಿಡಲಾಗಿತ್ತು. ನಂತರದಲ್ಲಿ ಇದನ್ನು ರಾಜಪಥ ಎಂದು ಬದಲಿಸಲಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಕರ್ತವ್ಯ ಪಥವಾಗಿ ಬದಲಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕರ್ತವ್ಯ ಪಥವನ್ನು ಲೋಕಾರ್ಪಣೆಗೊಳಿಸಿದ್ದಾರೆ. 20 ತಿಂಗಳ ಹಿಂದೆ ನವೀಕರಣ ಕೆಲಸ ಆರಂಭಗೊಂಡಿತ್ತು. ಇದೀಗ, ಸಾರ್ವಜನಿಕರಿಗೆ ನವೀಕೃತ ಭಾಗದ ಮುಕ್ತ ಭೇಟಿಗೆ ಅವಕಾಶ ನೀಡಲಾಗಿದೆ. ಆಹಾರ ಮಳಿಗೆ, ಗ್ರಾನೈಟ್‌ ಪಾದಚಾರಿ ಪಥ, ಉದ್ಯಾನವನ ಎಲ್ಲವೂ ಜನರಿಗೆ ಖುಷಿಯ ವಾತಾವರಣ ಸೃಷ್ಟಿಸಲಿದೆ.

RELATED ARTICLES

Related Articles

TRENDING ARTICLES