ಗಣಿನಾಡಿನಲ್ಲಿ ಚಿರತೆ, ಕರಡಿ ಕಾಟಕ್ಕೆ ಜನ ತತ್ತರ

ಬಳ್ಳಾರಿ : ನಗರದ ಸಂಜಯಗಾಂಧಿ ನಗರದ ನಿವಾಸಿಗಳು ಕಳೆದ ಎರಡು- ಮೂರು ದಿನಗಳಿಂದ ಆತಂಕದಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ.ಮನೆಯಿಂದ ಹೊರಗಡೆ ಬರಲು ಹಿಂದೇಟು ಹಾಕುವಂಥಾ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕೇಂದ್ರೆ, ಚಿರತೆ ಯಾವ ಕ್ಷಣದಲ್ಲಾದ್ರೂ ಗುಡ್ಡದ ಕೆಳಗಡೆ ಇಳಿಯುವ ಸಾಧ್ಯತೆ ಇದೆ. ಕಳೆದ ಮೂರು ದಿನಗಳಿಂದ ಅರಣ್ಯಾಧಿಕಾರಿಗಳು ಚಿರತೆ ಸೆರೆಗೆ ಕಾರ್ಯಾಚರಣೆ ಮಾಡುತ್ತಿದ್ದಾರೆ.ನಾಲ್ಕು ಕಡೆ ಬೋನು ಅಳವಡಿಸಿದ್ದಾರೆ. ಆದರೆ, ಚಿರತೆ ಇದುವರೆಗೆ ಸೆರೆಯಾಗಿಲ್ಲ. ಹೀಗಾಗಿ ಈಗ ಗುಡ್ಡದ ಮೇಲಿರುವ ಚಿರತೆಯನ್ನು ಪತ್ತೆ ಹಚ್ಚಲು ಅರಣ್ಯಾಧಿಕಾರಿಗಳು ಡ್ರೋಣ್ ಕ್ಯಾಮರಾದ ಮೊರೆ ಹೋಗಿದ್ದಾರೆ.

ಡ್ರೋಣ್ ಕ್ಯಾಮರಾದ ಜೊತೆಗೆ ಟ್ರ್ಯಾಪ್ ಕ್ಯಾಮರಾ ಕೂಡ ಎಂಟು ಕಡೆ ಆಳವಡಿಸಲಾಗಿದೆ. ಈ ಟ್ರ್ಯಾಪ್ ಕ್ಯಾಮರಾದಲ್ಲಿ ಯಾವುದೇ ಪ್ರಾಣಿ ಆ ಭಾಗದಲ್ಲಿ ಸಂಚಾರ ಮಾಡಿದ್ರೆ ಫೋಟೋ ಜೊತೆಗೆ ವಿಡಿಯೋ ರೆಕಾರ್ಡ್ ಮಾಡುತ್ತಿದೆ. ಈ ಮೂಲಕ ಚಿರತೆ ಗುಡ್ಡದಲ್ಲಿ ಯಾವ ಭಾಗದಲ್ಲಿ ಇದೆ ಅನ್ನೋದನ್ನ ಪತ್ತೆ ಹಚ್ಚಬಹುದಾಗಿದೆ. ಹುಲಿ ಸೇರಿದಂತೆ ವಿವಿಧ ಪ್ರಾಣಿಗಳ ಸೆರೆಗಾಗಿ ಈ ಟ್ರ್ಯಾಪ್ ಕ್ಯಾಮರಾ ಬಳಕೆ ಮಾಡಲಾಗುತ್ತಿದೆ.

ಇನ್ನೊಂದೆಡೆ ಬಳ್ಳಾರಿ ತಾಲೂಕಿನ ಹಲಕುಂದಿ ಗ್ರಾಮದಲ್ಲಿ ರಾತ್ರಿ ವೇಳೆ ಕರಡಿ ಪ್ರತ್ಯಕ್ಷವಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕರಡಿ ಗ್ರಾಮಕ್ಕೆ ಬಂದಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಒಟ್ನಲ್ಲಿ ಕಾಡಿನಿಂದ ನಾಡಿಗೆ ಬರುವ ಚಿರತೆ, ಕರಡಿಗಳ ಸಂಖ್ಯೆ ಹೆಚ್ಚಾಗಿದ್ದು,ಜನರ ಆತಂಕಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES