ಕೆಜಿಎಫ್ ಸುಲ್ತಾನನ ಬಗ್ಗೆ ಸಾವಿರ ಪುಟಗಳು ಬರೆದರೂ ಸಾಲೊಲ್ಲ. ಅದ್ಭುತ ಪದಗಳಲ್ಲಿ ವರ್ಣಿಸಿದರೂ ಜಾಸ್ತಿ ಏನಲ್ಲ. ವರ್ಲ್ಡ್ ಇಸ್ ಮೈ ಟೆರಿಟರಿ ಅನ್ನೋ ಸಿಂಗಲ್ ವರ್ಡ್ ಹಿಂದೆ ರಾಕಿಭಾಯ್ ದೂರದೃಷ್ಟಿ ಎಷ್ಟು ಅನ್ನೋದು ಇಡೀ ಪ್ರಪಂಚಕ್ಕೆ ಗೊತ್ತಾಗಿದೆ. ಇದೀಗ ಸೂರ್ಯ ಮುಳುಗದ ನಾಡು ಜಪಾನ್ ಕಡಲ ಕಿನಾರೆಗೂ ಮಾಸ್ಟರ್ ಪೀಸ್ ಹೆಜ್ಜೆ ಗುರುತು ಬಿದ್ದಾಗಿದೆ. ಯೆಸ್. ರಾಕಿಭಾಯ್ ತಾಕತ್ತು ಎಂತದ್ದು ಅನ್ನೋದನ್ನ ಮತ್ತೊಮ್ಮೆ ಸಾರಿ ಹೇಳ್ತೀವಿ. ನೀವೇ ಓದಿ.
- ಸುವರ್ಣಾಕ್ಷರಗಳಲ್ಲಿ ರಾಕಿಭಾಯ್ ಸಾಧನೆ ಗುಣಗಾನ
ಧರೆಯೇ ಹೊತ್ತಿ ಉರಿದರೂ ಸಾಗಿ ಬಂದ ರಾಕಿಭಾಯ್ ಯಶಸ್ಸಿನ ಹಾದಿಯನ್ನು ಯಾರೇ ನೋಡಿದರೂ ಮೈ ರೋಮಾಂಚನವಾಗುತ್ತೆ. ಒಬ್ಬ ಬಸ್ ಡ್ರೈವರ್ ಮಗನ ದೊಡ್ಡ ಕನಸಿನ ಹಾದಿಯೇ ರೋಚಕವಾಗಿದೆ. ಯಶ್ ಸಿನಿಕರಿಯರ್ ಎಲ್ಲರಿಗೂ ಮಾದರಿಯಾಗಿ ನಿಲ್ಲುತ್ತೆ. ಕನ್ನಡದ ನಟನಾಗಿ ಇಂದು ಜಗತ್ತಿನಾದ್ಯಂತ ಎಲ್ಲರೂ ಕೊಂಡಾಡೋ ಲೆವೆಲ್ಗೆ ಬೆಳೆದು ನಿಂತಿದ್ದಾರೆ ರಾಕಿಂಗ್ ಸ್ಟಾರ್. ಪ್ರಪಂಚದ ಯಾವ ಮೂಲೆಗೆ ಹೋದ್ರು ಕನ್ನಡದ ರಾಕಿಭಾಯ್ ಬಗ್ಗೆ ಮಾತನಾಡುತ್ತಾರೆ. ನಮಗೆ ಯಶ್ ಅಂದ್ರೆ ತುಂಬಾ ಇಷ್ಟ ಅಂತಾ ಹಾಡಿ ಹೊಗಳುತ್ತಾರೆ.

ನಾವಾಡೋ ಮಾತುಗಳು ಕೆಲವರಿಗೆ ಉತ್ಪ್ರೇಕ್ಷೆ ಅನಿಸಿದರೂ, ಅದನ್ನು ಪ್ರೂವ್ ಮಾಡೋ ವಾಸ್ತವ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ. ಯೆಸ್. ಇದೀಗ ಸೂರ್ಯ ಮುಳುಗದ ನಾಡು, ಟೆಕ್ನಾಲಜಿಯಲ್ಲಿ ಇಡೀ ವಿಶ್ವವೇ ನಿಬ್ಬೆರಗಾಗುವ ಮಟ್ಟಿಗೆ ಹೆಸ್ರು ಮಾಡಿರೋ ಜಪಾನ್ನಲ್ಲಿ ಯಶ್ ಹೆಸ್ರು ಮೊಳಗುತ್ತಿದೆ. ಜಪಾನ್ನ ಮ್ಯಾಗಜಿನ್ ಪತ್ರಿಕೆಯೊಂದರಲ್ಲಿ ಯಶ್ ಕುರಿತಾಗಿ ದೊಡ್ಡ ಆರ್ಟಿಕಲ್ ಪ್ರಕಟವಾಗಿದೆ. ಈ ಮೂಲಕ ಕನ್ನಡದ ಸ್ಟಾರ್ ನಟ ಜಪಾನ್ನಲ್ಲಿ ಗುಡುಗ್ತಿದ್ದಾನೆ.
- ಕೆಜಿಎಫ್ ಸಕ್ಸಸ್ಫುಲ್ ಜರ್ನಿ ಕುರಿತು ವಿಶೇಷ ವರದಿ..!
- ಬುನ್ಷುನ್ ಪತ್ರಿಕೆ ಮುಖಪುಟದಲ್ಲಿ ತೂಫಾನ್ ಅಬ್ಬರ
ಕೆಜಿಎಫ್ ಸಿನಿಮಾ ಇಡೀ ಸಿನಿ ಇತಿಹಾಸದಲ್ಲಿ ಹೊಸ ದಾಖಲೆ ಬರೆದದ್ದು ಎಲ್ಲರಿಗೂ ಗೊತ್ತೆ ಇದೆ. ಒಟ್ಟು 1250 ಕೋಟಿಗೂ ಅಧಿಕ ಲಾಭ ಗಳಿಸಿದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಚಾಪ್ಟರ್ 2. ಈ ಸಿನಿಮಾದ ಸಕ್ಸಸ್ ಜರ್ನಿ ಬಗ್ಗೆ ಸಿನಿಮಾ ರಂಗದಲ್ಲಿ ಎಲ್ಲರಿಗೂ ಕುತೂಹಲವಿದೆ. ಈ ಚಿತ್ರದ ಮೇಕಿಂಗ್ ಸ್ಟೈಲ್ನಾ ಇತ್ತೀಚೆಗೆ ಎಲ್ಲರೂ ಕಾಪಿ ಪೇಸ್ಟ್ ಮಾಡ್ತಿದ್ದಾರೆ. ಹಾಗಾಗಿಯೇ ಜಪಾನ್ ದೇಶದ ಜನಪ್ರಿಯ ಪತ್ರಿಕೆ ಬುನ್ಶುನ್ ಮ್ಯಾಗಜಿನ್ ಮುಖಪುಟದಲ್ಲಿ ಕೆಜಿಎಫ್ ಸಕ್ಸಸ್ ಬಗ್ಗೆ ವರದಿ ಪ್ರಕಟವಾಗಿದೆ.

ಕೆಜಿಎಫ್ ಸಿನಿಮಾವನ್ನು ಕೇವಲ ಭಾರತೀಯ ಚಿತ್ರರಂಗ ಮಾತ್ರ ಒಪ್ಪಿಕೊಂಡಿದ್ದಲ್ಲದೇ ಇಡೀ ವಿಶ್ವವೇ ಅಪ್ಪಿ ಮುದ್ದಾಡಿದೆ. ರಾಕಿಂಗ್ ಸ್ಟಾರ್ ಆ್ಯಕ್ಟಿಂಗ್ ಮ್ಯಾನರಿಸಂಗೆ ಕ್ಲೀನ್ ಬೋಲ್ಡ್ ಆಗಿದೆ. ಜಪಾನ್ ಮ್ಯಾಗ್ಜಿನ್ನಲ್ಲಿ ಪ್ರಕಟಗೊಂಡಿರೋ ಕೆಜಿಎಫ್ ಸಕ್ಸಸ್ಫುಲ್ ಜರ್ನಿಯ ಲೇಖನ ಕಂಡು ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ. ಇದ್ರ ಜತೆಯಲ್ಲಿ ಆರ್ಆರ್ಆರ್ ಚಿತ್ರದ ಬಗ್ಗೆಯೂ ಕೂಡ ಬರೆಯಲಾಗಿದೆ. ಒಟ್ಟಾರೆ ಭಾರತೀಯ ಚಿತ್ರರಂಗದಲ್ಲಿ ಬಾಕ್ಸ್ಆಫೀಸ್ ಧೂಳೆಬ್ಬಿಸಿದ ಸಿನಿಮಾಗಳ ಬಗ್ಗೆ ಜಪಾನ್ ಆಸಕ್ತಿ ತೋರಿದೆ.
ಗಲ್ಲಿಯಿಂದ ದಿಲ್ಲಿವರೆಗೂ ಯಶ್ ಸಿನಿಮಾಗಳ ಬಗ್ಗೆ ಚರ್ಚೆ ನಡೀತಿದ್ರೆ, ಯಶ್ ಮಾತ್ರ ಯುರೋಪ್, ಇಟಲಿ ಪ್ರವಾಸ ಅಂತಾ ಜಾಲಿಮೂಡ್ನಲ್ಲಿದ್ದಾರೆ. ರಿಲ್ಯಾಕ್ಸ್ ಮೂಡ್ ನಡುವೆ ಯಾವುದೋ ದೊಡ್ಡ ಪ್ರಾಜೆಕ್ಟ್ ಬಗ್ಗೆ ಪ್ಲಾನ್ ಮಾಡ್ತಾ ಇರಬಹುದಾ ಅನ್ನೋ ಗುಸು ಗುಸು ಮಾತುಗಳು ಕೇಳಿದ್ದರೂ ಯಶ್ರ ಹತ್ತೊಂಬತ್ತನೇ ಸಿನಿಮಾ ಮೇಲೆ ಬೆಟ್ಟದಷ್ಟೂ ನೀರೀಕ್ಷೆ ಇದೆ. ಪ್ಯಾನ್ ಇಂಡಿಯಾ ದಾಟಿ ಗ್ಲೋಬಲ್ ಲೆವೆಲ್ಗೆ ಮಿಂಚೋಕೆ ಯಶ್ ತಯಾರಿ ನಡೆಸಿದ್ದಾರಾ ಅನ್ನೋ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ


