ದೊಡ್ಮನೆ ಧೀರೇನ್ ಎಂಟ್ರಿಗೆ ಫಿಕ್ಸ್ ಆಯ್ತು ಶುಭ ಗಳಿಗೆ

ದೊಡ್ಮನೆಯ ಮತ್ತೊಂದು ಕುಡಿ ಧೀರೇನ್​ ರಾಮ್​​ಕುಮಾರ್ ಶಿವ 143 ಚಿತ್ರದ ಮೂಲಕ ಗ್ರ್ಯಾಂಡ್​ ಎಂಟ್ರಿ ಕೊಡ್ತಿದ್ದಾರೆ. ಚೊಚ್ಚಲ ಚಿತ್ರದ ಟ್ರೈಲರ್​​ ರಿಲೀಸ್​ ಆಗಿದ್ದು, ಫಸ್ಟ್​ ಕ್ಲಾಸ್​ ಅಭಿನಯದ ಮೂಲಕ ಹೊಸ ಭರವಸೆ ಮೂಡಿಸಿದ್ದಾರೆ. ಅಂತೂ ಪದಾರ್ಪಣೆ ಸಿನಿಮಾದಲ್ಲೇ ಪ್ರೇಕ್ಷಕರ ದಿಲ್​​ ಗೆಲ್ಲೋ ಮೂಲಕ ಕನ್ನಡ ಚಿತ್ರರಂಗದಲ್ಲಿ ಭವಿಷ್ಯದ ನಾಯಕನಾಗಿ ಕಾಣಿಸಿದ್ದಾರೆ. ಯೆಸ್​​. ಧೀರೇನ್​​ ಉಗ್ರವತಾರ ಹೇಗಿದೆ ನೋಡ್ಬೇಕಾ..?  ಹಾಗಾದರೆ ಈ ಸ್ಟೋರಿ ಓದಿ.

  • ಶಿವನ ಉಗ್ರಾವತಾರ ನೋಡಲು ಕೌಂಟ್​​ಡೌನ್​ ಸ್ಟಾರ್ಟ್​​​

ಕನ್ನಡ ಚಿತ್ರರಂಗಕ್ಕೆ ದೊಡ್ಮನೆಯ ಕೊಡುಗೆ ಅಪಾರವಾದುದು. ಇಲ್ಲಿಂದ ಅರಳಿದ ಪ್ರತಿ ಕುಡಿಯೂ ಕೂಡ ಕಡಲ ತಡಿಯ ಮುತ್ತು ರತ್ನಗಳು. ಕಲೆ ಎಂಬುದು ರಕ್ತದಿಂದಲೇ ಬಂದಂತೆ ಆ್ಯಕ್ಟಿಂಗ್​​​, ಡ್ಯಾನ್ಸಿಂಗ್​​​, ಆ್ಯಕ್ಷನ್​​ ಎಲ್ಲಾ ವಿಭಾಗದಲ್ಲೂ ಎಲ್ಲರೂ ಸೈ ಎನಿಸಿಕೊಂಡವರು. ಅಪ್ಪು, ಶಿವಣ್ಣ, ರಾಘಣ್ಣ, ವಿನಯ್​​ಕುಮಾರ್​ ನಂತ್ರ ಡಾ. ರಾಜ್​ ಕುಟುಂಬದಿಂದ ಇದೀಗ ಮತ್ತೊಬ್ಬ ನಟ ಹೊರಹೊಮ್ಮಿದ್ದಾರೆ. ಯೆಸ್​​. ರಾಮ್​​​ಕುಮಾರ್​​ ಅವ್ರ ಪುತ್ರ ಧೀರೆನ್​ ರಾಮ್​​ಕುಮಾರ್​ ಶಿವ 143 ಚಿತ್ರದ ಮೂಲಕ ಘರ್ಜಿಸಲಿದ್ದಾರೆ. ಈಗಾಗ್ಲೇ ಚಿತ್ರದ ಟ್ರೈಲರ್​ ರಿಲೀಸ್ ಆಗಿದ್ದು, ಫ್ಯಾನ್ಸ್​ ಕೂಡ ಫಿದಾ ಆಗಿದ್ದಾರೆ.

ಹುಲಿ ಹೊಟ್ಟೇಲಿ ಹುಲಿನೇ ಹುಟ್ಟೋದು ಎಂಬ ಗಾದೆ ಮಾತಿದೆ. ಈ ಮಾತು ನಟ ಧೀರೆನ್ ವಿಚಾರದಲ್ಲೂ ಅಕ್ಷರಶಃ ಸತ್ಯ ಎಂಬಂತಿದೆ. ಚೊಚ್ಚಲ ಚಿತ್ರದಲ್ಲಿ ತಮ್ಮ ನಟನೆಯ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರೂವ್​ ಮಾಡಿದ್ದಾರೆ. ಲೇಟ್​ ಆದ್ರೂ ಲೆಟೆಸ್ಟ್​ ಆಗಿ ಶಿವನ ಉಗ್ರಾವತಾರ ನೋಡೋ ಅದೃಷ್ಟ  ಅಭಿಮಾನಿಗಳಿಗೆ ಒಲಿದು ಬಂದಿದೆ. ಅಂತಿಮವಾಗಿ ಸಿನಿಮಾ ರಿಲೀಸ್​ ಡೇಟ್​​ ಅನೌನ್ಸ್​ ಮಾಡಿದ್ದು ಆಗಸ್ಟ್​ 26ಕ್ಕೆ ಶಿವನ ಅಬ್ಬರ ಜೋರಾಗಿರಲಿದೆ.

  • ಶಿವಣ್ಣನ ಮೆಚ್ಚುಗೆಯಲ್ಲಿ ಧೀರೇನ್​​ ರಗಡ್​​​ ಮಾಸ್​ ಎಂಟ್ರಿ..!
  • RX100 ಗೆ ಸೆಡ್ಡು ಹೊಡೆಯಲಿದೆ ಶಿವ 143 ಮೇಕಿಂಗ್​ ಸ್ಟೈಲ್​​

ಧೀರೇನ್​ ರಾಮ್​ಕುಮಾರ್​ ಅವ್ರ ಚೊಚ್ಚಲ ಸಿನಿಮಾ ಶಿವ 143 ಆ್ಯಕ್ಷನ್​​ ಕಮ್​ ರೊಮ್ಯಾಂಟಿಕ್​ ಡ್ರಾಮಾ ಕಥೆಯಾಗಿದ್ದು ಜಯಣ್ಣ ಫಿಲ್ಮ್ಸ್​ ಬ್ಯಾನರ್​ ಅಡಿಯಲ್ಲಿ ನಿರ್ಮಾಣವಾಗ್ತಿದೆ. ನಟಿ ಮಾನ್ವಿತಾ ಗ್ಲಾಮರಸ್​​ ರೋಲ್​ನಲ್ಲಿ ಕಾಣಿಸಿಕೊಂಡಿದ್ದು, ಟ್ರೈಲರ್​​ನಲ್ಲಿನ ಸಣ್ಣ ಪುಟ್ಟು ಹಸಿಬಿಸಿ ಸೀನ್​​ಗಳು ಚಿತ್ರ ಟೆಂಪರೇಚರ್​ ಹೆಚ್ಚಿಸಿವೆ. ಇದ್ರ ಜತೆಯಲ್ಲಿ ಜಬರ್ದಸ್ತ್​​ ಆ್ಯಕ್ಷನ್​​​​ಗೆ ಧೀರೇನ್​ ಮಸ್ತ್​ ಫೈಟ್​ ಮಾಡಿದ್ದು ಸಿನಿಮಾದಲ್ಲಿ ಪ್ರೀತಿ, ಎಮೋಷನ್​ ನಡುವೆ ಖಡಕ್​​ ಫೈಟ್​​​ ಸೀನ್​ಗಳು ಇರಲಿವೆ.

ಚಿತ್ರದ ಟ್ರೈಲರ್​ ರಿಲೀಸ್ ಬಗ್ಗೆ ಮಾತನಾಡಿದ್ದ ಸೆಂಚುರಿ ಸ್ಟಾರ್​ ಶಿವಣ್ಣ ಧೀರೇನ್​ ಬಗ್ಗೆ ಪಾಸಿಟಿವ್ ಮಾತನ್ನಾಡಿದ್ರು. ನಾನು ಲೈವಾಗಿ ಇವನ ಆ್ಯಕ್ಟಿಂಗ್​ ನೋಡಿದಿನಿ. ತುಂಬಾ ಚೆನ್ನಾಗಿ ಅಭಿನಯಿಸಿದ್ದಾನೆ. ಚಿತ್ರದಲ್ಲಿ ಅಂಡರ್​​ಕರೆಂಟ್​​ ಎಮೋಷನ್​ ಕೂಡ ಇದೆ. ಅರ್ಜುನ್​ ಜನ್ಯಾ ಮ್ಯೂಸಿಕ್​, ರವಿವರ್ಮಾ ಆ್ಯಕ್ಷನ್​ ಬಗ್ಗೆ ಹೊಗಳಿದ್ದರು. ಒಟ್ಟಾರೆ, ಚಿತ್ರದ ಟ್ರೈಲರ್​ ಅದ್ಭುತವಾಗಿದೆ. ಆಲ್​ ದಿ ಬೆಸ್ಟ್​​ ಎಂದು ಶುಭ ಹಾರೈಸಿದ್ದರು.

ಜಯಣ್ಣ, ಭೋಗೇಂದ್ರ, ಡಾ.ಸೂರಿ ಸಾರಥ್ಯದಲ್ಲಿ ನಿರ್ಮಾಣವಾಗ್ತಿರೋ ಶಿವ 143 ಚಿತ್ರದ ಬಗ್ಗೆ ಸಿಕ್ಕಾಪಟ್ಟೆ ಕುತೂಹಲವಿದೆ. ಸಿನಿಮಾ ಆರ್​ ಎಕ್ಸ್​​ 100 ಸಿನಿಮಾ ಹೋಲುವಂತಿದೆ ಎಂಬ ಕಮೆಂಟ್ಸ್​​ಗಳು ಹರಿದು ಬರ್ತಿವೆ. ಆದ್ರೆ, ಶಿವನ ಪ್ಯಾರ್​​ ಕಹಾನಿ ಬೇರೆ ಫ್ಲೇವರ್​​ನಲ್ಲಿರಲಿದೆಯಂತೆ. ಚಿತ್ರದಲ್ಲಿ ಸಾಧುಕೋಕಿಲ, ಚಿಕ್ಕಣ್ಣ, ಚರಣ್​ ರಾಜ್​ ಸೇರಿದಂತೆ ಕಲಾವಿದರ ದಂಡೇ ಇದೆ. ಶಿವ 143 ಚಿತ್ರಕ್ಕೆ ಅನಿಲ್​​ ಕುಮಾರ್​ ಆ್ಯಕ್ಷನ್​ ಕಟ್​ ಹೇಳ್ತಿದ್ದು, ದೊಡ್ಮನೆ ಬಳಗದಿಂದ ನಾಯಕನಾಗಿ ಮಿಂಚಲಿರುವ ಧೀರೇನ್​ಗೆ ಅಭಿಮಾನಿಗಳು ಶುಭ ಹಾರೈಸ್ತಿದ್ದಾರೆ. ಎನಿವೇ ಧೀರೇನ್​​ ಅಬ್ಬರಕ್ಕೆ ಪ್ರೇಕ್ಷಕ ಏನಂತಾನೆ ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES