ಯಶಸ್ವಿ 50ನೇ ದಿನದತ್ತ ಅಕ್ಷಿತ್- ಶ್ರೀನು ಲವ್ ದರ್ಬಾರ್

ಪ್ರೀತಿ ಪ್ರೇಮದ ಹೊಳೆ ಹರಿಸಿದ್ದ ಕನ್ನಡಿಗರ ಪ್ರಾಣದ ಪದಕ ಓ ಮೈ ಲವ್​ ಸಿನಿಮಾ. ಸಿನಿಮಾ ನೋಡಿದ ಪ್ರೇಕ್ಷಕರ ಎದೆಯಲ್ಲಿ ತಕಧಿಮಿತ ಕಂಪನವಾಗಿತ್ತು. ಅಕ್ಷಿತ್​ ಶಶಿಕುಮಾರ್​​ ಚೊಚ್ಚಲ ಸಿನಿಮಾದಲ್ಲೆ ಗೆಲವಿನ  ನಗೆ ಬೀರಿದ್ರು. ಸ್ನೇಹ ಪ್ರೀತಿ ಕೌಟುಂಬಿಕ ಸಂಬಂಧಗಳ ದಿಬ್ಬಣ ಓ ಮೈ ಲವ್​​ ಅರ್ಧ ಶತಕ ಬಾರಿಸಿದೆ. ಯೆಸ್​​.. ಯಶಸ್ವಿ 50 ದಿನ ಪೂರೈಸಿರುವ ಓ ಮೈ ಲವ್​ ಚಿತ್ರದ ಸ್ಪೆಷಲ್​ ಅಪ್ಡೇಟ್​ ಇಲ್ಲಿದೆ.

  • ಸ್ನೇಹ, ಪ್ರೀತಿಯ ಅತಿರೋಚಕ ಕಹಾನಿಗೆ ಫುಲ್​​ ಮಾರ್ಕ್ಸ್​​​..!

ಓ ಮೈ ಲವ್​ ಗುಬ್ಬಿ ಗೂಡಲ್ಲಿ ಕೌಟಂಬಿಕ ಮೌಲ್ಯಗಳನ್ನು ಸಾರಿ ಹೇಳಿದ್ದ ಮ್ಯೂಸಿಕಲ್​​​ ಹಿಟ್​ ಸಿನಿಮಾ ಓ ಮೈ ಲವ್​​. ನಾವಿಕ ಶ್ರೀನು ಸಾರಥ್ಯದಲ್ಲಿ ಕಂಪ್ಲೀಟ್​​ 50 ದಿನ ಪೂರೈಸಿ ಯಶಸ್ವಿಯಾಗಿದೆ. ತುಂಬಿದ ಕುಟುಂಬಕ್ಕೆ ಕೇರ್​ ಆಫ್​ ಅಡ್ರೆಸ್​ ಕಥೆಯಾಗಿದ್ದ ಓ ಮೈ ಲವ್​ ಸಿನಿಮಾಗೆ ಸಿನಿರಸಿಕರು ಫಿದಾ ಆಗಿದ್ದು ಸಿನಿಮಾವನ್ನು ಗೆಲ್ಲಿಸಿದ್ದಾರೆ.

 

ಚಿತ್ರದ ಮೋಹದ ಅಧಿನಾಯಕನಾಗಿ ಶಶಿಕುಮಾರ್​ ಪುತ್ರ ಅಕ್ಷಿತ್​ ಶಶಿಕುಮಾರ್​ ಮನಮೋಹಕವಾಗಿ ಅಭಿನಯಿಸಿದ್ರು. ಚಿತ್ರದಲ್ಲಿ ಪ್ರೀತಿ ಸ್ನೇಹ ಅತಿರೋಚಕವಾಗಿ ಮೂಡಿ ಬಂದಿತ್ತು. ಅನುರಾಗದ ಅನೇಕ  ರೂಪಕಗಳನ್ನು ತೋರಿಸಿ ಪ್ರೇಕ್ಷಕರನ್ನು ಸೀಟಿನಲ್ಲಿ ಕೂರುವಂತೆ ಮಾಡಿತ್ತು. ಮಸ್ತ್​ ಮನರಂಜನೆಯ ಪುಳಕದೊಂದಿಗೆ, ಪ್ರತಿ ಕ್ಷಣವೂ ತವಕ ಹುಟ್ಟು ಹಾಕಿದ್ದ ಓ ಮೈ ಲವ್​ ಚಿತ್ರಕ್ಕೆ ಕ್ಲೀನ್​ ಬೋಲ್ಡ್​ ಆಗಿದ್ದರು. ಇದೀಗ ಚಿತ್ರತಂಡ ಫುಲ್​ ಖುಷಿ​ ಮೂಡ್​​ನಲ್ಲಿದೆ.

  • ಕ್ಲಿಕ್​ ಆಯ್ತು ರಾಮಾಂಜಿನಿ ಕಥೆ.. ಸ್ಮೈಲ್ ಶ್ರೀನು ಕರಾಮತ್ತು..!
  • ಫ್ಯಾಮಿಲಿ ಎಲಿಮೆಂಟ್ಸ್ ಹಾಗೂ ಹಾಸ್ಯದ ಜೊತೆಗೆ ಪ್ರೇಮಕಥೆ

ಸ್ಮೈಲ್​ ಶ್ರೀನು ರೆಗ್ಯುಲರ್ ಜಾನರ್​ ಬಿಟ್ಟು ಬೇರೆ ತರಹದ ಕಥೆಯನ್ನು ಹೇಳಲು ಹೊರಟು ಸಕ್ಸಸ್​ ಆಗಿದ್ದಾರೆ. ಫ್ಯಾಮಿಲಿ ಎಲಿಮೆಂಟ್ಸ್​​ ಜೊತೆಗೆ ಹಾಸ್ಯದ ಮಸಾಲೆ ಬೆರೆಸಿ ಒಂದೊಳ್ಳೆ ಜೋಡಿಯ ಪ್ರೇಮಕಥೆಯನ್ನು ಮನಸ್ಸು ಮುಟ್ಟುವಂತೆ ತೋರಿಸಿದ್ದರು. ಸನಾದಿ ಅಪ್ಪಣ್ಣ ಕುಟುಂಬದ ಕುಡಿಯಾದ ಕೀರ್ತಿ ಕಲ್ಕೆರೆ ನಾಯಕಿಯಾಗಿ ಎಲ್ಲರಿಗೂ ಇಷ್ಟವಾಗಿದ್ದರು. ನಟನೆಯಲ್ಲಿ ಇಬ್ಬರೂ ಪಳಗಿದವರಂತೆ ಅಭಿನಯಿಸಿದ್ದರು.

ಜ್ಯೂನಿಯರ್​ ಸುಪ್ರೀಂ ಹೀರೋ ಮೊದಲ ಸಿನಿಮಾದಲ್ಲೇ ಅಭಿನಯ ಚತುರತೆಯನ್ನು ತೋರಿದ್ದಾರೆ. ರೊಮ್ಯಾಂಟಿಕ್ ಜಾನರ್ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಹದಿಹರೆಯದ ವಯಸ್ಸಿನ ಯುವ ಮನಸುಗಳ ತಳಮಳ, ಪ್ರೀತಿ, ಪ್ರೇಮದ  ಕುರಿತಾದ ವಿಷಯಗಳನ್ನು ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಮ್ಯಾನರಿಸಂ ಹೊಂದಿಸಿದ್ದರು ಅಕ್ಷಿತ್​ ಶಶಿಕುಮಾರ್. ಕುಟುಂಬ ಸಮೇತ ನೋಡಬಹುದಾದ ಕಮರ್ಷಿಯಲ್ ಮ್ಯೂಸಿಕಲ್ ಲವ್ ಸ್ಟೋರಿ 50ರ ಸಂಭ್ರಮದ ದಿನ ಆಚರಿಸ್ತಾ ಇದೆ.

 

ನಿರ್ಮಾಪಕ ಜಿ.ರಾಮಾಂಜಿನಿ ಅವ್ರು ಈ ಚಿತ್ರಕ್ಕೆ ಬರೀ ಹಣವಷ್ಟೇ ಹೂಡಿಲ್ಲ. ಬದಲಿಗೆ ಕಥೆ ಕೂಡ ಅವರದ್ದೇ. ಒಂದೊಳ್ಳೆ ಸಿನಿಮಾನ ಕನ್ನಡದ ಜನತೆಗೆ ಕಾಣಿಕೆಯಾಗಿ ನೀಡಬೇಕು ಅನ್ನೋ ಉದ್ದೇಶದಿಂದ ಆತ್ಮೀಯ ಗೆಳೆಯ ಸ್ಮೈಲ್ ಶ್ರೀನು ಬಳಿ ಡೈರೆಕ್ಟ್ ಮಾಡಿಸಿದ್ದಾರೆ.  ಸಿನಿಮಾದ ಮೇಕಿಂಗ್ ಕ್ವಾಲಿಟಿ ನೆಕ್ಸ್ಟ್ ಲೆವೆಲ್​ಗಿದೆ. ಸಾಧುಕೋಕಿಲ, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್, ಸಂಗೀತಾ, ದೀಪಿಕಾ ಆರಾಧ್ಯ, ಪೃಥ್ವಿರಾಜ್, ಸೇರಿದಂತೆ ಬಹುದೊಡ್ಡ  ತಾರಾಗಣವೇ ಈ ಚಿತ್ರದಲ್ಲಿದೆ. ಅಂತೂ, ಪ್ರಾಮಾಣಿಕ ಸಿನಿಮಾಗಳನ್ನು ಪ್ರೇಕ್ಷಕ ಕೈ ಬಿಡೋದಿಲ್ಲ ಅನ್ನೋದು ಮತ್ತೊಮ್ಮೆ ಪ್ರೂವ್​ ಆಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES