ಪ್ಯಾನ್ ಇಂಡಿಯಾ ಸಿನಿಮಾಗಳ ಸಾಲಿನಲ್ಲಿ ಕುತೂಹಲ ಕೆರಳಿಸಿರುವ ಮಾರ್ಟಿನ್ ಚಿತ್ರತಂಡದಿಂದ ಹೊಸ ಅಪ್ಡೇಟ್ ಸಿಕ್ಕಿದೆ. ಪೊಗರಿನ ಟಗರು ಧ್ರುವ ಸರ್ಜಾ ಅವರ ಜಬರ್ದಸ್ತ್ ಆ್ಯಕ್ಷನ್ ನೋಡೋಕೆ ಕನವರಿಸುತ್ತಿರುವ ಫ್ಯಾನ್ಸ್ಗಳಿಗೆ ಸಖತ್ ನಿರಾಸೆಯಾಗಿದೆ. ಯೆಸ್ಮಾರ್ಟಿನ್ ಕೊಟ್ಟ ಆ ಕಹಿ ಸುದ್ದಿ ಏನ್ ಗೊತ್ತಾ ನೀವೇ ಓದಿ.
- ಸೆ-30, ದಸರಾಗಿಲ್ಲ ಮಾರ್ಟಿನ್ ಥಿಯೇಟರ್ ಎಂಟ್ರಿ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮದೇ ಫ್ಯಾನ್ಸ್ ಫಾಲೊಯಿಂಗ್ ಹೊಂದಿದ್ದಾರೆ. ಪೊಗರು ಚಿತ್ರದ ನಂತ್ರ ಅಣ್ಣನ ಸಿನಿಮಾ ನೋಡೋಕೆ ಅಭಿಮಾನಿಗಳು ಕೂಡ ಕನವರಿಸ್ತಿದ್ದಾರೆ. ಧ್ರುವ ಸರ್ಜಾ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಮಾರ್ಟಿನ್ ಜಪ ಮಾಡ್ತಿರೋ ಹುಚ್ಚು ಅಭಿಮಾನಿಗಳಿಗೆ ಮತ್ತಷ್ಟು ನಿರಾಸೆಯಾಗಿದೆ. ಇನ್ನೇನು ಸೆ.30 ರಂದು ಮಾರ್ಟಿನ್ ಚಿತ್ರವನ್ನು ಭರ್ಜರಿಯಾಗಿ ವೆಲ್ಕಮ್ ಮಾಡೋಕೆ ಪ್ಲಾನ್ ಮಾಡ್ತಿದ್ದ ಫ್ಯಾನ್ಸ್ಗೆ ದೊಡ್ಡ ಹಿನ್ನೆಡೆಯಾಗಿದೆ.

ಉಕ್ಕಿನ ಮಾಂಸಖಂಡ, ಕಬ್ಬಿಣದಂತ ತೋಳುಗಳಿಂದ ಎದುರಾಳಿ ವಿಲನ್ಗಳನ್ನು ಸೆದೆಬಡಿಯೋ ಆ್ಯಕ್ಷನ್ ಪ್ರಿನ್ಸ್ ಸಿನಿಮಾಗಾಗಿ ಚಾತಕ ಪಕ್ಷಿಗಳಂತೆ ಅಭಿಮಾನಿಗಳು ಕಾಯ್ತಿದ್ದಾರೆ. ಚಿತ್ರದಲ್ಲಿ ಸ್ಟಂಟ್ ಮಾಸ್ಟರ್ ರವಿವರ್ಮಾ ಕೂಡ ನೆಕ್ಸ್ಟ್ ಲೆವೆಲ್ ಆ್ಯಕ್ಷನ್ ಸೀಕ್ವೆನ್ಸ್ ಮಾಡಿಸಿದ್ದಾರೆ. ಮಸ್ತ್ ಮೆಗಾ ಮಾಸ್ ಸಿನಿಮಾ ಮಾರ್ಟಿನ್ ಸೆ.30ಕ್ಕೆ ರಿಲೀಸ್ ಆಗೋದಾಗಿ ಅನೌನ್ಸ್ ಮಾಡಿತ್ತು. ಆದ್ರೆ, ಇದೀಗ ಕಾರಣಾಂತರಗಳಿಂದ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದೆ.
- ಕೆಲಸ ಮುಗಿದಿಲ್ಲ.. ಸದ್ಯ ರಿಲೀಸ್ ಇಲ್ಲ.. ಮಾರ್ಟಿನ್ ಲೇಟ್
- ಅಜ್ಜಿಯ ಅಗಲಿಕೆಯಿಂದ ಕ್ಲೈಮ್ಯಾಕ್ಸ್ ಶೂಟಿಂಗ್ ತಡ..!
ನಿರ್ದೇಶಕ ಎ.ಪಿ ಅರ್ಜುನ್, ಧ್ರುವ ಸರ್ಜಾ ಹಿಟ್ ಕಾಂಬಿನೇಷನ್ಗೆ ಈಗಾಗ್ಲೇ ಚಿತ್ರರಸಿಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಇದೀಗ ಇವರಿಬ್ರ ಜುಗಲ್ಬಂದಿಯಲ್ಲಿ ಮಾರ್ಟಿನ್ ಸಿನಿಮಾ ಸಿಲ್ವರ್ ಸ್ಕ್ರೀನ್ ಮೇಲೆ ಅಬ್ಬರಿಸಲಿದೆ. ಸಿನಿಮಾದ ಕ್ಲೈಮ್ಯಾಕ್ಸ್ ಭರ್ಜರಿ ಸೀನ್ ಬಾಕಿ ಉಳಿಸಿಕೊಂಡಿದ್ದ ಮಾರ್ಟಿನ್ ಟೀಮ್ಗೆ ಶೂಟಿಂಗ್ ಲೇಟ್ ಆಗಿದೆ. ಅರ್ಜುನ್ ಸರ್ಜಾ ತಾಯಿ, ಹಾಗೂ ಧ್ರುವ ಸರ್ಜಾ ಅಜ್ಜಿ ಲಕ್ಷ್ಮಿ ದೇವಮ್ಮ ಆರೋಗ್ಯದಲ್ಲಿ ಏರುಪೇರಾದಾಗ ಧ್ರುವ ಆತಂಕದಲ್ಲಿದ್ದರಂತೆ. ಆ ಸಮಯದಲ್ಲೂ ಸರಿಯಾಗಿ ಶೂಟಿಂಗ್ ನಡೆದಿರಲಿಲ್ಲ. ನಂತ್ರ ಅಜ್ಜಿ ಅಗಲಿಕೆಯ ನಂತ್ರ 10 ರಿಂದ 12 ದಿನ ಲೇಟ್ ಆಯ್ತಂತೆ. ಹಾಗಾಗಿಯೇ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ಪೋನ್ ಆಗ್ತಿದೆ.
ಕ್ಲೈಮ್ಯಾಕ್ಸ್ ಶೂಟಿಂಗ್ 15 ದಿನಗಳ ಕಾಲ ನಡೆಯಲಿದ್ದು, ಚೇಸಿಂಗ್ ದೃಶ್ಯಗಳು ಸೇರಿ ಫೈಟಿಂಗ್ ಸೀನ್ಗಳಿವೆ. ಒಂದು ಸೆಟ್ ಸಾಂಗ್ ಸೇರಿ ವಿದೇಶದಲ್ಲೂ ಸಾಂಗ್ ಶೂಟಿಂಗ್ ಬಾಕಿ ಇದೆಯಂತೆ. ಹಾಗಾಗಿ ಸಿನಿಮಾ ರಿಲೀಸ್ ಡೇಟ್ನ ಸದ್ಯದಲ್ಲಿ ತಿಳಿಸ್ತೀವಿ ಎಂದಿದ್ದಾರೆ ನಿರ್ದೇಶಕ ಎ.ಪಿ ಅರ್ಜುನ್. ಈಗಾಗ್ಲೇ ಗಾಳಿಪಟ ಚಿತ್ರದ ಹಾಟ್ ಬೆಡಿಗೆ ವೈಭವಿ ಶಾಂಡಿಲ್ಯ ಆ್ಯಕ್ಷನ್ ಪ್ರಿನ್ಸ್ಗೆ ನಾಯಕಿಯಾಗಿದ್ದಾರೆ. ಒಟ್ಟು ಐದು ಭಾಷೆಗಳಲ್ಲಿ ತೆರೆಗೆ ಬರಲಿರೋ ಮಾರ್ಟಿನ್ ಕಾಶ್ಮೀರದ ಕಣಿವೆಗಳಲ್ಲಿ ಐಸ್ ವಾರ್ ದೃಶ್ಯಗಳನ್ನು ಚಿತ್ರಿಕರಿಸಿದೆ.

ಮಾರ್ಟಿನ್ ಚಿತ್ರಕ್ಕೆ ಟಾಲಿವುಡ್ ಫೇಮಸ್ ಮ್ಯೂಸಿಕ್ ಕಂಪೋಸರ್ ಮಣಿಶರ್ಮಾ ಸಂಗೀತವಿದೆ. ಸತ್ಯ ಹೆಗಡೆ ಕ್ಯಾಮೆರಾ ಕೈಚಳಕ, ಮಹೇಶ್ ರೆಡ್ಡಿ ಸಂಕಲನದಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬರಲಿದೆ. ವಾಸವಿ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಅಬ್ಬರಿಸಲಿದೆ. ಆದ್ರೆ ಸಿನಿಮಾ ರಿಲೀಸ್ ಡೇಟ್ ಲೇಟ್ ಆಗಿರೋದ್ರಿಂದ ಅಭಿಮಾನಿಗಳು ಮತ್ತಷ್ಟು ದಿನ ಚಾತಕ ಪಕ್ಷಿಗಳಂತೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯುರೋ, ಪವರ್ ಟಿವಿ


