ಉತ್ತರ ಪ್ರದೇಶದ ಬಿಜೆಪಿ ಯುವ ಮೋರ್ಚಾ ನಾಯಕನಿಗೆ ಬಿಗ್ ಶಾಕ್

ಲಖನೌ : ಮಹಿಳೆಯೊಬ್ಬರನ್ನು ನಿಂದಿಸಿ ಹಲ್ಲೆ ನಡೆಸಿದ ಆರೋಪವನ್ನು ಎದುರಿಸುತ್ತಿರುವ ಬಿಜೆಪಿ ಯುವ ಮೊರ್ಚಾದ ನಾಯಕ ಶ್ರೀಕಾಂತ್ ತ್ಯಾಗಿ ನಿವಾಸದ ಮೇಲೆ ಬುಲ್ಡೋಜರ್ ಅಟ್ಯಾಕ್​ ಮಾಡಿದೆ.

ಕಠಿಣ ಕ್ರಮ ಅಂದರೆ ಇದು ಎಂಬ ಸಂದೇಶ ಸಾರಿದ ಯುಪಿ ಸಿಎಂ ಯೋಗಿ, ಬಿಜೆಪಿ ನಾಯಕನ ನಿವಾಸದ ಮೇಲೆಯೇ ಬುಲ್ಡೋಜರ್ ಹತ್ತಿಸಿದೆ. ಇನ್ನು, ನೋಯ್ಡಾದಲ್ಲಿ ಶ್ರೀಕಾಂತ್ ತ್ಯಾಗಿ ಅಕ್ರಮವಾಗಿ ಕಟ್ಟಿದ ನಿವಾಸದ ಮೇಲೆ ದಾಳಿ ಮಾಡಿದೆ.

ಅದಲ್ಲದೇ, ಮಹಿಳೆಗೆ ನಿಂದಿಸಿ ಹಲ್ಲೆ ನಡೆಸಿದ್ದ ಶ್ರೀಕಾಂತ್ ತ್ಯಾಗಿ ವಿರುದ್ಧ FIR ದಾಖಲಾಗಿದ್ದು, ತ್ಯಾಗಿ ಬಂಧನಕ್ಕೆ ಉತ್ತರ ಪ್ರದೇಶ ಪೊಲೀಸರು ಬಲೆ ಬೀಸಿದ್ದಾರೆ. ಮಹಿಳೆ ಮೇಲೆ ದೌರ್ಜನ್ಯದ ಬಳಿಕ ಕೇಸರಿ ನಾಯಕ ನಾಪತ್ತೆಯಾಗಿದ್ದಾನೆ.

RELATED ARTICLES

Related Articles

TRENDING ARTICLES