ಸಿಲಿಕಾನ್​ ಸಿಟಿಯಲ್ಲಿ ಈ ಬಾರಿಯೂ ಗಣೇಶೋತ್ಸವಕ್ಕೆ ಎದುರಾಗುತ್ತಾ ವಿಘ್ನ …?

ಬೆಂಗಳೂರು : ಈ ಬಾರಿ ಎಲ್ಲಾ ಕಡೆಗಳಲ್ಲಿ ಗಣಪತಿಯನ್ನು ಕೂರಿಸಿ ಮೆರವಣಿಗೆ ನಡೆಸಲು ಅವಕಾಶ ಕೊಡುವಂತೆ ಹಿಂದುಪರ ಸಂಘಟನೆಗಳು ಒತ್ತಡ ಹೇರಿದೆ.

ಇನ್ನು ಗಣೇಶೋತ್ಸವಕ್ಕೆ 20ಕ್ಕೂ ಅಧಿಕ ದಿನಗಳು ಬಾಕಿ ಇರುವಾಗಲೇ ವಿವಾದಕ್ಕೆ ದಾರಿ ಮಾಡಿಕೊಡ್ತಿಯ್ಯಾ..? ಸದ್ದಿಲ್ಲದೆ ಗಣೇಶೋತ್ಸವಕ್ಕೆ ಒಂದಿಷ್ಟು ರೂಲ್ಸ್ ಆ್ಯಂಡ್ ರೆಗ್ಯೂಲೇಷನ್ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಎಲ್ಲಾ ಕಡೆಗಳಲ್ಲಿ ಗಣಪತಿಯನ್ನು ಕೂರಿಸಿ ಮೆರವಣಿಗೆ ನಡೆಸಲು ಅವಕಾಶ ಕೊಡುವಂತೆ ಹಿಂದುಪರ ಸಂಘಟನೆಗಳು ಒತ್ತಡ ಹೇರಿದೆ.

ಅದಲ್ಲದೇ, ಕಳೆದ ಬಾರಿ ಬಿಬಿಎಂಪಿ ತಂದ ಈ ಆದೇಶ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಈ ಸಂಬಂಧ ಹಿಂದೂ ಪರ ಸಂಘಟನೆಗಳು ಗಣೇಶನ ಮೂರ್ತಿಯನ್ನ ಬಿಬಿಎಂಪಿ ಕೇಂದ್ರ ಕಚೇರಿಗೆ ತಂದು ಬೃಹತ್ ಪ್ರತಿಭಟನೆಯನ್ನು ಮಾಡಿ ಆಕ್ರೋಶ ಹೊರ ಹಾಕಿದರು. ಇದೀಗ ಈ ಬಾರಿಯೂ ಅದೇ ನಿಯಮ ಜಾರಿ ಮಾಡಿದರೆ ಮತ್ತೊಂದು ಸುತ್ತಿನ ಕೋಲಾಹಲ ಸಾಧ್ಯತೆ ಇದೆ. ಅದ್ಧೂರಿ ವಿನಾಯಕನ ಉತ್ಸವಕ್ಕೆ ಅನುಮತಿ ಸಿಗುತ್ತಾ.ಇಲ್ವಾ..,? ವಾರ್ಡ್​ಗೆ ಒಂದೇ ಗಣಪತಿ ಮೂರ್ತಿ ಪಾಲಿಕೆ ಫಿಕ್ಸ್ ಮಾಡುತ್ತಾ ಎಂದು ಪ್ರಶ್ನೆಯಾಗಿಯೇ ಉಳಿದಿದೆ.

ಇನ್ನು, ಈ ಬಾರಿ ಬಹಿರಂಗ ಗಣೇಶೋತ್ಸವಕ್ಕೆ ಸಾರ್ವಜನಿಕರಿಂದ ಭಾರಿ ಬೇಡಿಕೆ ಇದ್ದು, ಕಳೆದ ಎರಡು ವರ್ಷದಿಂದ ಕೋವಿಡ್ ಆರ್ಭಟ ಗಣೇಶೋತ್ಸವ ಸಂಭ್ರಮ ಇರಲಿಲ್ಲ. ಈ ಭಾರಿ ಗಣೇಶೋತ್ಸವಕ್ಕೆ ರೂಲ್ಸ್ ಆ್ಯಂಡ್ ರೆಗ್ಯೂಲೇಷನ್ ಅಂದ್ರೆ ಹೋರಾಟ ತೀವ್ರ ಸಾಧ್ಯತೆ ಇರುವುದರಿಂದ ಬಿಬಿಎಂಪಿ ಅಂತಿಮ ನಿರ್ಧಾರಕ್ಕೆ ವಿನಾಯಕನ ಭಕ್ತರು ಕಾಯುತ್ತಿದ್ದಾರೆ.

RELATED ARTICLES

Related Articles

TRENDING ARTICLES