Wednesday, September 10, 2025
HomeUncategorized8ಲಕ್ಷ ರೂ. ಮೌಲ್ಯದ 25 ಕೆ.ಜಿ ಗಾಂಜಾ ವಶಕ್ಕೆ

8ಲಕ್ಷ ರೂ. ಮೌಲ್ಯದ 25 ಕೆ.ಜಿ ಗಾಂಜಾ ವಶಕ್ಕೆ

ಬೆಂಗಳೂರು: ಬಸ್​ನಲ್ಲಿ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನ ಬೆಂಗಳೂರಿನ ಹುಳಿಮಾವು ಪೋಲಿಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶ ಮೂಲದ ರಾಜರತ್ನಂ ಬಂಧಿತ ಆರೋಪಿಯಾಗಿದ್ದು, 8 ಲಕ್ಷ ರೂ ಮೌಲ್ಯದ 25 ಕೆ.ಜಿ ಗಾಂಜಾವನ್ನ ವಶ ಪಡಿಸಿಕೊಳ್ಳಲಾಗಿದೆ.

ರಾಜರತ್ನಂ ಎಂಬ ಬಂಧಿತ ಆರೋಪಿ ವಿಶಾಖಪಟ್ಟಣದಿಂದ ಗಾಂಜಾ ತಂದು‌ ಮಾರಾಟ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಇನ್ನೂ ಉಳಿದ ಆರೋಪಿಗಳಿಗಾಗಿ ಪೋಲಿಸರು ಶೋಧ ಕಾರ್ಯ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments