ಮತ್ತೆ ರಿಯಾಲಿಟಿ ಶೋಗಳತ್ತ ಗಣೇಶ್ ಗೋಲ್ಡನ್ ಹೆಜ್ಜೆ

ಗೋಲ್ಡನ್ ಸ್ಟಾರ್ ಗಣೇಶ್​ಗೆ ಅದ್ಯಾಕೋ ಬ್ಯಾಡ್​ ಟೈಮ್ ಶುರುವಾಗಿದೆ. ಹಾಗಂತ ಅವ್ರ ಹಾರ್ಡ್​ ವರ್ಕ್​ ಹಾಗೂ ಡೆಡಿಕೇಷನ್ ಮಾತ್ರ ಕಿಂಚಿತ್ತೂ ಕಮ್ಮಿ ಆಗಿಲ್ಲ. ಸಾಲು ಸಾಲು ಸಿನಿಮಾಗಳ ಜೊತೆ ರಿಯಾಲಿಟಿ ಶೋಗಳಲ್ಲೂ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಸದ್ಯ ಇಸ್ಮಾರ್ಟ್​ ಜೋಡಿಯ ಜೊತೆ ಮೋಡಿ ಮಾಡೋಕೆ ಸಜ್ಜಾಗಿದ್ದಾರೆ.

ಮತ್ತೆ ರಿಯಾಲಿಟಿ ಶೋಗಳತ್ತ ಗಣೇಶ್ ಗೋಲ್ಡನ್ ಹೆಜ್ಜೆ

ಗೋಲ್ಡನ್ ಗ್ಯಾಂಗ್ ಆಯ್ತು ಈಗ ‘ಇಸ್ಮಾರ್ಟ್​ ಜೋಡಿ’

20ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಮುಂಗಾರು ಮಳೆಯಿಂದ ತಂಪೆರೆದು, ಪ್ರೇಕ್ಷಕರ ಮನದಲ್ಲಿ ಚೆಲುವಿನ ಚಿತ್ತಾರ ಬಿಡಿಸಿ, ಮಳೆಯಲಿ ಜೊತೆಯಲಿನೇ ಗಾಳಿಪಟ ಹಾರಿಸಿ, ಸೋತರೂ ಗೆದ್ದರೂ ಮುಗುಳುನಗೆ ಬೀರಿಕೊಂಡೇ ಕೋಟ್ಯಂತರ ಹೃದಯಗಳನ್ನ ಗೆದ್ದವ್ರು ಗೋಲ್ಡನ್ ಸ್ಟಾರ್ ಗಣೇಶ್. ಕನ್ನಡ ಚಿತ್ರರಂಗದಲ್ಲೂ 50 ಕೋಟಿ ಗಳಿಸಬಹುದು ಅನ್ನೋದನ್ನ ತೋರಿಸಿಕೊಟ್ಟ ಮೊದಲ ಚಿತ್ರ ಮುಂಗಾರು ಮಳೆ.

ಇದೀಗ 2018ರಿಂದ ಗಣಿಯ ಟೈಂ ಯಾಕೋ ಎಡವಟ್ ಆಗಿದೆ. ಮಾಡಿದ ಸಿನಿಮಾಗಳ್ಯಾವೂ ಕೈ ಹಿಡೀತಿಲ್ಲ. ಶೋಗಳೂ ಸಹ ಹಿಟ್ ಆಗ್ತಿಲ್ಲ. ಆದ್ರೆ ಅವ್ರ ಉತ್ಸಾಹ, ಉಲ್ಲಾಸದಲ್ಲಿ ಬದಲಾವಣೆ ಆಗಿಲ್ಲ. ಸೋಲು- ಗೆಲುವನ್ನ ಸಮಾನವಾಗಿ ಸ್ವೀಕರಿಸೋ ಮಳೆ ಹುಡ್ಗ, ಸಾಲು ಸಾಲು ಸಿನಿಮಾಗಳು ಹಾಗೂ ಕಿರುತೆರೆ ಶೋಗಳಲ್ಲಿ ಬ್ಯುಸಿ ಆಗಿದ್ದಾರೆ.

ಒಂದ್ಕಡೆ ಭಟ್ರ ಗಾಳಿಪಟ-2 ಹಾಡುಗಳು ಹಂಗಾಮ ಮಾಡ್ತಿವೆ, ಮತ್ತೊಂದ್ಕಡೆ ಗೋಲ್ಡನ್ ಗ್ಯಾಂಗ್ ಶೋ ನಿಂತರೂ, ಗಣಿಯ ಡಿಮ್ಯಾಂಡ್ ಕಮ್ಮಿ ಆಗಿಲ್ಲ. ಸದ್ಯ ಮತ್ತೊಂದು ಖಾಸಗಿ ವಾಹಿನಿಯಲ್ಲಿ ಗಣಿ ಇಸ್ಮಾರ್ಟ್​ ಜೋಡಿ ಶೋನ ನಡೆಸಲು ರೆಡಿಯಾಗಿ ನಿಂತವ್ರೆ. ಅದ್ರ ಪ್ರೋಮೋ ಸಖತ್ ಕ್ರಿಯೇಟೀವ್ ಆಗಿದ್ದು, ಗಣಿ ಅದಕ್ಕೆ ಹೇಳಿ ಮಾಡಿಸಿದಂತಹ ಹೋಸ್ಟ್ ಅನಿಸಿಕೊಂಡಿದ್ದಾರೆ.

ಸೂಪರ್ ಮಿನಿಟ್, ಗೋಲ್ಡನ್ ಗ್ಯಾಂಗ್ ಬಳಿಕ ಇಸ್ಮಾರ್ಟ್​ ಜೋಡಿ ನಮ್ಮ ಗೋಲ್ಡನ್ ಸ್ಟಾರ್ ಕರಿಯರ್​ನ ಮೂರನೇ ಶೋ ಆಗ್ತಿದೆ. ಅವ್ರು ಹೀರೋ ಆಗೋಕೂ ಮುನ್ನ ಕಾಮಿಡಿ ಟೈಂ ಗಣೇಶ್ ಅಂತ್ಲೇ ಫೇಮಸ್ ಆಗಿದ್ರು. ಇದೀಗ ಸಿನಿಮಾಗಳ ಜೊತೆ ಜೊತೆಗೆ ಅವ್ರು ಶೋಗಳನ್ನ ನಡೆಸಿಕೊಡ್ತಿರೋದು ಖುಷಿಯ ವಿಚಾರ. ಇಲ್ಲಿ ಯಾರೆಲ್ಲಾ ಸೆಲೆಬ್ರಿಟಿ ಕಪಲ್ಸ್ ಬರ್ತಾರೆ..? ಶೋ ಎಷ್ಟು ಸ್ಪೈಸಿ ಆಗಿರುತ್ತೆ ಅನ್ನೋದು ಸದ್ಯದಲ್ಲೇ ರಿವೀಲ್ ಆಗಲಿದೆ. ಈ ಮುಂಗಾರುಮಳೆಯಿಂದ ಗಣಿಯ ಜರ್ನಿಯಲ್ಲಿ ತಂಗಾಳಿ ಬೀಸಲಿ, ಹಿಟ್​ಗಳ ಸುರಿಮಳೆ ಆಗಲಿ ಅಂತ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES