ಲೀನಾ ಮಣಿಮೇಕಲೈರ ಮತ್ತೊಂದು ಪೋಸ್ಟ್ ವೈರಲ್​

ತಮಿಳುನಾಡು : ನಿರ್ದೇಶಕಿ ಲೀನಾ ಮಣಿಮೇಕಲೈ ದಿನಕ್ಕೊಂದು ವಿವಾದ ಸೃಷ್ಟಿ ಮಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಕಾಳಿದೇವಿಯ ಪೋಸ್ಟರ್ ಹಂಚಿಕೊಂಡಿದ್ದು ಸುದ್ದಿ ಆಗಿತ್ತು. ಅವಹೇಳನಕಾರಿಯಾಗಿ ಕಾಳಿ ದೇವಿಯನ್ನು ಚಿತ್ರಿಸಲಾಗಿದೆ ಎಂಬ ಆರೋಪ ಎದುರಾದ ಬೆನ್ನಲ್ಲೇ ಟ್ವಿಟರ್​ನಿಂದ ಆ ಪೋಸ್ಟರ್ ಅನ್ನು ತಡೆ ಹಿಡಿಯಲಾಯಿತು.

ಲೀನಾ ಮಣಿಮೇಕಲೈ ಇಷ್ಟಕ್ಕೇ ಸುಮ್ಮನಾಗದೆ, ಈಗ ಶಿವ ಮತ್ತು ಪಾರ್ವತಿ ವೇಷಧಾರಿಗಳು ಧೂಮಪಾನ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಮತ್ತೆ ವಿವಾದಕ್ಕೆ ಕಾರಣವಾಗಿದೆ.ಅನೇಕರು ಈ ಪೋಸ್ಟ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಚಾರಕ್ಕಾಗಿಯೇ ಲೀನಾ ಮಣಿಮೇಕಲೈ ಅವರು ಈ ರೀತಿ ಮಾಡುತ್ತಿದ್ದಾರೆ ಎಂದು ಅವರನ್ನು ನೆಟ್ಟಿಗರು ಟೀಕಿಸಿದ್ದಾರೆ.

ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಲೀನಾ ಮಣಿಮೇಕಲೈ ಅವರು ಸದ್ಯ ಕೆನಡಾದಲ್ಲಿ ವಾಸವಾಗಿದ್ದಾರೆ. ಆದರೆ ಅವರು ಮೂಲತಃ ಭಾರತದವರು. ತಮಿಳುನಾಡಿನವರಾದ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ.

RELATED ARTICLES

Related Articles

TRENDING ARTICLES