ಶಿವಮೊಗ್ಗದ ಸರ್ಕಾರಿ ಕಚೇರಿ ದುರಸ್ತೀ ಬಗ್ಗೆ ಕೇಳೋರಿಲ್ಲ..?

ಶಿವಮೊಗ್ಗ : ಸ್ವಾತಂತ್ರ್ಯ ಬಂದು 75 ವರ್ಷವಾದರೂ ಶಿವಮೊಗ್ಗ ಜಿಲ್ಲೆಯವರೇ ನಾಲ್ಕು ಮಂದಿ ಮುಖ್ಯಮಂತ್ರಿ ಆಗಿದ್ದರೂ ಈ ಸರ್ಕಾರಿ ಕಚೇರಿ ಸ್ಥಿತಿ ಇನ್ನು ಬಗೆಹರಿದಿಲ್ಲ.

150 ವರ್ಷಗಳ ಹಿಂದಿನ ಈ ಕಟ್ಟಡಕ್ಕೆ ಬೇಕಿದೆ ಕಾಯಕಲ್ಪ, ಮಳೆ ಬಂತು ಅಂದ್ರೆ ಈ ಕಟ್ಟಡದಲ್ಲಿ ನೀರು ಸೋರಿಕೆಯಾಗುತ್ತದೆ. ಸೋರುವ ಜಾಗದಲ್ಲಿ ಬಕೆಟ್, ಪಾತ್ರೆಗಳನ್ನಿಟ್ಟು ನೀರು ತುಂಬಿಸೋ ಗತಿ. ಸರ್ಕಾರಿ ಉನ್ನತ ಅಧಿಕಾರಿಗಳ ಅಸಡ್ಡೆಯಿಂದಾಗಿ ಸೋರುತಿರುವ ಕಚೇರಿ ದುರಸ್ತಿಗೆ ಮೀನಾ-ಮೇಷ ಮಾಡುತ್ತಿದ್ದು, ಸ್ವಾತಂತ್ರ್ಯ ಬಂದು 75 ವರ್ಷವಾದರೂ ಶಿವಮೊಗ್ಗ ಜಿಲ್ಲೆಯವರೇ ನಾಲ್ಕು ಮಂದಿ ಮುಖ್ಯಮಂತ್ರಿ ಆಗಿದ್ದರೂ ಈ ಸರ್ಕಾರಿ ಕಚೇರಿ ಸಮಸ್ಯೆ ಇನ್ನು ಬಗೆಹರಿದಿಲ್ಲ.

ಈ ಕಟ್ಟಡದಲ್ಲಿಯೇ ನೀರಾವರಿ ಇಲಾಖೆಯ ಇಂಜಿನಿಯರ್ ಕಚೇರಿ ಇದ್ದು, ಮಳೆ ಬಂತು ಅಂದ್ರೆ ಈ ಕಟ್ಟಡ ಎಲ್ಲಿ ಸೋರಿಕೆ ಆಗುತ್ತೆ, ಅನ್ನುವುದಕ್ಕಿಂತ ಎಲ್ಲಿ ಸೋರುವುದಿಲ್ಲ ಎಂದು ನೋಡಬೇಕಿದೆ. ಎಲ್ಲೊಂದರಲ್ಲಿ ಸೋರುವ ಕಚೇರಿ. ಸೋರುವ ಜಾಗದಲ್ಲಿ ಬಕೆಟ್, ಪಾತ್ರೆ, ಪ್ಲಾಸ್ಟಿಕ್ ವಸ್ತುಗಳನ್ನು ನೀರು ತುಂಬಿಸಲು ಇಟ್ಟಿದ್ದಾರೆ. ಇಲ್ಲಿರುವ ಕಂಪ್ಯೂಟರ್, ಪ್ರಿಂಟರ್, ಜೆರಾಕ್ಸ್ ಮೆಷಿನ್ ಹಾಗೂ ಇತರೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಹೇಗೆ ಉಳಿಸಿಕೊಳ್ಳುವುದು ಎಂಬ ಭಯವಾಗಿದ್ದು, ಶಿಥಿಲಗೊಂಡಿರುವ ಮೇಲ್ಛಾವಣಿ ದುರಸ್ಥಿಗೆ ಹಲವು ಬಾರಿ ತಮ್ಮ ಮೇಲಾಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಗಮನ ಹರಿಸುತ್ತಾರಾ ಎಂದು ಕಾದುನೋಡಬೇಕು.

RELATED ARTICLES

Related Articles

TRENDING ARTICLES