ಬೆಂಗಳೂರಿನ ಭೋಜನ ಪ್ರಿಯರಿಗೆ ಸಿಹಿಸುದ್ದಿ..!

ಬೆಂಗಳೂರು : ಅನೇಕ ಜನರಿಗೆ ಬೀದಿ ಬದಿಯಲ್ಲಿ ಸಿಗುವ ಆಹಾರ ತಿನ್ನಲು ಆಸೆಯಿದ್ದರೂ ಅಲ್ಲಿಗೆ ಹೋಗಿ ಆಹಾರ ಸೇವಿಸಲು ಮುಜುಗರ ಇರುತ್ತದೆ. ಅಂತಹವರು ಇನ್ನು ಮುಂದೆ ಸ್ವಿಗ್ಗಿ. ಜೊಮೋಟೋದಂತಹ ಆಹಾರ ಸರಬರಾಜು ಆ್ಯಪ್‌ಗಳ ಮೂಲಕ ಬೀದಿ ಬದಿ ಆಹಾರ ಮಾರಾಟಗಾರರಿಂದ ತಮಗೆ ಇಷ್ಟವಾದಂತಹ ಆಹಾರ ತರಿಸಿಕೊಳ್ಳಬಹುದಾಗಿದೆ. ಅಂತಹದ್ದೊಂದು ಪ್ರಯೋಗಕ್ಕೆ ಬಿಬಿಎಂಪಿ ಮುಂದಾಗಿದ್ದು, ಸ್ವಿಗ್ಗಿ, ಜೊಮೋಟೋ ಸೇರಿ ಇನ್ನಿತರೆ ಆಹಾರ ಸರಬರಾಜು ಆ್ಯಪ್‌ಗಳು ಬೀದಿ ಬದಿ ಆಹಾರ ಮಾರಾಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಪಾಲಿಕೆ ಯೋಜನೆ ಜಾರಿಗೆ ತರ್ತಿದೆ.

ಎಸ್.. ಕೇಂದ್ರ ಸರ್ಕಾರದ ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ ಅಡಿಯಲ್ಲಿ ಬೀದಿಬದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಲು ಬಿಬಿಎಂಪಿ ಮುಂದಾಗಿದೆ. ಇದರಿಂದ ಬೀದಿ ಬದಿಯ ವ್ಯಾಪಾರಿಗಳು ತಮಗೆ ಇಷ್ಟವಾದ ಆಹಾರ ಪದಾರ್ಥಗಳನ್ನೂ ಇನ್ನು ಮುಂದೆ ಆನ್‌ಲೈನ್ ಆ್ಯಪ್ ಮುಖಾಂತರ ಮಾರಾಟ ಮಾಡಬಹುದಾಗಿದೆ.ಇನ್ನು ಕೇಂದ್ರ ಸರ್ಕಾರದ ಈ ಯೋಜನೆಯನ್ನೂ ಬಿಬಿಎಂಪಿ ಜಾರಿಗೆ ತರಲು ಮುಂದಾಗಿದೆ.ಈ ಹೊಸ ಪ್ರಯೋಗಕ್ಕೆ ಬಿಬಿಎಂಪಿ ಸಿದ್ಧತೆ ನಡಿಸ್ತಿದೆ, ಇನ್ನು ನಗರದಲ್ಲಿ ಬೀದಿ ಬದಿಯ ಅಹಾರ ಮಾರಾಟಗಾರರ ಲೆಕ್ಕ ಮಾಡಿ ಇವರುಗಳಿಗೆ ಆಹಾರ ತಯಾರಿಕೆ ವೇಳೆ ಸ್ವಚ್ಛತೆ ಮತ್ತು ಗುಣಮಟ್ಟ ಕಾಪಾಡುವುದು, ಗ್ರಾಹಕರಿಗೆ ಆಹಾರ ನೀಡಬೇಕಾದಾಗ ಅನುಸರಿಸಬೇಕಾದ ಸ್ವಚ್ಛತಾ ಕ್ರಮಗಳ ಬಗ್ಗೆ ಒಟ್ಟು 7 ದಿನಗಳ ತರಬೇತಿ ನೀಡಲಾಗುತ್ತಿದೆ. ಹೀಗೆ ತರಬೇತಿ ನೀಡಲು ಪ್ರತಿಯೊಬ್ಬರಿಗೆ ಬಿಬಿಎಂಪಿ 3,425 ರೂ.ವ್ಯಯಿಸಲಿದೆ. ಆ ಹಣವನ್ನು ಕೇಂದ್ರದ ಅನುದಾನದಿಂದ ಪಡೆಯಲಾಗುತ್ತದೆ ಅಂತ ಬಿಬಿಎಂಪಿ ವಿಶೇಷ ಆಯುಕ್ತರು ತಿಳಿಸಿದ್ರು.

ಇನ್ನು ಬಿಬಿಎಂಪಿಯಿಂದ ಬೀದಿಬದಿ ಆಹಾರ ಮಾರಾಟಗಾರರ ಸರ್ವೇ ನಡೆಸಲಾಗ್ತಿದ್ದು., ಸದ್ಯದ ಮಾಹಿತಿ ಪ್ರಕಾರ ನಗರದಲ್ಲಿ 40 ಸಾವಿರ ಬೀದಿಬದಿ ಅಹಾರ ಮಾರಾಟಗಾರರು ಇದ್ದಾರಂತೆ. ಜತೆಗೆ ಆಹಾರ ಮಾರಾಟಗಾರರಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತಿದೆ.ಬೀದಿಬದಿ ಆಹಾರ ಮಾರಾಟಗಾರರು ಆಹಾರವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲು ಆಹಾರ ಸರಬರಾಜು ಆ್ಯಪ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಇನ್ನು ಬೀದಿಬದಿ ವ್ಯಾಪಾರಕ್ಕೆ ಪಾಲಿಕೆಯಿಂದ ಎರಡು ಲಕ್ಷ ಸಾಲ ನೀಡಲು ಮುಂದಾಗಿದೆ. ಹೀಗೆ ಅಂದುಕೊಂಡಂತೆ ಆದ್ರೆ,, ಇದೇ ಆಗಸ್ಟ್ 15ಕ್ಕೆ ಈ ಹೊಸ ಯೋಜನೆ ಜಾರಿಗೆ ತರಲು ಬಿಬಿಎಂಪಿ ಸಿದ್ದವಿದೆಯಂತೆ.

ಒಟ್ನಲ್ಲಿ ಬೀದಿ ಬದಿ ಅಹಾರ ಇನ್ನು ಮುಂದೆ ಆನ್‌ಲೈನ್‌ನಲ್ಲೂ ಸಿಗಲಿದ್ದು, ಗ್ರಾಹಕರು ಯಾವ ರೀತಿ ಸ್ವೀಕರಿಸ್ತಾರೆ. ಅದಕ್ಕೆ ಯಾವೆಲ್ಲಾ ಆರೋಪಗಳು ಕೇಳಿ ಬರ್ತಾವೋ..? ಯಾವಾಗ ಈ ಯೋಜನೆ ಜಾರಿಗೆ ಬರುತ್ತೋ ಕುತೂಹಲ ಕೆರಳಿಸಿದೆ..

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES