ಬೆಂಗಳೂರು : ಬಿಎಂಟಿಸಿ ನಿಗಮದಲ್ಲಿ ಉಂಡ ಮನೆಗೆ ದ್ರೋಗ ಬಗೆಯುತ್ತಿದ್ದಾರಾ ಅನ್ನೋ ಅನುಮಾನ ಕಾಡದೇ ಇರಲ್ಲ.. ಜನಸಾನ್ಯರನ್ನು ಬೆಂಗಳೂರಿನ ಮೂಲೆ ಮೂಲೆಗೆ ಸುರಕ್ಷಿತವಾಗಿ ತಲುಪಿಸೋ ಬಿಎಂಟಿಸಿಗೆ, ಕೆಲವು ಡಿಪೋ ಮ್ಯಾನೇಜರ್ಗಳೇ ವಿಲನ್ಗಳಾಗಿಬಿಟ್ಟಿದ್ದಾರೆ.
ವಿಜಿಲೆನ್ಸ್ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿರೋ ಕೆಲವು ಡಿಪೋ ಮ್ಯಾನೇಜರ್ಗಳು ಡೀಸೆಲ್ ಟ್ಯಾಂಕರ್ ಮಾಲೀಕರೊಂದಿಗೆ ಶಾಮೀಲಾಗಿ, ಪ್ರತೀ ನಿತ್ಯ ನೂರಾರು ಲೀಟರ್ ಸುಳ್ಳು ಲೆಕ್ಕ ತೋರಿಸುತ್ತಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬರ್ತಿದೆ. ಡಿಪೋ ಬಂಕ್ ಗಳಿಂದ ಡೀಸೆಲ್ ಪಡೆಯುವಾಗಲೇ ಈ ಸೋರಿಕೆ ಕಂಡು ಬರ್ತಿದ್ದು, ಬಂಕ್ಗಳನ್ನು ಸ್ಥಾಪಿಸಿದ್ದೇ ಯಡವಟ್ಟಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಹೊರಗಿನ ಕಳ್ಳರನ್ನು ಹೇಗೋ ಹಿಡಿಯಬಹುದು.ಆದ್ರೆ, ಮನೆಯಲ್ಲೇ ಇರೋ ಕಳ್ಳರನ್ನು ಹಿಡಿಯೋದ್ಹೇಗೆ ಅಂತಾ ಬಿಎಂಟಿಸಿ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ.
ಪ್ರತೀನಿತ್ಯ ಬೆಂಗಳೂರಿನಲ್ಲಿ ಸರಿ ಸುಮಾರು 6000 BMTC ಬಸ್ಗಳು ರೋಡ್ ಗಿಳಿಯುತ್ತವೆ. ಅಂದಾಜು 40 ಲಕ್ಷ ಪ್ರಯಾಣಿಕರು ಬಿಎಂಟಿಸಿಯನ್ನೇ ಅವಲಂಬಿಸಿದ್ದಾರೆ. ಸದ್ಯ ಬಿಎಂಟಿಸಿಯಲ್ಲಿ ವಾರಗಟ್ಟಲೇ ಡೀಸೆಲ್ ಸ್ಟಾಕ್ ಇಟ್ಟುಕೊಳ್ಳೋ ವ್ಯವಸ್ಥೆ ಇಲ್ಲ. ಎರಡ್ಮೂರು ದಿನಕ್ಕಷ್ಟೇ ಬೇಕಾದ ಡೀಸೆಲ್ ಸ್ಟಾಕ್ ಇಟ್ಕೊಳ್ತೀವಿ ಅಂತಾ ಬಿಎಂಟಿಸಿ ಅಧ್ಯಕ್ಷರು ಹೇಳ್ತಾರೆ.ಆದ್ರೆ, ಡೀಸೆಲ್ ಸೋರಿಕೆಯಿಂದ, ಬಸ್ಗಳು ನಿಂತಲ್ಲೇ ನಿಲ್ಲುತ್ತಿರೋದನ್ನು ಒಪ್ಪಿಕೊಳ್ಳೋಕೆ ಮಾತ್ರ ತಯಾರಿಲ್ಲ.
ಏನೇ ಆದ್ರೂ ಕೆಲವು ಖತರ್ನಾಕ್ ಡಿಪೋ ಮ್ಯಾನೇಜರ್ಗಳಿಂದ ಹಗಲು ದರೋಡೆ ಆಗ್ತಿರೋದಂತೂ ಸುಳ್ಳಲ್ಲ.. ಬಸ್ಗಳಿಗೆ ಡೀಸೆಲ್ ತುಂಬಿಸೋದಕ್ಕೂ ಮೊದಲು, ಓಪನ್ ರೀಡಿಂಗ್, ಎಂಡ್ ರೀಡಿಂಗ್ ಮಾಡೋ ಕೆಲಸ ನಾಜೂಕಾಗಿ ಆಗ್ತಾ ಇಲ್ಲ. ಕೆಲವು ಡಿಪೋಗಳಲ್ಲಿ ಸಿಸಿ ಕ್ಯಾಮೆರಾಗಳ ಕಣ್ಗಾವಲೂ ಇಲ್ಲ. ಇನ್ಮುಂದಾದ್ರೂ ಡೀಸೆಲ್ ಸೋರಿಕೆ ಮೇಲೆ ಹದ್ದಿನ ಕಣ್ಣಿಟ್ಟಾಗ ಮಾತ್ರ ಬಿಎಂಟಿಸಿ ಉದ್ಧಾರ ಆಗೋಕೆ ಸಾಧ್ಯ.
ಆನಂದ್ ನಂದಗುಡಿ ಸ್ಪೆಷಲ್ ಕರೆಸ್ಪಾಂಡೆಂಟ್ ಪವರ್ ಟಿವಿ ಬೆಂಗಳೂರು


