ಈದ್ಗಾ ಮೈದಾನಕ್ಕೂ ಬಿಬಿಎಂಪಿಗೂ ಸಂಬಂಧವಿಲ್ಲ: ತುಷಾರ್​ ಗಿರಿನಾಥ್

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಇಷ್ಟು ದಿನ ಈದ್ಗಾ ಮೈದಾನ ಬಿಬಿಎಂಪಿ ವ್ಯಾಪ್ತಿಗೆ ಸೇರಿದ್ದು ಎಂದಿದ್ದ ಪಾಲಿಕೆ ಇದೀಗ ವಕ್ಫ್​ ಬೋರ್ಡ್​ ದಾಖಲೆ ಸಲ್ಲಿಕೆ ಬೆನ್ನಲ್ಲೇ ಇಂದು ಯೂಟರ್ನ್​ ಹೊಡೆದಿದೆ.

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದ ವಿಚಾರದಲ್ಲಿ 1974ರಲ್ಲಿ ಸಿಟಿ ಸರ್ವೆ ಪ್ರಕಾರ ನಮ್ಮ( ಬಿಬಿಎಂಪಿ) ಖಾತೆ ಇದೆ ಎಂದು ಉಲ್ಲೇಖವಾಗಿದೆ. ಮೇಲ್ನೋಟಕ್ಕೆ ಮೈದಾನದ ಸ್ವಾಮಿಥ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಇಲ್ಲ. ಖಾತಾ ಪ್ರಕಾರ ಮಾಲೀಕತ್ವ ನಮ್ಮದು ಇದೆ. ವಕ್ಫ್ ಬೋರ್ಡ್ ದಾಖಲೆ ಸಮೇತ ಖಾತೆ ಬದಲಾವಣೆಗೆ ಅಪ್ಲೈ ಮಾಡಲಿ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

ಈದ್ಗಾ ಮೈದಾನಕ್ಕೂ ನಮಗೂ ಸಂಬಂಧವಿಲ್ಲ. ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ ಎಂದು ಹೇಳುವ ಮೂಲಕ BBMP ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್​ ಉಲ್ಟಾ ಹೊಡೆದಿದ್ದಾರೆ

RELATED ARTICLES

Related Articles

TRENDING ARTICLES