ರಿಯಲ್ ಸ್ಟಾರ್ ಉಪ್ಪಿ ಹಾಗೂ ಸ್ಯಾಂಡಲ್ವುಡ್ ಬಾದ್ಷಾ ಕಾಂಬೋದಲ್ಲಿ ಬಾಕ್ಸ್ ಆಫೀಸ್ ವಾರ್ಗೆ ಸಜ್ಜಾಗಿರೋ ಸಿನಿಮಾ ಕಬ್ಜ. ಕೋಟಿ ಕೋಟಿ ಬಂಡವಾಳ ಹೂಡಿ, ಲಕ್ಸುರಿ ಸೆಟ್ ಹಾಕಿ ನಿರ್ಮಾಣ ಮಾಡ್ತಿರೋ ಕನ್ನಡದ ಬಹು ನಿರೀಕ್ಷಿತ ಸಿನಿಮಾ. ಯಾವುದೇ ವಿಚಾರದಲ್ಲೂ ಕಾಂಪ್ರಮೈಸ್ ಆಗದ ಬಿಗ್ ಸ್ಟಾರ್ಸ್ ಸಿನಿಮಾ.
- ಫಿಲ್ಟರ್ ಇಲ್ಲದೆ ಕಬ್ಜ ಕುರಿತು ಉಪ್ಪಿ ಓಪನ್ ಟಾಕ್..!
- ‘ಕೆಜಿಎಫ್’ ನಂತ್ರ ಆರ್. ಚಂದ್ರು ತಲೇಲಿ ಏನಿತ್ತು..?
- ‘ಕಬ್ಜ’ ಸಿನಿಮಾ ಗೆಲ್ಲಲೇಬೇಕು ಅಂದಿದ್ಯಾಕೆ ರಿಯಲ್ ಸ್ಟಾರ್..?
- ಬಾದ್ಷಾ ಕಿಚ್ಚ ಜೊತೆ ಗ್ಯಾಂಗ್ ವಾರ್.. ಮಿಲಿಟರಿ ವಾರ್..!

ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆಯ ಮನ್ವಂತರ ಶುರುವಾಗಿದೆ ಅಂತಾ ನಿಮಗೆಲ್ಲಾ ಗೊತ್ತು. ಟಾಲಿವುಡ್ ಫೇಮಸ್ ಡೈರೆಕ್ಟರ್ ಆರ್ಜಿವಿ ಕೆಜಿಎಫ್ ಚಿತ್ರದ ಕರಾಳ ನೆರಳಿನಲ್ಲಿ ಬೇರೆ ಸಿನಿಮಾಗಳು ಬೆಳೆಯುತ್ತಿಲ್ಲ ಅನ್ನೋ ಮಾತು ಗೊಂದಲ ಉಂಟು ಮಾಡಿದ್ದು ನಿಜ. ಏಕೆಂದರೆ ಕಡಿಮೆ ಬಜೆಟ್ಟಿನ ಸಿನಿಮಾಗಳನ್ನು ಜನ್ರು ಕೆಜಿಎಫ್ ಚಿತ್ರಕ್ಕೆ ಕಂಪೇರ್ ಮಾಡ್ತಿದ್ದಾರೆ. ಹಾಗಾಗಿ ಸ್ಟಾರ್ಟ್ ಅಪ್ ಸಿನಿಮಾಗಳು ಸೋಲ್ತಾ ಇವೆ ಅನ್ನೋ ಭಯ ಎಲ್ಲಾ ನಿರ್ದೇಶಕರಿಗೂ ಇದೆ. ಈ ನಡುವೆ ಸುನಾಮಿ ತರಹ ಕೆಜಿಎಫ್ಗೆ ಸಡ್ಡು ಹೊಡೆಯೋಕೆ ಸಜ್ಜಾಗಿದ್ದೇ ಕಬ್ಜ ಸಿನಿಮಾ.
ಉಪ್ಪಿಯ ಐ ಲವ್ ಯು ಚಿತ್ರದ ನಂತ್ರ ಆರ್ ಚಂದ್ರು ಯಾವ ಪ್ರಾಜೆಕ್ಟ್ಗೂ ಕೈ ಹಾಕಿರಲಿಲ್ಲ. ಕೆಜಿಎಫ್ ಸಿನಿಮಾ ನೋಡಿದ ಮೇಲೆ ಆರ್. ಚಂದ್ರು ತಮ್ಮ ಪ್ಲ್ಯಾನ್ ಎಲ್ಲಾ ಚೇಂಜ್ ಮಾಡಿಕೊಂಡಿದ್ದಾರೆ. ನಾನು ಮಾಡೋ ಸಿನಿಮಾ ಪ್ರಪಂಚದಲ್ಲೇ ಹೊಸ ಸುನಾಮಿ ಎಬ್ಬಿಸಬೇಕು. ಆ ಸುನಾಮಿಯ ಅಲೆಗೆ ಹಳೆ ದಾಖಲೆಗಳೆಲ್ಲಾ ಕೊಚ್ಚಿ ಹೋಗಬೇಕು ಅನ್ನೋ ಆತ್ಮವಿಶ್ವಾಸದಲ್ಲಿದ್ದಾರೆ. ಹಾಗಾಗಿ ಗ್ಯಾಂಗ್ಸ್ಟರ್ ಕಥೆ ಸಿದ್ಧ ಮಾಡಿ ಹೆಜ್ಜೆ ಹೆಜ್ಜೆಗೂ ಮೈನವಿರೇಳಿಸೋ ಆ್ಯಕ್ಷನ್ ಸೀಕ್ವನ್ಸ್ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸೋಕೆ ಬರ್ತಿದೆ ಕಬ್ಜ ಚಿತ್ರ.

ಮಲ್ಟಿ ಸೂಪರ್ ಸ್ಟಾರ್ಗಳ ಜೊತೆ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ತಯಾರಾಗ್ತಿದೆ. ಲಾರಿಗಟ್ಟಲೆ ಬಂದೂಕು, ರಿವಾಲ್ವರ್, ರಾಕೆಟ್ ಲಾಂಚರ್ ನಡುವೆ ಬೆಂಕಿ, ಧೂಳು, ಮಸಿಯ ಕಗ್ಗತ್ತಿಲಿನ ಭೂಗತ ಜಗತ್ತು ಅನಾವರಣವಾಗಲಿದೆ. ಹಾಲಿವುಡ್ ರೇಂಜ್ಗೆ ಕಬ್ಜ ಸಿನಿಮಾವನ್ನು ತೆರೆ ಮೇಲೆ ತರೋಕೆ ನಿರ್ಮಾಪಕ ಎಮ್ಟಿಬಿ ನಾಗರಾಜ್ ಕೂಡ ಚಿತ್ರತಂಡಕ್ಕೆ ಸಹಕರಿಸ್ತಿದ್ದಾರೆ. ವರ್ಷಾನುಗಟ್ಟಲೆ ಎಫರ್ಟ್ ಹಾಕಿ ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡ್ತಾ ಇರೋ ಕಬ್ಜ ಸಿನಿಮಾ ಗೆಲ್ಲಲೇಬೇಕು ಅಂತಾರೆ ರಿಯಲ್ ಸ್ಟಾರ್ ಉಪ್ಪಿ.
ಸಿನಿಮಾದ ಶೂಟಿಂಗ್ ಈಗಾಗ್ಲೇ ಅಂತಿಮ ಹಂತದಲ್ಲಿದೆ. ಟಾಲಿವುಡ್ ಕ್ವೀನ್ ಶ್ರೇಯಾಶರಣ್ ಚಿತ್ರದ ನಾಯಕಿಯಾಗಿದ್ದು, ಚಿತ್ರದ ಸ್ಪೆಷಲ್ ಸಾಂಗ್ಗಾಗಿ ಬಾಲಿವುಡ್ ಹಾಟ್ ಬೆಡಗಿ ನೋರಾ ಫತೇಹಿ ಅವ್ರನ್ನ ಕರೆತರೋ ಪ್ಲ್ಯಾನ್ನಲ್ಲಿದೆ. ಕೆಜಿಎಫ್ ಚಿತ್ರದ ಮೂಲಕ ತನ್ನದೇ ಹೊಸ ಅಲೆ ಕ್ರಿಯೇಟ್ ಮಾಡಿರೋ ರವಿ ಬಸ್ರೂರು ಮ್ಯೂಸಿಕ್ ಕಂಪೋಸಿಂಗ್ ಚಿತ್ರಕ್ಕಿದೆ. 70ರ ಅಂಡರ್ವರ್ಲ್ಡ್ ಕಥೆಯನ್ನು ದೊಡ್ಡಮಟ್ಟದಲ್ಲಿ ಪ್ರೆಕ್ಷಕರಿಗೆ ತಲುಪಿಸೋಕೆ ಹೊರಟಿದೆ ಚಿತ್ರತಂಡ.

ಫೈಟ್ ಮಾಸ್ಟರ್ ರವಿವರ್ಮ ಈ ಚಿತ್ರದಲ್ಲಿ ಎಂದಿಗಿಂತ ಸಿಕ್ಕಾಪಟ್ಟೆ ಕಸರತ್ತು ಮಾಡಿ ವಿಭಿನ್ನ ರೀತಿಯ ಆ್ಯಕ್ಷನ್ ಸೀನ್ಸ್ ಇಟ್ಟಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವ್ರ ಜೊತೆ ಉಪ್ಪಿಯ ಕಾಂಬಿನೇಷನ್ ಸಿಲ್ವರ್ ಸ್ಕ್ರೀನ್ ಮೇಲೆ ಯಾರು ನಿರೀಕ್ಷೆ ಮಾಡದ ಸುಂಟರಗಾಳಿ ಎಬ್ಬಿಸಲಿದೆ. ಪ್ರತಿಯೊಂದು ಪೋಸ್ಟರ್ ನೋಡುಗರ ಎದೆಯೊಳಗೆ ವಿದ್ಯುತ್ ಸಂಚಲನ ಮೂಡಿಸುತ್ತಿವೆ. ಎನಿವೇ ಕೆಜಿಎಫ್ ನಂತ್ರ ಕಬ್ಜ ಚಿತ್ರದ ಮೂಲಕ ಎಲ್ಲರಿಗೂ ಮತ್ತೊಮ್ಮೆ ವಾವ್ಹ್ ಫೀಲ್ ಸಿಗಲಿದೆ.
ರಾಕೇಶ್ ಆರುಂಡಿ, ಫಿಲ್ಮ್ ಬ್ಯೂರೋ, ಪವರ್ ಟಿವಿ


