ರಾಜ್ಯ ಸಾರಿಗೆ ನಿಗಮಗಳಿಗೆ ಶುರುವಾಯಿತು ಸಿಬ್ಬಂದಿ ಸಂಕಷ್ಟ..!

ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳಲ್ಲಿ ಡ್ರೈವರ್ ಗಳ ಕೊರತೆ ಹಿನ್ನೆಲೆಯಲ್ಲಿ ನಿವೃತ್ತಿ ನೌಕರರ ನೇಮಕಾತಿಗೆ ನಿಗಮಗಳು ಮುಂದಾಗಿದೆ.

ನೌಕರರ ನಿವೃತ್ತಿ ನಿಗಮಗಳಿಗೆ ಭಾರಿ ಟೆನ್ಷನ್ ಆಗಿದ್ದು, ರಾಜ್ಯದಲ್ಲಿ ಸರ್ಕಾರಿ ಬಸ್ ಓಡಿಸೋಕೆ ಚಾಲಕರ ಕೊರತೆ ಉಂಟಾಗಿದ್ದು, ಮೇ ,31 ಕ್ಕೆ ಬರೋಬ್ಬರಿ ,600 ಕ್ಕೂ ಹೆಚ್ಚು ಡ್ರೈವರ್ ಗಳು ನಿವೃತ್ತಿಯಾಗಲಿದ್ದಾರೆ. ಆದ್ರೆ ಹೊಸ ನೇಮಕಾತಿಗೆ ಸರ್ಕಾರ ಇನ್ನೂ ಗ್ರೀನ್ ಸಿಗ್ನಲ್ ನೀಡಲಿಲ್ಲ. ಹೀಗಾಗಿ ಬೇಡಿಕೆ ತಕ್ಕಂತೆ ಬಸ್ ಸಂಚಾರ ಕಲ್ಪಿಸೋದು ಬಿಎಂಟಿಸಿ ಕೆಎಸ್ಆರ್ಟಿಸಿ ಸೇರಿ ನಾಲ್ಕು ನಿಗಮಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಬಿಎಂಟಿಸಿ ಕೆಎಸ್ಆರ್ಟಿಸಿ ಯಲ್ಲಿ ನೌಕರರ ಕೊರತೆಯಿಂದ ಅನುಸೂಚಿಗಳ ಇಳಿಕೆಯಾಗಿದೆ. ನೌಕರರ ನೇಮಕಾತಿ ಮುಂದಾದ ನಿಗಮಗಳು 60 ವರ್ಷ ಮೇಲ್ಪಟ್ಟ ನೌಕರರ ನೇಮಕಾತಿಗೆ ಆದೇಶ ಮಾಡಿದ್ದಾರೆ. ಷರತ್ತು ಹಾಗೂ ನಿರ್ಬಂಧ ಗಳ ಅನ್ವಯ ನಿವೃತ್ತಿ ನೌಕರರ ನೇಮಕಾತಿಗೆ ಸುತ್ತೋಲೆ ಹೊರಡಿಸಿದ್ದು, ನಿವೃತ್ತಿ ನೌಕರರ ನೇಮಕಾತಿ ಪ್ರಯಾಣಿಕರಿಗೆ ಟೆನ್ಷನ್ ಶುರುವಾಗಿದೆ. ಹೀಗಾಗಿ ಡ್ರೈವರ್ ಗಳ ಕೊರತೆಯಿಂದ 60 ವರ್ಷ ಮೇಲ್ಪಟ್ಟವರಿಗೆ ಬಸ್ ಕೊಡಲು ನಿಗಮಗಳು ಮುಂದಾಗಿದೆ.

RELATED ARTICLES

Related Articles

TRENDING ARTICLES