ಬೆಂಗಳೂರು: ಜೂನ್ 10 ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯಸಭೆ ಮೇಲೆ ಕಣ್ಣೀಟ್ಟಿರೋ ಜೆಡಿಎಸ್ಗೆ ಎದುರಾಗಿದೆ ಆತಂಕ ಶುರುವಾಗಿದೆ.
ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸ್ತಿದೆ ಮೇಲ್ಮನೆ ರಣಕಣದಲ್ಲಿ ಕಾಂಗ್ರೆಸ್ನ ಒಂದು, ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ಜಯ ನಿಶ್ಚಿತವಾಗಿದ್ದು, ಮತ್ತೊಂದು ಸ್ಥಾನಕ್ಕಾಗಿ ಮೂರು ಪಕ್ಷಗಳಿಂದಲೂ ಪೈಪೋಟಿ ನಡೆಸುತ್ತಿದೆ. ರಾಜ್ಯಸಭೆ ಮೇಲೆ ಕಣ್ಣೀಟ್ಟಿರೋ ಜೆಡಿಎಸ್ಗೆ ಆತಂಕ ಎದುರಾಗಿದ್ದು, ಪ್ರಾದೇಶಿಕ ಪಕ್ಷಕ್ಕೆ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಠಕ್ಕರ್ ನೀಡುತ್ತಿದ್ದಾರೆ.
ಅದಲ್ಲದೇ, 2ನೇ ಅಭ್ಯರ್ಥಿ ಕಣಕ್ಕಿಳಿಸಿ ದಳಪತಿಗಳಿಗೆ ಕಾಂಗ್ರೆಸ್ ಬಿಗ್ ಶಾಕ್ ನೀಡಿದ್ದು, ನಾನಾ ರಣತಂತ್ರ ಹೆಣೆದ್ರೂ ಜೆಡಿಎಸ್ಗೆ ಸಿಕ್ಕಿಲ್ಲ ಗೆಲುವಿನ ಖಾತರಿಯಾಗಿದ್ದು, ‘ರಾಜಕೀಯ ಭೀಷ್ಮ’ ದೊಡ್ಡಗೌಡ್ರು ಕೈ ಕಟ್ಟಿ ಕೂತ್ತಿಲ್ಲ. ಕೊನೆ ಕ್ಷಣದಲ್ಲಿ ಏನಾದರೂ ಆಗಬಹುದೆಂಬ ಪ್ರಯತ್ನದಲ್ಲಿದ್ದು, ಮಲ್ಲಿಕಾರ್ಜುನ ಖರ್ಗೆ ಮೂಲಕ ಗೇಮ್ ಪ್ಲ್ಯಾನ್ ಮಾಡಲಾಗಿದೆ. ಹಾಗೆನೇ ಕೇಂದ್ರ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿರೋ ಖರ್ಗೆ ಆದ್ರೆ ಇವರ ರಣತಂತ್ರಕ್ಕೆ ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದಾರೆ.


