ಅನಂತ್ ರಾಜ್ ಆತ್ಮಹತ್ಯೆ ಕೇಸ್​ಗೆ ದಿನಕ್ಕೊಂದು ಟ್ವಿಸ್ಟ್…!

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಮೃತಪಟ್ಟು ಅದಾಗಲೇ 20 ದಿನ ಕಳೆದು ಹೋಗಿದೆ, ಅನಂತ್ ಸಾವಿನ ಹೊಣೆ ಹೊರಿಸಲು ಪತ್ನಿ ಸುಮಾ, ಪ್ರೇಯಸಿ ರೇಖಾ ತಂತ್ರದ ಮೇಲೆ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಫೋನ್ ಕಾಲ್​ ರೆಕಾರ್ಡ್ ನಲ್ಲಿ ರೇಖಾಗೆ ಸುಮಾ ಅವಾಜ್ ಹಾಕಿದ್ದಳು. ನಿನ್ನ ಮೇಲೆ ಬರೆದಿರುವ ಡೆತ್ ನೋಟ್ ಇದೆ. ಅದನ್ನು ಕೊಟ್ಟು ನಿನ್ನನ್ನು ಜೈಲಿಗೆ ಹಾಕಿಸುತ್ತೆನೆ ಎಂದಿದ್ದರು. ಅದರಂತೆ ಇಂದು ಮೃತ ಅನಂತ್ ರಾಜ್ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಒಂದು ಮಾಧ್ಯಮಕ್ಕೆ ಲಭ್ಯವಾಗಿದೆ.

ಸದ್ಯ ಮಾಧ್ಯಮದ ಮುಂದೆ ಅನಂತ್ ರಾಜ್ ಬರೆದಿದ್ದಾರೆ ಎನ್ನಲಾದ ಎರಡು ಡೆತ್ ನೋಟ್  ಬಹಿರಂಗವಾಗಿದೆ. ಒಂದು ಡೆತ್​ನೋಟ್​ನಲ್ಲಿ ಪತ್ನಿ ಸುಮಾ ಉದ್ದೇಶಿಸಿ ಬರೆದಿದ್ದರೆ, ಮತ್ತೊಂದರಲ್ಲಿ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್​ಗೆ ಬರೆಯಲಾಗಿದೆ. ಆ ಎರಡು ಡೆತ್​ನೋಟ್​ಗಳಲ್ಲಿ ಕಾಮನ್ ಆಗಿ ಕೆ.ಆರ್ ಪುರಂನ ರೇಖಾ ಎಂದು ಉಲ್ಲೇಖಿಸಲಾಗಿದೆ.

ಎರಡು ಡೆತ್ ನೋಟ್ ಸಾರಾಂಶ ನೋಡುವುದಾದರೆ: 

ಪ್ರಿಯ ಸುಮಾ, ಕ್ಷಮಿಸಿಬಿಡು ನಿನಗೆ ಮೋಸ ಮಾಡಿದ್ದೇನೆ. ನಿನ್ನಿಂದ ಕ್ಷಮೆ ಕೇಳಲು ನಾನು ಅರ್ಹನಲ್ಲ. ರೇಖಾ ಎಂಬ ಕೆ.ಆರ್.ಪುರಂನ ಹೆಣ್ಣಿನ ಸಹವಾಸ ಮಾಡಿ ಅವಳಿಂದ ಫೋಟೋ ವಿಡಿಯೋಗಳ ಟ್ರ್ಯಾಪ್​​ಗೆ ಸಿಲುಕಿ, ಬ್ಲಾಕ್​ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗ್ತಿಲ್ಲ. ತೃಪ್ತಿ, ತನ್ಮಯಿ ಹಾಗೂ ಅಭಯ್‌ ರನ್ನು ಚೆನ್ನಾಗಿ ನೋಡಿಕೋ ಇಂತಿ ನಿನ್ನ ಮೋಸಗಾರ ಅನಂತ್ ಪತ್ನಿ ಸುಮಾಗೆ ಬರೆದ ಡೆತ್ ನೋಟ್ ಜೊತೆಗೆ ಇನ್ನೊಂದು ಡೆತ್​ನೋಟ್​ ಸಹ ಇದೆ, ಅದನ್ನು ಪೊಲೀಸ್ ಇನ್ಸ್ಪೆಕ್ಟರ್ ಗೆ ಬರೆಯಲಾಗಿದೆ ಎನ್ನಲಾಗಿದೆ.

ಪೊಲೀಸ್ ಇನ್ಸ್​ಪೆಕ್ಟರ್​ ಅವರಿಗೆ ಕೆ.ಆರ್.ಪುರದ ರೇಖಾ ಎಂಬ ಹೆಣ್ಣಿನ ಮೋಸದ ಜಾಲಕ್ಕೆ ಸಿಲುಕಿ ಎಲ್ಲವನ್ನು ಕಳೆದುಕೊಂಡಿದ್ದೇನೆ. ಸಾಕಷ್ಟು ಹಣ ನೀಡಿದ್ದೇನೆ. ಅವಳಿಂದ ಮಾನಸಿಕ ಹಿಂಸೆ ಅನುಭವಿಸಿದ್ದೇನೆ. ಅವಳ ವಿರುದ್ಧ ಕಾನೂನು ಕ್ರಮ ವಹಿಸಬೇಕೆಂದು ಕೇಳಿಕೊಳ್ಳುತ್ತೇನೆ. ಇಂತಿ ನಿಮ್ಮ ಅನಂತರಾಜು.

ಸದ್ಯ ಡೆತ್​ನೋಟ್ ನ್ನು ಬ್ಯಾಡರಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ಡೆತ್​ನೋಟ್ ಎಂದು ಅನಂತರಾಜು ಪತ್ನಿ ಸುಮಾ ಪೊಲೀಸರಿಗೆ ನೀಡಿದ್ದಾರೆ. ಆದರೆ, ಡೆತ್​ನೋಟ್ ಬರೆದಿರುವುದು ಅನಂತರಾಜುನಾ? ಅಥವಾ ಬೇರೆಯವರಾ? ಅನ್ನೋದನ್ನ ತಿಳಿಯಲು ಎಫ್‌ಎಸ್​ಎಲ್​ ಗೆ ಪೊಲೀಸರು ಕಳಿಸಲಿದ್ದಾರೆ. ಇನ್ನೂ ಈ ಡೆತ್​ನೋಟ್ ಯಾವ ಸಂದರ್ಭದಲ್ಲಿ ಬರೆದಿದ್ದು ಎಂದು ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸಲಿದ್ದಾರೆ.

RELATED ARTICLES

Related Articles

TRENDING ARTICLES