ಬೈಕ್​ನಲ್ಲಿ ತೆರಳುತ್ತಿದ್ದ ನವ ಜೋಡಿ ಮೇಲೆ ಭೀಕರ ದಾಳಿ

ಹೈದರಾಬಾದ್​ : ಕೋಮುಗಲಭೆ, ಕೋಮು ಸಂಘರ್ಷದಿಂದ ಹೈರಾಣಾಗಿರುವ ಭಾರತದಲ್ಲಿ ಇದೀಗ ಮತ್ತೊಂದು ಸಂಘರ್ಷಕ್ಕೆ ಹೈದರಾಬಾದ್ ಎಡೆ ಮಾಡಿಕೊಟ್ಟಿದೆ. ಮುಸ್ಲಿಂ ಯುವತಿಯನ್ನು ಮದುವೆಯಾದ ಹಿಂದೂ ಯುವಕನನ್ನು ಬರ್ಬರವಾಗಿ ಹೈತ್ಯೆ ಮಾಡಲಾಗಿದೆ. ನಡು ರಸ್ತೆಯಲ್ಲಿ ಭೀಕರವಾಗಿ ಹಲ್ಲೆ ನಡೆಸಲಾಗಿದೆ.

ಮುಸ್ಲಿಂ ಯುವತಿಯನ್ನು ಮದುವೆಯಾದ ಅನ್ನೋ ಒಂದೇ ಕಾರಣಕ್ಕೆ ಹಿಂದೂ ಯುವಕನ ಹತ್ಯೆ ಮಾಡಲಾಗಿದೆ ಎನ್ನಲಾಗ್ತಿದೆ. ಹತ್ಯೆಯಾದ ಯುವಕನನ್ನು ನಾಗರಾಜು ಎಂದು ಗುರುತಿಸಲಾಗಿದೆ. ಈತನ ಪತ್ನಿ ಸೈಯದ್ ಅಶ್ರಿನ್ ಸುಲ್ತಾನ್. ಮೂರು ತಿಂಗಳ ಹಿಂದೆ ಇವರ ವಿವಾಹ ನಡೆದಿತ್ತು. ಇವರ ಪ್ರೀತಿಗೆ ಯುವತಿ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇಷ್ಟೇ ಅಲ್ಲ ಕೊಲೆ ಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ.

ಮುಸ್ಲಿಂ ಯುವತಿ ಸಂಬಂಧಿಕರು ಈ ದಾಳಿ ನಡೆಸಿದ್ದಾರೆ ಎಂದು ಹೈದರಾಬಾದ್ ಪೊಲೀಸರು ಹೇಳಿದ್ದಾರೆ. ಪತಿಯ ಮೇಲಿನ ದಾಳಿಯನ್ನು ತಡೆಯಲು ಪತ್ನಿ ಯತ್ನಿಸಿದ್ದರೂ ಪ್ರಯೋಜನವಾಗಿಲ್ಲ. ನಡು ರಸ್ತೆಯಲ್ಲೇ ನಾಗರಾಜು ಕೊಲೆಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ದಾಳಿ ವೇಳೆ ಸುತ್ತಲೂ ಜನ ಸೇರಿದ್ದರು. ಆದರೆ ಎಲ್ಲರೂ ಮೊಬೈಲ್ ಮೂಲಕ ದಾಳಿಯ ಚಿತ್ರೀಕರಣ ಮಾಡಿ ಜಾಗ ಖಾಲಿ ಮಾಡಿದ್ದಾರೆ.

ಮದುವೆಯಾದ ಬಳಿಕ ಸುಲ್ತಾನ ತನ್ನ ಹೆಸರನ್ನು ಪಲ್ಲವಿ ಎಂದು ಬದಲಾಸಿಕೊಂಡಿದ್ದಳು. ಸುಲ್ತಾನಾ ಕುಟುಂಬಸ್ಥರು ಯುವಕನಿಗೆ ಮೇಲಿಂದ ಮೇಲೆ ಕೊಲೆ ಬೆದರಿಕೆ ಹಾಕಿದ್ದಾರೆ. ಆಕೆಯಿಂದ ದೂರವಿಲು ಸೂಚಿಸಿದ್ದಾರೆ.

10ನೇ ತರಗತಿಯಿಂದ ಪರಿಚಯಸ್ಥರಾಗಿದ್ದ ನಾಗರಾಜು ಹಾಗೂ ಸುಲ್ತಾನ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಮೂರು ತಿಂಗಳ ಹಿಂದೆ ಮದುವೆಯಾಗಿದ್ದರು. ಆದ್ರೆ, ಬೈಕ್ ಮೂಲಕ ತೆರಳುತ್ತಿದ್ದಾಗ, ಇವರನ್ನು ಅಡ್ಡಗಡ್ಡಿ ನಡು ರಸ್ತೆಯಲ್ಲಿ ದಾಳಿ ಮಾಡಲಾಗಿದೆ.

ಬೈಕ್‌ ಅಡ್ಡಗಟ್ಟಿ ನಾಗರಾಜು ಮೇಲೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ಒಂದೇ ಹೊಡೆತಕ್ಕೆ ನಾಗರಾಜು ಕುಸಿದು ಬಿದ್ದಿದ್ದಾನೆ. ಬಳಿಕ ದುರ್ಷರ್ಮಿಗಳು ಸತತವಾಗಿ ಹಲ್ಲೆ ಮಾಡಿದ್ದಾರೆ. ಮೃತಪಟ್ಟ ಬಳಿಕವೂ ಹಲ್ಲೆ ಮಾಡಿದ್ದಾರೆ. ಸುಲ್ತಾನಾ ಏಕಾಂಗಿಯಾಗಿ ದಾಳಿಕೋರರ ವಿರುದ್ದ ಹೋರಾಡಿದ್ದಾಳೆ. ಆದರೆ ಆಕೆಯ ಹೋರಾಟ ಸಾಕಾಗಲಿಲ್ಲ , ಇತರರಿಂದ ನೆರವೂ ಸಿಗಲಿಲ್ಲ.

ನಾಗರಾಜು ಕೊಲೆಯಾಗುತ್ತಿದ್ದಂತೆ ದುರ್ಷರ್ಮಿಗಳು ಪರಾರಿಯಾಗಿದ್ದಾರೆ. ಅವರನ್ನು ತಡೆಯುವ ಪ್ರಯತ್ನವನ್ನೂ ಮಾಡಿಲ್ಲ. ದುಷರ್ಮಿಗಳು ಪರಾರಿಯಾದ ಬಳಿಕವೂ ನಾಗರಾಜುವನ್ನು ಆಸ್ಪತ್ರೆ ಸೇರಿಸಲು ಜನರು ಹಿಂದೆ ಮುಂದೆ ನೋಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಆರಂಭಿಸಿದ್ದಾರೆ. ಇತ್ತ ಬಿಜೆಪಿ ನಾಯಕರು ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ತಪ್ಪತಸ್ತರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ಆರಂಭಗೊಂಡಿದೆ.

RELATED ARTICLES

Related Articles

TRENDING ARTICLES