ಅಶ್ವತ್ಥನಾರಾಯಣ್ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ..!

ಬೆಂಗಳೂರು : ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಹಿಂದೆ ಕಾಂಗ್ರೆಸ್ ಬಿದ್ದಿದೆ. ಹಲವು ದಿನಗಳಿಂದ ನಿರಂತರವಾಗಿ ಒಂದೊಂದೇ ಮಾಹಿತಿಯ ಹೊರಹಾಕ್ತಿದೆ. ಅದ್ರಲ್ಲೂ ಯಾವಾಗ ಅಶ್ವತ್ಥ ನಾರಾಯಣ ಸಹೋದರನ ಹೆಸರು ಕೇಳಿಬಂತೋ ಆಗಿನಿಂದ ಮತ್ತಷ್ಟು ವಾಯ್ಸ್ ಜೋರು ಮಾಡ್ತಿದೆ. ಅಶ್ವತ್ಥ ನಾರಾಯಣ ರಾಜೀನಾಮೆಗೆ ಆಗ್ರಹಿಸಿದೆ. ಮತ್ತೊಂದು ಕಡೆ ನ್ಯಾಯಾಂಗ ತನಿಖೆ ನಡೆಸುವಂತೆ ಕೈನಾಯಕರು ಸರ್ಕಾರದ ವಿರುದ್ಧ ಪಟ್ಟು ಹಿಡಿದಿದ್ದಾರೆ.

ಇನ್ನು ಪ್ರಿಯಾಂಕ್ ಖರ್ಗೆ ಸಿಐಡಿ ನೊಟೀಸ್ ಜಾರಿ ಮಾಡಿದೆ. ಇದ್ರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಪಕ್ಷದ ವಕ್ತಾರರಾಗಿ ಪ್ರಿಯಾಂಕ್ ಖರ್ಗೆ ಹಗರಣವನ್ನ ಬಹಿರಂಗಮಾಡಿದ್ದಾರೆ. ಸರ್ಕಾರ ತಪ್ಪಿಗೆ ಸಿಲುಕಿದೆ. ಹೀಗಾಗಿ ಮರ್ಯಾದೆ ಉಳಿಸಿಕೊಳ್ಳೋಕೆ ಒಬ್ಬ ದಲಿತ ನಾಯಕನನ್ನ ಟಾರ್ಗೆಟ್ ಮಾಡ್ತಿದೆ ಅಂತ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ.

ಒಟ್ನಲ್ಲಿ ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಶ್ವತ್ಥ ನಾರಾಯಣ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದೆ. ಟಾಕ್ ವಾರ್ ಜೋರಾಗ್ತಾನೆ ಇದೆ. ಇದ್ರ ನಡುವೆ ಅಶ್ವಥ್ ನಾರಾಯಣ್ ಪರ ಇಲ್ಲಿಯವತೆಗೆ ತಟಸ್ಥವಾಗಿದ್ದ ಬಿಜೆಪಿ‌ ನಾಯಕರು ಬೆಂಬಲಕ್ಕೆ ಬಂದಿದ್ದಾರೆ.

RELATED ARTICLES

Related Articles

TRENDING ARTICLES