ಎಲ್ಲೆಡೆ ಸಬ್ ಮರೇನ್, ಗೋಲ್ಡ್, ರಾಕಿಭಾಯ್ದೇ ಹವಾ :
ಕೆಜಿಎಫ್ನಿಂದ ಚಾಪ್ಟರ್-2ಗೆ ಎಲ್ಲಿಲ್ಲದ ಹೈಪ್ ಸಿಕ್ಕಿತಾದ್ರೂ, ಕ್ಲೈಮ್ಯಾಕ್ಸ್ನಲ್ಲಿ ಚಾಪ್ಟರ್- 3 ಹಿಂಟ್ ಕೂಡ ಸಿಕ್ಕಿತು. ಮಾನ್ಸ್ಟರ್ ರಾಕಿಭಾಯ್ ಸತ್ತಿಲ್ಲ, ಎಲ್ ಡೊರಾಡೋ ಕಥೆ ಕೂಡ ಇನ್ನೂ ಮುಗಿದಿಲ್ಲ. ಸಬ್ ಮರೇನ್ ಮೂಲಕ ಎಸ್ಕೇಪ್ ಆಗಿರೋ ಭಾಯಿಜಾನ್ ಮತ್ತೆ ಯುದ್ಧಕ್ಕೆ ಸನ್ನದ್ಧನಾಗ್ತಾನೆ. ಕೆಜಿಎಫ್ ಮೂರನೇ ಭಾಗ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸಿದ್ದು, ಪೋಸ್ಟರ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸಂಚಲನ ಮೂಡಿಸ್ತಿವೆ.

ರಾಕಿ ವಾರ್ಗೆ ಬಿದ್ದಿಲ್ಲ ಫುಲ್ಸ್ಟಾಪ್.. ಸದ್ಯದಲ್ಲೇ ಸರ್ಪ್ರೈಸ್:
ವಿಶ್ವ ಸಿನಿದುನಿಯಾದಲ್ಲಿ ಕೆಜಿಎಫ್- 2ಗೆ ಸಿಕ್ಕ ಅಭೂತಪೂರ್ವ ಯಶಸ್ಸು ಚಾಪ್ಟರ್-3 ಕನಸನ್ನು ಮತ್ತಷ್ಟು ಜೀವಂತವಾಗಿಸಿದೆ. ಇದೊಂದು ದಂತಕಥೆಯಾಗಿ ಇತಿಹಾಸದ ಪುಟಗಳಲ್ಲಿ ರಾರಾಜಿಸ್ತಿದೆ. ಅದ್ರಲ್ಲೂ ಮಾನ್ಸ್ಟರ್ ರಾಕಿಭಾಯ್ ಸ್ವ್ಯಾಗ್ಗೆ ಎಲ್ರೂ ಕ್ಲೀನ್ ಬೋಲ್ಡ್ ಅಗಿಬಿಟ್ಟಿದ್ದಾರೆ. ಅಷ್ಟೊಂದು ಸ್ಟೈಲಿಶ್ ಆಗಿ, ಯುನಿಕ್ ಸ್ಟೈಲು, ಮ್ಯಾನರಿಸಂನಿಂದ ಎಲ್ಲರ ಮನಸ್ಸು ಗೆದ್ದಿದ್ದಾರೆ ರಾಕಿಭಾಯ್ ಯಶ್.
ಪ್ರಧಾನಿ ರಮಿಕಾ ಸೇನ್ ಮಾನ್ಸ್ಟರ್ ರಾಕಿಭಾಯ್ ವಿರುದ್ಧ ಯುದ್ಧ ಸಾರುತ್ತಾರೆ. ಚಿನ್ನವನ್ನು ಹೊತ್ತು ಸಮುದ್ರಮಾರ್ಗದಲ್ಲಿ ವಿದೇಶಕ್ಕೆ ಹೊರಟು ನಿಂತಿದ್ದ ರಾಕಿ ಮೇಲೆ ಇನ್ನಿಲ್ಲದೆ ದಾಳಿ ಮಾಡ್ತಾರೆ. ಆಗ ನೀರಿನಾಳಕ್ಕೆ ಜಾರೋ ರಾಕಿಯ ದೇಹ ಹಾಗೂ ಫಳಫಳನೆ ಹೊಳೆಯೋ ಚಿನ್ನದ ಬಿಸ್ಕೆಟ್ಗಳನ್ನ ತೋರಿಸುತ್ತಾ ಚಾಪ್ಟರ್- 3 ಹಿಂಟ್ ನೀಡ್ತಾರೆ ಮೇಕರ್ಸ್.

ಹಿಸ್ಟರಿ ಕ್ರಿಯೇಟ್ ಆಯ್ತು.. ಆದ್ರೆ ಡೆಸ್ಟಿನಿ ಇನ್ನೂ ಬಾಕಿಯಿದೆ :
ಅಲ್ಲಿಗೆ ರಾಕಿಭಾಯ್ ಯುಗಾಂತ್ಯವಾಗಿಲ್ಲ. ಎಲ್ ಡೊರಾಡೋ ಕಥೆಯೂ ಮುಗಿದಿಲ್ಲ. ಅದಿನ್ನೂ ಮುಂದುವರೆಯಲಿದೆ ಅನ್ನೋದ್ರ ಸೂಚನೆ ಆಗಿದೆ. ಸಬ್ ಮರೇನ್ ಮುಖೇನ ರಾಕಿಭಾಯ್ ಚಿನ್ನದ ಸಮೇತ ವಿದೇಶಕ್ಕೆ ಎಸ್ಕೇಪ್ ಆಗ್ತಾರೆ. ರಾಕಿ ವರ್ಚಸ್ಸು ದುನಿಯಾದಲ್ಲಿ ಎಷ್ಟರ ಮಟ್ಟಿಗೆ ಇರಲಿದೆ ಅನ್ನೋದನ್ನ ಚಾಪ್ಟರ್-2ನಲ್ಲೇ ಡೈರೆಕ್ಟರ್ ನೀಲ್ ತೋರಿಸಿದ್ರು. ಇನ್ನು ಅಷ್ಟು ದೊಡ್ಡ ವ್ಯಕ್ತಿ ಸಬ್ ಮರೇನ್ನಿಂದ ತಪ್ಪಿಸಿಕೊಳ್ಳೋದ್ರಲ್ಲಿ ಅಚ್ಚರಿಯಿಲ್ಲ.
ಸದ್ಯ ಕೆಜಿಎಫ್ ಚಾಪ್ಟರ್-3 ಕುರಿತ ಪೋಸ್ಟರ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿವೆ. ಆದ್ರೆ ಇದ್ಯಾವ ಪೋಸ್ಟರ್ ಕೂಡ ಚಿತ್ರತಂಡ ರಿವೀಲ್ ಮಾಡಿರೋ ಅಧಿಕೃತ ಫಸ್ಟ್ಲುಕ್ ಪೋಸ್ಟರ್ಗಳಲ್ಲ. ಕೆಜಿಎಫ್ ಹಾಗೂ ಯಶ್ ಅಭಿಮಾನಿಗಳೇ ತರಹೇವಾರಿ ಪೋಸ್ಟರ್ಗಳನ್ನ ಡಿಸೈನ್ ಮಾಡಿ ಅಪ್ಲೋಡ್ ಮಾಡ್ತಿದ್ದಾರೆ.
ಇವು ನಿಜಕ್ಕೂ ಸಖತ್ ಕ್ರಿಯೇಟೀವ್ ಆಗಿದ್ದು, ಬಹುಶಃ ಚಿತ್ರತಂಡ ಕೂಡ ಈ ಪೋಸ್ಟರ್ಗಳನ್ನ ರೆಫರೆನ್ಸ್ ಆಗಿ ಬಳಸಿಕೊಂಡು ಚಾಪ್ಟರ್- 3 ಫಸ್ಟ್ ಲುಕ್ ಡಿಸೈನ್ ಮಾಡಬಹುದು. ಒಟ್ಟಾರೆ ಕೆಜಿಎಫ್- 3 ನೀರಿನಿಂದಲೇ ಶುರುವಾಗಲಿದೆ ಅನ್ನೋದು ಪಕ್ಕಾ ಆಗಿದೆ. ಮೂಲಗಳ ಪ್ರಕಾರ ಯಶ್ ಅವ್ರು ಹೊಸ ಸಿನಿಮಾ ಮಾಡೋಕೂ ಮುನ್ನ ಕೆಜಿಎಫ್ ಫ್ರಾಂಚೈಸ್ನ ಮತ್ತೊಂದು ಸಿನಿಮಾ ಮಾಡಿ ಬಿಡ್ತಾರೆ ಎನ್ನಲಾಗ್ತಿದೆ.

ಈ ಮಾಹಿತಿ ನಿಜವಾದ್ರೆ ಈ ಬಾರಿಯ ಮೇಕಿಂಗ್ ಹಾಲಿವುಡ್ ಸಿನಿಮಾಗಳನ್ನ ಮೀರಿಸೋ ರೇಂಜ್ಗಿರಲಿದೆ. ಬಜೆಟ್ ಕೂಡ ದುಬಾರಿ ಆಗಲಿದ್ದು, ಬಾಕ್ಸ್ ಆಫೀಸ್ ಲೆಕ್ಕಾಚಾರಗಳು ಸಹ ಡಬಲ್ ಆಗಲಿವೆ. ಕ್ರಿಯೇಟರ್ ನೀಲ್ ಹಾಗೂ ಯಶ್ ಅವ್ರು ಸಿನಿಮಾದಲ್ಲಿ ಸಾಕಷ್ಟು ಸೀಕ್ವೆನ್ಸ್ಗಳನ್ನ ಮಾಡಲಾಗಲಿಲ್ಲವಂತೆ. ಅವೆಲ್ಲವುಗಳನ್ನ ಚಾಪ್ಟರ್-3ನಲ್ಲಿ ಮಾಡಲು ಯೋಜನೆ ರೂಪಿಸಿದ್ದಾರೆ ಅನ್ನೋದು ಪಕ್ಕಾ ಆಗಿದೆ.
ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ಪೈಸಾ ವಸೂಲ್ನೊಂದಿಗೆ ತೂಫಾನ್ ಆಗಿ ಮುನ್ನುಗ್ಗುತ್ತಿರೋ ರಾಕಿ- ಅಧೀರ, ನೋಡುಗರ ಜೊತೆ ಫಿಲ್ಮ್ ಮೇಕರ್ಗಳ ನಿದ್ದೆ ಕೆಡಿಸಿದ್ದಾರೆ. ಚಾಪ್ಟರ್-3 ಭಾರತೀಯ ಚಿತ್ರರಂಗದ ಮಟ್ಟಿಗೆ ಮತ್ತೊಂದು ಅತ್ಯದ್ಭುತ ಅಧ್ಯಾಯವಾಗಲಿದ್ದು, ಅದರ ಅನೌನ್ಸ್ಮೆಂಟ್ಗೆ ಎಲ್ರೂ ಕಾತರರಾಗಿದ್ದಾರೆ. ಸದ್ಯದಲ್ಲೇ ಬಿಗ್ ನ್ಯೂಸ್ನೊಂದಿಗೆ ಟೀಂ ಕೆಜಿಎಫ್ ಸರ್ಪ್ರೈಸ್ ಕೊಡಲಿದೆ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ


