ಮಂಗಳೂರು: ಒಂದು ಕಾಲದಲ್ಲಿ ಮಂಗಳವಾರ ನಗರ ಮಧ್ಯೆ ಕೊಳೆತು ನಾರುತ್ತಿದ್ದ, ಐತಿಹಾಸಿಕ ಗುಜ್ಜರಕೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಹೂಳು ತುಂಬಿ ಅಭಿವೃದ್ಧಿ ನೆನೆಗುದಿಗೆ ಬಿದ್ದಿತ್ತು.ಹಲವಾರು ವರ್ಷಗಳ ಹೋರಾಟದ ಬಳಿಕ ಸ್ಮಾರ್ಟ್ ಸಿಟಿ ಯೋಜನೆ ಮೂಲಕ ಕೆರೆ ಪುನರ್ ಅಭಿವೃದ್ಧಿಗೊಂಡು ಸುಂದರಗೊಂಡಿತ್ತು.ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿಯೂ, ವಾಯುವಿಹಾರಿಗಳಿಗೆ ನೆಚ್ಚಿನ ತಾಣವಾಗಿ ಮಾರ್ಪಾಡಾಗಿತ್ತು.ಸುಮಾರು ವರ್ಷಗಳಿಂದ ಕೊಳಚೆ ನೀರು ಕೆರೆಗೆ ಹರಿಯುತ್ತಿದ್ದರಿಂದ ನಗರದ ಫಿಶರೀಶ್ ಕಾಲೇಜಿನ ಪ್ರಯೋಗಾಲಯಕ್ಕೆ ನೀರಿನ ಸ್ಯಾಂಪಲ್ ಕಳುಹಿಸಲಾಗಿತ್ತು.ಸದ್ಯ ಲ್ಯಾಬ್ನಿಂದ ನೀರಿನ ಶುದ್ಧತೆ ಬಗ್ಗೆ ವರದಿ ಬಂದಿದ್ದು,ಕೆರೆಯಲ್ಲಿ ಬ್ಯಾಕ್ಟೀರಿಯಾ ಅಂಶ ಇರುವುದು ಪತ್ತೆಯಾಗಿದೆ.
ಕೊಳಚೆ ನೀರು ನಿರಂತರ ಕೆರೆಗೆ ಹರಿಯುತ್ತಲೇ ಇದೆ. ಈ ಸಂಪರ್ಕ ಕೊಂಡಿಯನ್ನು ಸ್ಥಗಿತಗೊಳಿಸುವ ಕಾರ್ಯ ಪಾಲಿಕೆಯಿಂದ ಆಗಬೇಕಿದ್ದು,ಪಾಲಿಕೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುವುದು ಅತ್ಯವಶ್ಯಕ.ಇನ್ನು ಮಳೆಗಾಲ ಸಮೀಪಿಸುತ್ತಿದ್ದು ಕೆರೆಯ ಪರಿಸರದಲ್ಲಿ ಸೊಳ್ಳೆ, ಮಲೇರಿಯಾ ಹೆಚ್ಚಾಗುವ ಸಾಧ್ಯತೆಯಿದೆ. ಕೆರೆಯ ಅಭಿವೃದ್ಧಿಗೆ ಕೋಟಿ ಕೋಟಿ ಬಿಡುಗಡೆಯಾದರೂ ಸರಿಯಾಗಿ ಒಳ ಚರಂಡಿ ವ್ಯವಸ್ಥೆ ಇಲ್ಲದಿರುವುದು ದುರಂತ. ಈ ಬಗ್ಗೆ ಜನಪ್ರತಿನಿಧಿಗಳು ಬೇರೆನೋ ಹೇಳ್ತಾರೆ. ಒಟ್ಟಿನಲ್ಲಿ ಕೆರೆ ಅಭಿವೃದ್ಧಿಯಾದರೂ ಜನರ ಬಳಕೆಗೆ ಯೋಗ್ಯವಾಗದೆ ಇರುವುದು ವಿಪರ್ಯಾಸ.


